ತುಂಬಿ ಹರಿದ ನೇತ್ರಾವತಿ; ಹಲವು ಕಡೆ ಜಲಾವೃತ, ಸಂಪರ್ಕ ಕಡಿತ


Team Udayavani, Aug 10, 2018, 10:43 AM IST

908kdb-nere-3.jpg

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಕಡೆ ಗುರುವಾರ ಭಾರೀ ಮಳೆಯಾಗಿದೆ. ಇದರ ಜತೆ ಶಿರಾಡಿ ಮತ್ತು ಚಾರ್ಮಾಡಿ ಘಟ್ಟ ಪ್ರದೇಶಗಳಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಸುರಿದ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ದಿಢೀರ್‌ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. 
ಪ್ರವಾಹ ರೀತಿಯಲ್ಲಿ ನೀರು ಹರಿದು ಬಂದ ಕಾರಣ ಜಿಲ್ಲೆಯ ಜೀವನದಿ ಗಳಾದ ನೇತ್ರಾವತಿ- ಕುಮಾರಧಾರಾ ಮೈದುಂಬಿ ಹರಿದಿದ್ದು, ಗುರುವಾರ ಅಪಾಯದ ಮಟ್ಟದಲ್ಲಿ ಹರಿದವು. ಇದ ರಿಂದಾಗಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ, ಉದನೆ, ನೇಲ್ಯಡ್ಕ, ಅಡ್ಡಹೊಳೆಯಲ್ಲಿ ಹೆದ್ದಾರಿಗೆ ನೀರು ನುಗ್ಗಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಶಿರಾಡಿ ಸುತ್ತಮುತ್ತಲಿನ ಮನೆಗಳು ಜಲಾವೃತವಾಗಿದ್ದವು. ಶಿಶಿಲದ ಶಿಶಿಲೇಶ್ವರ ದೇವಾಲಯ ಸಂಪೂರ್ಣ ಜಲಾ ವೃತಗೊಂಡಿದ್ದು, ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. 

ಉಪ್ಪಿನಂಗಡಿ ಸಮೀಪದ ಹೊಸಮಠದಲ್ಲಿ ಮುಳುಗು ಸೇತುವೆಯ ಸನಿಹ ನಿರ್ಮಾಣ ಹಂತದಲ್ಲಿದ್ದ ಹೊಸ ಸೇತುವೆಯ ಮಟ್ಟಕ್ಕೂ ನೆರೆ ನೀರು ಏರಿದ್ದು, ಮುಳುಗಡೆಯ ಭೀತಿ ಎದುರಾಯಿತು. ಪ್ರವಾಹದಿಂದ ಧರ್ಮಸ್ಥಳ, ನಿಡಿಗಲ್‌ ಭಾಗದಲ್ಲಿ ನೇತ್ರಾವತಿ ನದಿ ಸೇರಿದಂತೆ ಇತರ ಸಣ್ಣ ಪುಟ್ಟ ನದಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟ ಸೇರಿದಂತೆ ಸುತ್ತಮುತ್ತಲ ಪ್ರದೇಶ ಜಲಾವೃತಗೊಂಡಿತ್ತು.

 ನೇತ್ರಾವತಿ: ದಿಢೀರ್‌ ನೆರೆ ಏರಿಕೆ
 ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಗುರುವಾರ ದಿಢೀರ್‌ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ತಗ್ಗು ಪ್ರದೇಶ ಗಳು ಮುಳುಗಡೆಯಾಗಿವೆ. ಪರಿಹಾರ ಕಾರ್ಯಾಚರಣೆಗೆ ಇಳಿದ ಅಗ್ನಿಶಾಮಕ ದಳ ಹಲವು ಮನೆಗಳಿಂದ ಸಾಮಗ್ರಿ ಸಹಿತ ಮನೆಮಂದಿಯನ್ನು ತೆರವು ಮಾಡಿದೆ. ಬಂಟ್ವಾಳ ರಾಯರ ಚಾವಡಿ, ಜಕ್ರಿಬೆಟ್ಟು, ಬಸ್ತಿಪಡು³, ಕಂಚುಗಾರ ಪೇಟೆ, ಆಲಡ್ಕಪಡು³ ತಗ್ಗು ಪ್ರದೇಶದ ರಸ್ತೆಗಳ ಮೇಲೆ ನೀರು ನುಗ್ಗಿತ್ತು. ಸಂಚಾರ ಅಡಚಣೆ ಎದುರಾಗಿತ್ತು. 
ಆಲಡ್ಕಪಡು ಪ್ರದೇಶದಲ್ಲಿದ್ದ ಹಲವು ಮನೆಗಳು ನೀರಾವೃತವಾಗಿದ್ದು, ಹಗಲು ಹೊತ್ತಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡರು. ನೀರು ಆವರಿಸುವ ಮುನ್ಸೂಚನೆ ಸಿಗುತ್ತಿದ್ದಂತೆ ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಸಿಬಂದಿ ಕಾರ್ಯಾ ಚರಣೆ  ನಡೆಸಿ ಹಲವರನ್ನು ಅಪಾಯ ಸ್ಥಳದಿಂದ ತೆರವು ಮಾಡಿದರು.

ಅಪಾಯ ಸೂಚನೆ
ಶಂಭೂರು ಎಎಂಆರ್‌ ಡ್ಯಾಂ ನಿರ್ವಾ ಹಕರು ಬೆಳಗ್ಗೆ 11 ಗಂಟೆಗೆ ನೀರ ಹರಿವು ಹೆಚ್ಚಳ ಆಗುತ್ತಿದ್ದಂತೆ ಎಚ್ಚರಿಕೆಯ ಸೈರನ್‌ ಮೊಳಗಿಸಿದ್ದರು. ತಾಲೂಕು ಕಚೇರಿಗೂ ಮಾಹಿತಿ ನೀಡುವ ಮೂಲಕ ಸುರಕ್ಷಾ ಕ್ರಮಗಳನ್ನು ಅನುಸರಿಸಿದರು. ತುಂಬೆ ಡ್ಯಾಂ ಎಲ್ಲ ಬಾಗಿಲುಗಳನ್ನು ಪೂರ್ಣ ಮಟ್ಟಕ್ಕೆ ಎತ್ತರಿಸಿ ನೀರು ಹರಿದು ಹೋಗುವ ವ್ಯವಸ್ಥೆಯನ್ನು ಮಾಡಲಾಗಿತ್ತು.

ಹೊಸಮಠ: ನಿರ್ಮಾಣ ಹಂತದ ಸೇತುವೆಗೂ ಮುಳುಗಡೆ ಭೀತಿ
ಕಡಬ:
ಮಳೆಗಾಲದಲ್ಲಿ ಮುಳುಗಡೆ ಯಾಗಿ ರಸ್ತೆ ಸಂಚಾರಕ್ಕೆ ತೊಡಕಾಗು ತ್ತಿರುವ ಹೊಸಮಠದ ಹಳೆಯ ಮುಳುಗು ಸೇತುವೆಯ ಬದಲಿಗೆ ಹೆಚ್ಚು ಎತ್ತರದ ನೂತನ ಸೇತುವೆ ನಿರ್ಮಾಣ ವಾಗುತ್ತಿದೆ. ಆದರೆ ಆ ಸೇತುವೆಯ ಮಟ್ಟಕ್ಕೂ ನೆರೆ ನೀರು ಏರಿದ್ದು, ಗುರುವಾರ ಹೊಸ ಸೇತುವೆಗೂ ಮುಳುಗಡೆಯ ಭೀತಿ ಎದುರಾಯಿತು.

ಮುಳುಗಿದ ವಿದ್ಯುತ್‌ ಲೈನ್‌
ಹೊಸಮಠ ಸೇತುವೆಯ ಪಕ್ಕದಲ್ಲಿ ಹೊಳೆಯನ್ನು ಹಾದು ಹೋಗುತ್ತಿರುವ ಆಲಂಕಾರು ಫೀಡರ್‌ನ 11 ಕೆ.ವಿ. ವಿದ್ಯುತ್‌ ಲೈನ್‌ ಹಾಗೂ 33 ಕೆ.ವಿ. ವಿದ್ಯುತ್‌ ಲೈನ್‌ಗೆ ನೆರೆಯಿಂದ ಹಾನಿಯಾಗಿದೆ. 11 ಕೆ.ವಿ. ವಿದ್ಯುತ್‌ ಲೈನ್‌ನ ತಂತಿಗಳು ನೀರಿನಲ್ಲಿ ಮುಳುಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ನೀರಿನಲ್ಲಿ ತೇಲಿಬಂದ ಮರದ ಕೊಂಬೆಗಳು ತಂತಿಗೆ ಸಿಲುಕಿ ವಿದ್ಯುತ್‌ ಕಂಬಗಳು ವಾಲಿಕೊಂಡು ಹಾನಿಗೊಳಗಾಗಿವೆ. ಸುದ್ದಿ ತಿಳಿದು ಕಡಬ ಮೆಸ್ಕಾಂ ಅಧಿಕಾರಿ ಗಳಾದ ಸತ್ಯನಾರಾಯಣ ಹಾಗೂ ಸಜಿಕುಮಾರ್‌ ಅವರು ತಮ್ಮ ಸಿಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ.

ಧರ್ಮಸ್ಥಳ ಸುತ್ತಮುತ್ತ ಜಲಾವೃತ

ಬೆಳ್ತಂಗಡಿ: ಧರ್ಮಸ್ಥಳ, ನಿಡಿಗಲ್‌ ಭಾಗದಲ್ಲಿ ನೇತ್ರಾವತಿ ನದಿ, ಇತರ ಸಣ್ಣ ಪುಟ್ಟ ನದಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟ ಸಹಿತ ಸುತ್ತಮುತ್ತಲ ಪ್ರದೇಶ ಜಲಾವೃತಗೊಂಡ ಘಟನೆ ಗುರುವಾರ ನಡೆದಿದೆ. ಪ್ರವಾಹದ ನೀರು ಹರಿದು ನೆರಿಯ, ಮುಂಡಾಜೆ, ನಿಡಿಗಲ…, ತೋಟತ್ತಾಡಿ ಪ್ರದೇಶ ಜಲಾವೃತಗೊಂಡಿತ್ತು. ಘಟ್ಟ ಪ್ರದೇಶದಲ್ಲಿ ಆ. 8ರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಭಾರೀ ಮಳೆಯಾದ ಕಾರಣ ಪ್ರವಾಹದ ಸ್ಥಿತಿ ಉಂಟಾಗಿತ್ತು.
ಧರ್ಮಸ್ಥಳ- ಮುಂಡಾಜೆ ರಸ್ತೆಯ ಪಿಲತ್ತಡ್ಕ ಬಳಿ ಭೂಕುಸಿತ ಉಂಟಾಗಿತ್ತು. ನೆರಿಯ-ಕಕ್ಕಿಂಜೆ ರಸ್ತೆ  ಗುಡ್ಡ ಕುಸಿತದಿಂದ ಸಂಚಾರ ಕಡಿತಗೊಂಡಿತ್ತು. 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.