ಮತದಾನ ಜಾಗೃತಿಗೆ ಕಡಲ ತೀರದಲ್ಲಿ ಮಾನವ ಸರಪಳಿ


Team Udayavani, Apr 8, 2019, 4:03 PM IST

sudina-2
ಮಹಾನಗರ: ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಕರಾವಳಿ ಕಡಲ ತೀರದಾದ್ಯಂತ “ಪ್ರಜಾ ಸಂಗಮ’ ಎಂಬ ಮತದಾನ ಜಾಗೃತಿ ಮಾನವ ಸರ ಪಳಿ ಕಾರ್ಯಕ್ರಮವನ್ನು ರವಿವಾರ ಆಯೋಜಿಸಲಾಗಿತ್ತು.
ಜಿಲ್ಲೆಯ ತಲಪಾಡಿ ಕಡಲ ತೀರದಿಂದ ಉಳ್ಳಾಲ, ಬೆಂಗ್ರೆ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್‌, ಸಸಿಹಿತ್ಲು ಕಡಲ
ತೀರದವರೆಗೆ 42 ಕಿ.ಮೀ. ವರೆಗೆ ನಡೆದ ಮಾನವ ಸರಪಣಿಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದು ವಿಶೇಷ.
ಮತದಾನ ಜಾಗೃತಿಯ ಅಂಗವಾಗಿ ಪ್ರಹಸನ, ಹಾಡು, ಗಾಳಿಪಟ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು
ಆಯೋಜಿಸಲಾಗಿತ್ತು.
ನಗರದ ಬೆಂಗ್ರೆಯಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌
ಮಾತನಾಡಿ, ಚುನಾವಣೆ ಪ್ರತಿಯೊಬ್ಬರ ಹಕ್ಕು. ಮತದಾನವನ್ನು ಸಂಭ್ರಮಿಸಿ, ಪ್ರತಿಯೊಬ್ಬರೂ ಮತ ಹಾಕಬೇಕು. ಕಡಲ ತೀರದಲ್ಲಿ ಸಹಸ್ರಾರು ಮಂದಿ ಸೇರಿಸಿ ಕಾರ್ಯಕ್ರಮ ಆಯೋಜಿಸಬೇಕು ಎಂಬ ಕನಸ ನನಗಿತ್ತು. ಇದೀಗ ಈಡೇರಿದೆ. ಬೆಂಗ್ರೆ ಕಡಲ ತೀರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ಅಭಿವೃದ್ಧಿಗೆ ಮತ ನೀಡಿ ರಾಜ್ಯ ಯುವ ಸಮಿತಿಯ ರಾಯಭಾರಿ, ಬಹುಮುಖ ಪ್ರತಿಭೆ ಶಬರಿ ಗಾಣಿಗ ಮಾತನಾಡಿ, ಯುವ ಜನಾಂಗ ದೇಶದ ಅಭಿವೃದ್ಧಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ಎಂದು ಹೇಳಿದರು. ಇದೇ ವೇಳೆ ದ.ಕ. ಜಿಲ್ಲಾ ಪಂಚಾಯತ್‌ ಸಿಇಒ ಡಾ| ಆರ್‌. ಸೆಲ್ವಮಣಿ, ಪಣಂಬೂರು ಬೀಚ್‌ ಅಭಿವೃದ್ಧಿ ನಿಗಮದ ಸಿಇಒ ಯತೀಶ್‌ ಬೈಕಂಪಾಡಿ ಸೇರಿದಂತೆ ಮತ್ತಿತರರು ಇದ್ದರು.
ಸಸಿಹಿತ್ಲು: ಮಾನವ ಸರಪಳಿ ನಿರ್ಮಿಸಿ ಜಾಗೃತಿ
 ಸಸಿಹಿತ್ಲು: ಮತದಾನ ಜಾಗೃತಿಗಾಗಿ ಸಸಿ ಹಿತ್ಲು ಬೀಚ್‌ನಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮಾನವ ಸರ ಪಳಿ ನಿರ್ಮಿಸಿ
ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘು, ನೆಹರೂ ಯುವ ಕೇಂದ್ರದ ರಘುವೀರ ಸೂಟರ್‌ಪೇಟೆ, ಹಾಗೂ ಮೂಲ್ಕಿ ಹೋಬಳಿಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು,ಕಂದಾಯ ಇಲಾಖೆಯ ಸಿಬಂದಿಗಳು ಪಂಚಾಯತ್‌ ಸಿಬಂದಿಗಳು ಸಸಿಹಿತ್ಲು ವಿನಿಂದ ಸುರತ್ಕಲ್‌ ಹೊರಗೆ 14 ಕಿಲೋಮೀಟರ್‌ ವ್ಯಾಪ್ತಿಯಲ್ಲಿ 14ಸಾವಿರ ಮಂದಿ ಭಾಗವಹಿಸಿದ್ದರು.
ಉಳ್ಳಾಲದಲ್ಲಿ ಮರಳು ಶಿಲ್ಪ ರಚನೆ, ವಿವಿಧ ಸ್ಪರ್ಧೆ
ಉಳ್ಳಾಲ: ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ಹಾಗೂ ಉಳ್ಳಾಲ ನಗರಸಭೆ ವತಿಯಿಂದ ಎ. 18ರಂದು “ತಪ್ಪದೇ
ಮತದಾನ ಮಾಡ ಬನ್ನಿ’ ಎನ್ನುವ ಘೋಷ ವಾಕ್ಯದಡಿ ಉಳ್ಳಾಲದ ಸಮುದ್ರ ತೀರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಳೊಂದಿಗೆ ಮತಾದನ ಜಾಗೃತಿ ಕುರಿತ ಹಬ್ಬ ನಡೆಯಿತು.
ಕಿನ್ಯಾ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಲದ ಆಶ್ರಯದಲ್ಲಿ ಮತದಾನ ಜಾಗೃತಿಯ ಯಕ್ಷಗಾನ, ಕಲಾವಿದ ಜಯಪ್ರಕಾಶ್‌ ಆಚಾರ್ಯ ಅವರ ನೇತೃತ್ವದ ಸ್ಥಳೀಯ ಸ್ಪರ್ಶ ಕಲಾವಿದರಿಂದ ಮರಳು ಶಿಲ್ಪಕಲೆ, ಉಳ್ಳಾಲ ಕಡಲ ಕಿನಾರೆಯಲ್ಲಿ ಬಲೆ ಬೀಸಿ ಮೀನು ಹಿಡಿಯುವ ಸ್ಪರ್ಧೆ, ರೋಷನಿ ನಿಲಯ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವತ್ಛತೆ ಜಾಗೃತಿಗಾಗಿ ಬೀದಿ ನಾಟಕ ಹಾಗೂ ಉಳ್ಳಾಲದಿಂದ ಮುಕ್ಕಚ್ಚೇರಿವರೆಗಿನ ಸಮುದ್ರ ತೀರದಲ್ಲಿ ಸಾರ್ವಜನಿಕರಿಂದ ಮಾನವ ಸರಪಳಿ ನಡೆಯಿತು.
ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಸ್ವತ್ಛತಾ ರಾಯಭಾರಿ ಶೀನ ಶೆಟ್ಟಿ, ನಗರಸಭೆ ಆಯುಕ್ತ ಶ್ರೀನಿವಾಸ ಮೂರ್ತಿ, ಮೊಗವೀರ ಮುಖಂಡರಾದ ದಯಾನಂದ, ಮನೋಜ್‌ ಸಾಲ್ಯಾನ್‌, ವಾಸುದೇವ ರಾವ್‌ ಉಪಸ್ಥಿತರಿದ್ದರು. ಉಳ್ಳಾಲ ಪೊಲೀಸರು, ಕರಾವಳಿ ಕಾವಲು ಪೊಲೀಸ್‌ ಹಾಗೂ ಕರಾವಳಿ ನಿಯಂತ್ರಣ ದಳದ ಸಿಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.