ಮಂಗಳೂರು: ತಂದೆಯಿಂದಲೇ ಮಗನ ಮೇಲೆ ಫೈರಿಂಗ್
Team Udayavani, Oct 5, 2021, 5:33 PM IST
ಮಂಗಳೂರು: ಅಪ್ಪನಿಂದಲೇ ಮಗನ ಮೇಲೆ ಫೈರಿಂಗ್ ನಡೆದ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿ ಸಂಭವಿಸಿದೆ.
ಮೋರ್ಗನ್ಸ್ ಗೇಟ್ ಬಳಿ ಅಪ್ಪನಿಂದಲೇ ಮಗನ ಮೇಲೆ ಶೂಟೌಟ್ ನಡೆದಿದೆ. ಬಾಲಕ ಸುಧೀಂದ್ರ (14) ತಲೆಗೆ ಗುಂಡು ತಗುಲಿದೆ ಎನ್ನಲಾಗಿದ್ದು, ಗಂಭೀರ ಗಾಯಗೊಂಡಿದ್ದಾನೆ.
ಉದ್ಯಮಿಯ ಕಚೇರಿಯಲ್ಲಿ ಘಟನೆ ನಡೆದಿದ್ದು ಕೆಲಸಗಾರರ ನಡುವಿನ ಗೊಂದಲದ ವೇಳೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಕುರತು ಪ್ರತಿಕ್ರಿಯೆ ನೀಡಿದ ಕಮಿಷನರ್, ಯಾರು ಗುಂಡು ಹಾರಿಸಿದ್ದಾರೆಂದು ಈಗಲೇ ಸ್ಪಷ್ಟವಾಗಿ ಹೇಳಲಾಗದು. ಸಿಸಿ ಕೆಮರಾ ದೃಶ್ಯ ಪರಿಶಿಲಿಸಲಾಗುವುದು. ಗುಂಡು ಎಡಗಣ್ಣಿನ ಭಾಗದಿಂದ 7-8 ಇಂಚು ಒಳಗೆ ಹೋಗಿದೆ. ಗಾಯಾಳು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದಾನೆ. ಎರಡು ರೌಂಡ್ ಗುಂಡು ಹಾರಾಟವಾಗಿದೆ ಎಂದು ಅವರು ಹೇಳಿದರು.
ಘಟನಾ ಸ್ಥಳಕ್ಕೆ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ