Udayavni Special

ಭಲೇ ಮಜಾ ಕೊಡುವ ವಿಆರ್‌ ಗೇಮ್ಸ್‌


Team Udayavani, May 11, 2018, 3:52 PM IST

11-May-19.jpg

ಇಡೀ ಜಗತ್ತು ಈಗ ಕಲ್ಪನೆಗಳಲ್ಲೇ ತೇಲುವ ಕಾಲ. ಕಂಪ್ಯೂಟರ್‌ ಗೇಮಿಂಗ್‌ ಅಂತೂ ದಶಕಗಳಷ್ಟು ಮುಂದೆ ಹೋಗಿದ್ದು, ಚಿತ್ರವಿಚಿತ್ರ ಆಟಗಳು ಯುವ ಜನತೆಯನ್ನು, ಮಕ್ಕಳನ್ನು ಆವರಿಸಿಕೊಂಡಿದೆ. ಇದರಲ್ಲಿ ಅತಿ ಹೆಚ್ಚು ಹೆಸರು ಮಾಡಿರುವುದು ವರ್ಚುವಲ್‌ ರಿಯಾಲಿಟಿ ಗೇಮಿಂಗ್‌ ಅರ್ಥಾತ್‌ ಕಲ್ಪನಾ ವಾಸ್ತವದ ಆಟಗಳು! ಇಲ್ಲಿ 3ಡಿ ತಂತ್ರಜ್ಞಾನದ ನೆರವಿನಿಂದ ಆಟಗಳನ್ನು ಆಡಲಾಗುತ್ತದೆ. ವರ್ಚುವಲ್‌ ಪರಿಸರಗಳನ್ನು ಸಾಫ್ಟ್ವೇರ್‌ ನೆರವಿನಿಂದ, ಕಂಪ್ಯೂಟರ್‌ ಗ್ರಾಫಿಕ್ಸ್‌ಗಳ ಮೂಲಕ ಉಂಟುಮಾಡಿ 360 ಕೋನದಲ್ಲಿ ತೋರಿಸಿ ಆಟ ಆಡಲಾಗುತ್ತದೆ. ಜಗತ್ತಿನಾದ್ಯಂತ ಇಂತಹ ಆಟಗಳ ಮೇಲೆ ಜನ ಮುಗಿಬಿದ್ದಿದ್ದಾರೆ!

ವಿಆರ್‌ ಗೇಮ್‌ ಎಂಬ ಮಾಯಾಲೋಕ
ವಿಆರ್‌ ಗೇಮ್‌ ಅಂದರೆ ಭಲೇ ಮಜಾ! ಈ ವಿಆರ್‌ ಗೇಮ್‌ ಆಡಲು ಒಂದು ಹೆಡ್‌ಮೌಂಟೆಡ್‌ ಡಿಸ್‌ಪ್ಲೇ ಅನ್ನು ತಲೆಗೆ ಹಾಕಿಕೊಳ್ಳಬೇಕು. ಇದು ಕಣ್ಣಿಗೂ ತಲೆಗೂ ಆವರಿಸಿಕೊಳ್ಳುತ್ತದೆ. ಮೊಬೈಲ್‌, ಕಂಪ್ಯೂಟರ್‌ ಮೂಲಕ ಗೇಮ್‌ ಚಾಲೂ ಮಾಡಿ ಜಾಯ್‌ ಸ್ಟಿಕ್‌ ಮೂಲಕ ಆಟ ಆಡಲಾಗುತ್ತದೆ. ಇದು 3ಡಿ ಕಾಣುತ್ತಾದ್ದರಿಂದ 360 ಕೋನದಲ್ಲಿ ಆಟಗಾರನಿಗೆ ಹೊಸ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಅಷ್ಟಕ್ಕೇ ಆಟಗಾರ ವಾಸ್ತವ ಮರೆತೇ ಬಿಡುವಂತೆ ಆಗುತ್ತದೆ! 

ಹುಚ್ಚಿಗೆ ಕಿಚ್ಚು!
ಈಗಿನ ಮಕ್ಕಳು, ಯುವಕರಂತೂ ವಿಆರ್‌ ಗೇಮ್ಸ್‌ ಅಂದೆ ಹುಚ್ಚು ಹಿಡಿವಂತೆ ಆಡುತ್ತಾರೆ. ಒಂದು ಬಾರಿ ಆಟದೊಳಗೆ ಹೊಕ್ಕರೆ ಸಾಕು, ಹೊರಬರುವದೇ ಬೇಡವೆನ್ನುವಷ್ಟು ಸ್ಟಿಮ್ಯುಲೇಟರ್‌ ವರ್ಲ್ಡ್ ಹುಚ್ಚು ಹಿಡಿಸುತ್ತದೆ. ಅಡ್ವೆಂಚರ್‌, ರೇಸ್‌, ಶೂಟಿಂಗ್‌, ಸ್ಪೇಸ್‌ ಫ್ಲೈಯಿಂಗ್‌, ವಾರ್‌ ಗೇಮ್ಸ್‌, ಇತ್ಯಾದಿ ನೂರಾರು ಗೇಮ್ಸ್‌ಗಳು ಅತಿಪ್ರಿಯವಾಗಿವೆ.

ವಿಶಿಷ್ಟ ಅನುಭವ
ವಿಆರ್‌ ಗೇಮ್ಸ್‌ ಸ್ಟಿಮ್ಯುಲೇಟೆಡ್‌ ಪ್ರಪಂಚದ ಪರಿಸರವನ್ನು ಆಟಗಾರರಿಗೆ ಒದಗಿಸುತ್ತದೆ. ಸ್ಪರ್ಶ ಸಂವೇದನೆ, ಪರಿಸರದ ಅನುಭವ ನೀಡುವುದಕ್ಕಾಗಿ ಇದರಲ್ಲಿ ವಿಶಿಷ್ಟ, ಅತ್ಯಾಧುನಿಕ ಜಾಯ್‌ಸ್ಟಿಕ್‌ ಸಾಧನಗಳನ್ನು ವಿಆರ್‌ ಗೇಮ್ಸ್‌ ಸಾಧನ ಹೊಂದಿರುತ್ತದೆ. ಇದರಿಂದ ಆಟವಾಡುವ ವ್ಯಕ್ತಿಗೆ ದೃಶ್ಯ, ಸ್ಪರ್ಶ, ಧ್ವನಿ, ಸಂವೇದನೆಗಳನ್ನು ಸೆನ್ಸರ್‌ಗಳ ಮೂಲಕ ನೀಡುತ್ತದೆ. ಇದು ವಾಸ್ತವ ಜಗತ್ತಿನಿಂದಲೂ ರಸವತ್ತಾದ ಅನುಭವ ನೀಡುವುದರಿಂದ ಹೆಚ್ಚಿನವರು ಇದರ ಗೀಳು ಶುರು ಮಾಡಿಕೊಳ್ಳುತ್ತಾರೆ.

ವಿಆರ್‌ ಗೇಮ್‌ ಹೆಡ್‌ಸೆಟ್‌
ಮಾರುಕಟ್ಟೆಯಲ್ಲಿ ಎಚ್‌ಟಿಸಿ ವೈವ್‌, ಆಕ್ಯುಲಸ್‌ ರಿಫ್ಟ್, ಮೈಕ್ರೋಸಾಫ್ಟ್ ಹಾಲೋಲೆನ್ಸ್‌, ಸ್ಯಾಮ್ಸಂಗ್‌ ವಿಆರ್‌, ಸೋನಿ ಪ್ಲೇಸ್ಟೇಷನ್‌ ವಿಆರ್‌ ಮತ್ತು ಗೂಗಲ್‌ ಕಾರ್ಡೋಬೋರ್ಡ್‌ ವಿಆರ್‌ ಗೇಮ್ಸ್‌ ಹೆಡ್‌ಸೆಟ್‌ಗಳನ್ನು ಹೊಂದಿವೆ. ಇವುಗಳಲ್ಲಿ ಹೆಚ್ಚಿನವು ಸಂವೇದಕ ನಿಯಂತ್ರಕಗಳನ್ನು ಮತ್ತು ಹೆಡ್‌ಸೆಟ್‌ನೊಂದಿಗೆ ಕೆಲಸ ಮಾಡುತ್ತವೆ. ಇದರೊಂದಿಗೆ ಸ್ಮಾರ್ಟ್‌ ಫೋನ್‌ಗಳ ಆ್ಯಪ್‌ ಮೂಲಕ ವಿಆರ್‌ ಹಾಕಿಕೊಂಡೂ ಆಟಗಳನ್ನು ಆಡಬಹುದು. 3ಡಿ ಸಿನೆಮಾಗಳನ್ನೂ ನೋಡಬಹುದು.

ಭರ್ಜರಿ ಬೆಲೆ
ವಿಆರ್‌ ಹೆಡ್‌ಸೆಟ್‌ಗಳು 60 ಸಾವಿರ ರೂ.ಗಳಿಂದ ಹಿಡಿದು, 2, 3 ಸಾವಿರ ರೂ. ವರೆಗೆ ಇವೆ. ಸ್ಮಾರ್ಟ್‌ ಫೋನ್‌ ಜತೆ ಬಳಕೆ ಮಾಡಬಲ್ಲ ಹೆಡ್‌ಸೆಟ್‌ ಗಳು ಕಡಿಮೆ ಬೆಲೆಗೆ ಲಭ್ಯವಿದ್ದು, ಸುಮಾರು 900 ರೂ.ಗಳಿಗೆ ಲಭ್ಯ. ಆದರೆ ಸ್ಪರ್ಶ ಸಂವೇದನೆ ನೀಡಬಲ್ಲ ಜಾಯ್‌ಸ್ಟಿಕ್‌ಗಳು ಬೇಕಾದರೆ ದುಬಾರಿ ಬೆಲೆ ತೆರಲೇ ಬೇಕು!

ಪ್ರಸಿದ್ಧ ವಿಆರ್‌ ಗೇಮ್ಸ್‌ ಯಾವುದು?
 ಕ್ಲೌಡ್  ಲ್ಯಾಂಡ್‌, ದ ಬ್ರೊಕವೆನ್‌ ಎಕ್ಸ್‌ ಪರಿಮೆಂಟ್‌, ಟಿಲ್ಟ್ ಬ್ರಶ್‌, ಬ್ಯಾಟ್‌ಮೆನ್‌ ಆರ್ಯಾಂ  ವಿಆರ್‌, ದ ಲಾಸ್ಟ್‌ ಸೋಲ್‌, ರೋಬೋ ರೀ ಕಾಲ್‌, ದ ಲ್ಯಾಬ್‌, ಹೀಗೆ ಹಲವಾರು ಗೇಮ್‌ಗಳಿದ್ದು ಕೆಲವು ಫ್ರೀ ಆಗಿದ್ದರೆ ಇನ್ನು ಕೆಲವು ಹಣ ಕೊಟ್ಟು ಖರೀದಿಸಬೇಕು. 

ಧನಾತ್ಮಕ ಅಂಶ 
· ಮನೋರಂಜನೆ
· ಶಿಕ್ಷಣ, ಹೊಸ ವಿಚಾರಗಳ ಅರಿವು
· ವರ್ಚುವಲ್‌ ರಿಯಾಲಿಟಿ ಥೆರಪಿ
· ವೈದ್ಯಕೀಯ ತರಬೇತಿ

ಋಣಾತ್ಮಕ ಅಂಶ 
· ಕ್ರೂರತೆಗೆ ಕಾರಣ
· ಮಕ್ಕಳ ಮನಸ್ಸಿನ ಮೇಲೆ ಪರಿಣಾಮ
· ಅಧಿಕ ಸಮಯ ಕಾಲ ಹರಣ (ಚಟ)
· ಆರೋಗ್ಯಕ್ಕೆ ನಕಾರಾತ್ಮಕ ಪರಿಣಾಮ

 ಭರತ್‌ರಾಜ್‌ ಕರ್ತಡ್ಕ 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಶೋಕ ಗಸ್ತಿ ಪಕ್ಷಕ್ಕಾಗಿ ಶ್ರಮಿಸಿದವರು, ಕುಟುಂಬದ ಸಹಾಯಕ್ಕಾಗಿ ಪಕ್ಷ ಜೊತೆಯಿರಲಿದೆ : ನಳಿನ್

ಅಶೋಕ ಗಸ್ತಿ ಪಕ್ಷಕ್ಕಾಗಿ ಶ್ರಮಿಸಿದವರು, ಕುಟುಂಬದ ಸಹಾಯಕ್ಕಾಗಿ ಪಕ್ಷ ಜೊತೆಯಿರಲಿದೆ : ನಳಿನ್

ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ

ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ

car

ವಾಹನಗಳಲ್ಲಿ ಈ ಕಾರಣಗಳಿಗೆ ಮಾತ್ರ ಸ್ಮಾರ್ಟ್ ಪೋನ್ ಬಳಸಿ: ಮೋಟಾರು ವಾಹನ ಕಾಯ್ದೆ ಅಧಿಸೂಚನೆ !

ಕರ್ನಾಟಕ ಬಂದ್: ರಾಮನಗರದಲ್ಲಿ ಬಂದ್ ಬಹುತೇಕ ಯಶಸ್ವಿ

ಕರ್ನಾಟಕ ಬಂದ್: ರಾಮನಗರದಲ್ಲಿ ಬಂದ್ ಬಹುತೇಕ ಯಶಸ್ವಿ

ಕರ್ನಾಟಕ ಬಂದ್ ಗೆ ಬೀದರ್ ನಗರದಲ್ಲಿ ದೊರೆತಿಲ್ಲ ಯಾವುದೇ ಸ್ಪಂದನೆ

ಕರ್ನಾಟಕ ಬಂದ್ ಗೆ ಬೀದರ್ ನಗರದಲ್ಲಿ ದೊರೆತಿಲ್ಲ ಯಾವುದೇ ಸ್ಪಂದನೆ

ನಭಕ್ಕೆ ಚಿಮ್ಮಲಿದೆ…ನಾಸಾದ169 ಕೋಟಿ ವೆಚ್ಚದ ಬಾತ್‌ರೂಂ!

ನಭಕ್ಕೆ ಚಿಮ್ಮಲಿದೆ…ನಾಸಾದ 169 ಕೋಟಿ ವೆಚ್ಚದ ಬಾತ್‌ರೂಂ!

ಧಾರವಾಡದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ: ಬಸ್ ಸಂಚಾರ ಸ್ಥಗಿತ

ಧಾರವಾಡದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ: ಬಸ್ ಸಂಚಾರ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavaniಹೊಸ ಸೇರ್ಪಡೆ

ಅಶೋಕ ಗಸ್ತಿ ಪಕ್ಷಕ್ಕಾಗಿ ಶ್ರಮಿಸಿದವರು, ಕುಟುಂಬದ ಸಹಾಯಕ್ಕಾಗಿ ಪಕ್ಷ ಜೊತೆಯಿರಲಿದೆ : ನಳಿನ್

ಅಶೋಕ ಗಸ್ತಿ ಪಕ್ಷಕ್ಕಾಗಿ ಶ್ರಮಿಸಿದವರು, ಕುಟುಂಬದ ಸಹಾಯಕ್ಕಾಗಿ ಪಕ್ಷ ಜೊತೆಯಿರಲಿದೆ : ನಳಿನ್

ಕಸ್ತೂರಿ ಮಹಲ್‌ ಸೇರಿದ ಶಾನ್ವಿ

ಕಸ್ತೂರಿ ಮಹಲ್‌ ಸೇರಿದ ಶಾನ್ವಿ

ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ

ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ

cinema-tdy-1

ನಮ್ಮಲ್ಲೇನಿದೆಯೋ ಅದರಲ್ಲೇ ಖುಷಿ ಕಾಣುವ: ಸುದೀಪ್‌

car

ವಾಹನಗಳಲ್ಲಿ ಈ ಕಾರಣಗಳಿಗೆ ಮಾತ್ರ ಸ್ಮಾರ್ಟ್ ಪೋನ್ ಬಳಸಿ: ಮೋಟಾರು ವಾಹನ ಕಾಯ್ದೆ ಅಧಿಸೂಚನೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.