ನಗರದಲ್ಲಿ ದಸರಾ ಆಚರಣೆ ಸಂಪನ್ನ


Team Udayavani, Oct 9, 2019, 3:00 AM IST

nagaradalli-da

ಹಾಸನ: ವಿಜಯ ದಶಮಿ ಅಂಗವಾಗಿ ನಗರದ ಸಾಲಗಾಮೆ ರಸ್ತೆಯಲ್ಲಿರುವ ಮಹಾನವಮಿ ಮಂಟಪ (ಬನ್ನಿಮಂಟಪ) ದಲ್ಲಿ ಮಂಗಳವಾರ ಸಂಜೆ ನರಸಿಂಹರಾಜ ಅರಸ್‌ ಬನ್ನಿ ಕಡಿಯುವ ಮೂಲಕ ದಸರಾ ಆಚರಣೆ ಸಂಪನ್ನಗೊಂಡಿತು. ಹಾಸನ ನಗರದ ವಿವಿಧ ಬಡಾವಣೆಗಳಿಂದ ಊರ ದೇವರುಗಳಾದ ಶ್ರೀ ಮೈಲಾರಲಿಂಗೇಶ್ವರ, ಶ್ರೀ ಚನ್ನಕೇಶವ, ಶ್ರೀ ವಿರೂಪಾಕ್ಷ, ಶ್ರೀ ಆಂಜನೇಯ ಹಾಗೂ ಶ್ರೀ ಸಿದ್ಧೇಶ್ವರ ದೇವರ ಅಡ್ಡೆ ಮೆರವಣಿಗೆ ಹಾಸನಾಂಬ ದೇವಾಲಯದ ವೃತ್ತದಿಂದ ಮಂಗಳವಾರ ಬೆಳಿಗ್ಗೆಯಿಂದಲೇ ರಂಭವಾಯಿತು.ದ ವಿವಿಧ ಬೀದಿಗಳಲ್ಲಿ ಅಡ್ಡೆ ದೇವರ ಮೆರವಣಿಗೆ ಮಹಾನವಮಿ ಮಂಟಪಕ್ಕೆ ಆಗಮಿಸಿತು.

ಅಷ್ಟರಲ್ಲಿ ಮಹಾನವಮಿ ಮಂಟಪದ ಆವರಣದಲ್ಲಿ ಬಾಳೆ ಕಂದಿಗೆ ಬನ್ನಿಪತ್ರೆ ಮುಡಿಸಿ ಫ‌ೂಜೆಗೆ ಅಣಿಗೊಳಿಸಲಾಗಿತ್ತು. ಅಡ್ಡೆದೇವರುಗಳು ಮಹಾ ನವಮಿ ಮಂಟಪಕ್ಕೆ ಆಗಮಿಸಿದ ನಂತರ ಬನ್ನಿ ಮುಡಿದ ಬಾಳೆ ಕಂದಿಗೆ ಪಂಜಿನಾರತಿ ನೆರವೇರಿತು. ಆನಂತರ ಸಂಪ್ರದಾಯದ ಪ್ರಕಾರ‌ ತಳವಾರ ಸಮುದಾಯದ ನರಸಿಂಹ‌ರಾಜ ಅರಸ್‌ ಅವರು ಬನ್ನಿ ಮುಡಿದ ಬಾಳೆ ಕಂದಿಗೆ ನಮಿಸಿ ಖಡ್ಗದಿಂದ ಬನ್ನಿ ಕಡಿದರು. ನರಸಿಂಹರಾಜ ಅರಸ್‌ ಅವರು ಬನ್ನಿ ಕಡಿದ ತಕ್ಷಣ ನೆರೆದಿದ್ದ ನೂರಾರು ಜನರು ಜಯಘೋಷ ಕೂಗುತ್ತಾ ಮುಗಿ ಬಿದ್ದು ಪವಿತ್ರ ಮತ್ತು ಭಕ್ತಿಯ ಸಂಕೇತವಾದ ಬನ್ನಿಯ ಪತ್ರೆಯನ್ನು ತೆಗೆದುಕೊಂಡು ಭಕ್ತಿಭಾವ ಮೆರೆದರು.

29ವರ್ಷಗಳಿಂದ ಬನ್ನಿ ಅಂಬು ಕಡಿಯುವ ಸಂಪ್ರದಾಯ: ನರಸಿಂಹರಾಜ ಅರಸ್‌ ಅವರು ಕಳೆದ 29 ವರ್ಷಗಳಿಂದಲೂ ಬನ್ನಿ (ಅಂಬು)ಕಡೆಯುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ಮೂರು ದಿನಗಳಿಂದ ಉಪವಾಸ ವ್ರತ ಆಚರಿಸುವ ನರಸಿಂಹರಾಜ ಅರಸ್‌ ಅವರು ಆಯುಧಪೂಜೆ ದಿನ ಖಡ್ಗಕ್ಕೆ ಪೂಜೆ ಸಲ್ಲಿಸಿ ವಿಜಯ ದಶಮಿಯ ದಿನ ಬನ್ನಿ ಕಡಿಯಲು ಮುಡಿಪಾಗಿಡುತ್ತಾರೆ. ಬನ್ನಿ ಕಡಿದ ನಂತರ ಖಡ್ಗಕ್ಕೆ ಪೂಜೆ ಸಲ್ಲಿಸುವ ನರಸಂಹರಾಜ ಅರ‌ಸ್‌ ಅವರು ಹಾಸನಾಂಬಾ ದೇಗುಲದ ಬಾಗಿಲು ತೆರೆಯು ಮುನ್ನವೂ ಹಾಸನಾಂಬ ದೇಗುಲದ ವರಣದಲ್ಲಿ ಬಾಳೆ ಕಂದಿಗೆ ಬನ್ನಿ ಮುಡಿಸಿ ಪೂಜೆ ಸಲ್ಲಿಸಿ ಪಂಜಿನಾರತಿ ನಡೆದ ನಂತರ ಬನ್ನಿ ಕಡಿತ ತಕ್ಷಣವೇ ಹಾಸನಾಂಬೆ ದೇಗುಲದ ಬಾಗಿಲು ತೆರೆದು ಜಾತ್ರಾ ಮಹೋತ್ಸವ ಆರಂಭವಾಗುತ್ತದೆ.

ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥನೆ: ಬನ್ನಿ ಕಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹರಾಜ ಅರಸ್‌ ಅವರು ದೇವರು ಉತ್ತಮ ಮಳೆ, ಬೆಳೆಮ ಸಮೃದ್ಧಿ ಕರುಣಿಸಲಿ, ಜನರಿಗೆ ಆರೋಗ್ಯ ಮತ್ತು ಸಂಪತ್ತು ಕೊಟ್ಟು ಕಾಪಾಡಲಿ ಪ್ರಾರ್ಥಿಸಿದ್ದೇನೆ. ವಂಶ ಪಾರಂಪರ್ಯವಾಗಿ ಬನ್ನಿ ಕಡಿಯುವ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದೇನೆ. ಕಳೆದ 28 ವರ್ಷಗಳಿಂದ ಈ ಮಹಾನವಮಿ ಮಂಟಪದಲ್ಲಿ ವಿಜಯ ದಶಮಿ ಪೂಜಾ ಕಾರ್ಯವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದೇನೆ ಎಂದರು.

ನಾನು ನಡೆಸಿಕೊಂಡು ಬಂದಿರುವ ದೇವರ ಸೇವೆಗೆ ಪ್ರತಿಯಾಗಿ ನನಗೇನೂ ಪ್ರತಿಫ‌ಲ ಸಿಕ್ಕಿಲ್ಲ. ಸರ್ಕಾರದಿಂದ ನಿವೇಶನ ಕೊಡುವುದಾಗಿ ಜಿಲ್ಲಾಡಳಿತ ಹಲವು ವರ್ಷಗಳಿಂದ ಭರವಸೆ ನೀಡುತ್ತಲೇ ಬಂದಿದೆ. ದರೆ ಭರವಸೆ ಈಡೇರಿಲ್ಲ. ವಿಜಯ ದಶಮಿ ದಿನ ತಾಲೂಕು ಮುಜರಾಯಿ ಅಧಿಕಾರಿಗಳು ಹಾಜರಿರುತ್ತಿದ್ದರು. ಆದರೆ ಈ ವರ್ಷ ಅಧಿಕಾರಿಗಳು ಬಾರದೆ ಶಿರಸ್ತೇದಾರರು ಮಾತ್ರ ಬಂದಿದ್ದಾರೆ ಎಂದು ವಿಷಾದಿಸಿದರು.

ದೇವರ ಉತ್ಸವಕ್ಕೆ ಮಳೆ ಅಡ್ಡಿ: ನಗರದಲ್ಲಿ ಮಧ್ಯಾಹ್ನ 3.45 ಗಂಟೆಗೆ ಮಂಗಳವಾರ ಮಳೆ ಆರಂಭವಾಗಿದ್ದರಿಂದ ದೇವರ ಉತ್ಸವಕ್ಕೂ ಅಡಚಣೆಯಾಯಿತು. ಆದರೂ ಮಳೆ ವಿರಾಮ ಕೊಡುವವರೆಗೂ ಕಾದು ದೇವರ ಉತ್ಸವ ಮುಂದುವರಿಸಿದರು. ಮಹಾನವಮಿ ಮಂಟಪದಲ್ಲಿಯೂ ಬನ್ನಿ ಕಡಿಯುವ ಜಾಗವೂ ಕೆಸರುಮಯವಾಗಿತ್ತು.

ಮಹಾನವಮಿ ಮಂಟಪ ಸ್ವಚ್ಛತೆ ಕಾಪಾಡಿ: ಹಾಸನ ನಗರದಲ್ಲಿ ವಿಜಯ ದಶಮಿ ಅಚರಿಸುವ ಏಕೈಕ ಸ್ಥಳ ಮಹಾನವಮಿ ಮಂಟಪದ ಸ್ವಚ್ಛತೆಯ ಬಗ್ಗೆಯೂ ನಗರಸಭೆಯಾಗಲಿ, ಮುಜರಾಯಿ ಇಲಾಖೆಯಾಗಲಿ ಆಸಕ್ತಿ ತೋರುವುದಿಲ್ಲಿ ವಿಜಯ ದಶಮಿ ದಿನ ಮಾತ್ರ ಈ ಸ್ಥಳವನ್ನು ಸ್ವಚ್ಛಗೊಳಿಸುವುದು ಬಿಟ್ಟರೆ ವರ್ಷ ಪೂರ್ತಿ ಗಿಡಗಂಡಿ ಬೆಳೆದು ನಿಂತಿರುತ್ತದೆ. ನಗರದ ಮಧ್ಯ ಭಾಗದಲ್ಲಿರುವ ಮಹಾ ನವಮಿ ಮಂಟಪವನ್ನು ಸ್ವಚ್ಛಗೊಳಿಸಿ ಭಕ್ತಿ ಪ್ರಧಾನ ಸ್ಥಳವಾಗಿ ರೂಪಿಸಬೇಕು ಎಂದು ನರಸಂಹರಾಜ ಅರ‌ಸ್‌ ಮನವಿ ಮಾಡಿದರು.

ಆಸರೆ ಫೌಂಡೇಷನ್‌ನಿಂದ ಭಕ್ತರಿಗೆ ಪ್ರಸಾದ: ಮಹಾ ನವಮಿ ಮಂಟಪದಲ್ಲಿ ವಜಯದಶಮಿ ಆಚರಣೆ ವೇಳೆ ಭಕ್ತರಿಗೆ ಆಸರೆ ಫೌಂಡೇಶನ್‌ ವತಿಯಿಂದ ಪ್ರಸಾದ ಇತರಣೆ ಮಾಡಲಾಯಿತು. ಕಳೆದ ವರ್ಷದಿಂದ ಆಸರೆ ಫೌಂಡೇಷನ್‌ ಪ್ರಸಾದ ವಿತರಣೆ ಮಾಡುತ್ತಿದೆ. ಆಸರೆ ಫೌಂಡೇಶನ್‌ ಗೌರವಾಧ್ಯಕ್ಷ ಉದಯಕುಮಾರ್‌, ಅಧ್ಯಕ್ಷ ಗುರುಪ್ರಸಾದ್‌ ಕಾಮತ್‌, ಪ್ರಧಾನ ಕಾರ್ಯದರ್ಶಿ ಗಗನ್‌ಗಾಂಧಿ, ಖಜಾಂಚಿ ಎನ್‌.ಎಸ್‌. ನರಸಿಂಹಮೂರ್ತಿ, ಗಿರೀಶ್‌ ಟಾಕೋರ್‌, ಚಂದ್ರಶೇಖರ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಟಾಪ್ ನ್ಯೂಸ್

ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

ಕೋವಿಡ್‌ ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

thumb 1

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ಹೊಸ ಇತಿಹಾಸ ಬರೆದಿದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

ಹೊಸ ಇತಿಹಾಸ ಬರೆದಿದ್ದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

astrology today

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

3ನೇ ಕೋವಿಡ್ ಅಲೆಯಲ್ಲಿ ಪ್ರತಿ ದಿನ 1.2 ಲಕ್ಷ ಪ್ರಕರಣ: ತಜ್ಞರ ಎಚ್ಚರಿಕೆ : ಡಾ. ಸುಧಾಕರ್‌

3ನೇ ಕೋವಿಡ್ ಅಲೆಯಲ್ಲಿ ಪ್ರತಿ ದಿನ 1.2 ಲಕ್ಷ ಪ್ರಕರಣ: ತಜ್ಞರ ಎಚ್ಚರಿಕೆ : ಡಾ. ಸುಧಾಕರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dasra-tere

ವೈಭವದ ಕುಂದಾಪುರ ದಸರಾ ಮಹೋತ್ಸವಕ್ಕೆ ತೆರೆ

dasareyalli

ದಸರೆಯಲ್ಲಿ ಗಮನಸೆಳೆದ ಸ್ತಬ್ಧಚಿತ್ರಗಳು

jilladyanta

ಜಿಲ್ಲಾದ್ಯಂತ ಕಳೆಗಟ್ಟಿದ ವಿಜಯದಶಮಿ ಸಂಭ್ರಮ

dasara-nav

ದಸರಾ, ನವರಾತ್ರಿ ಸಂಭ್ರಮಕ್ಕೆ ತೆರೆ

naadina-kale

ನಾಡಿನ ಕಲೆ-ಸಂಸ್ಕೃತಿ ಪ್ರತಿಬಿಂಬಿಸಿದ ಮೆರವಣಿಗೆ

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

ಕೋವಿಡ್‌ ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

thumb 1

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ಹೊಸ ಇತಿಹಾಸ ಬರೆದಿದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

ಹೊಸ ಇತಿಹಾಸ ಬರೆದಿದ್ದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.