ಕಾಂಗ್ರೆಸ್‌ ಶಕ್ತಿ ಕುಗ್ಗಲು ನಾಯಕರೇ ಕಾರಣ


Team Udayavani, Jan 24, 2018, 4:34 PM IST

beach cleaning programme 2.jpg

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಕ್ತಿ ಕುಂದಲು ನಾಯಕರೇ ಕಾರಣ ಹೊರತು ಕ್ಷೇತ್ರದ ಕಾರ್ಯಕರ್ತರಲ್ಲ ಎಂದು ಮುಖಂಡ ನಾಗರಾಜ್‌ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ದಯನೀಯ ಸ್ಥಿತಿ ತಲುಪಿದೆ. ಅದನ್ನು ಮತ್ತೆ ಕಟ್ಟಲು ಯಾವ ನಾಯಕರೂ ಮುಂದಾಗದಿರುವುದು ವಿಷಾದನೀಯ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಟ್ಟಿ ಬೆಳೆಸುವ ಮನಸ್ಸು ನಾಯಕರಿಗೆ ಇದ್ದಿದ್ದರೆ ಕಳೆದ ನಾಲ್ಕುವರೆ ವರ್ಷದ ಅವಧಿಯಲ್ಲಿ ಈ ಕೆಲಸ ಮಾಡಬಹುದಿತ್ತು.

ಆದರೆ ಮೇಲ್ಮಟ್ಟದ ಡೀಲ್‌ ರಾಜಕಾರಣದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟಲು ನಾಯಕರು ಮನಸ್ಸು ಮಾಡಲಿಲ್ಲ ಎಂದು ಆರೋಪಿಸಿದರು. ಯುವ ಮುಖಂಡ ಚಿಕ್ಕಾಡೆ ಮಹೇಶ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಪಾಂಡವಪುರಕ್ಕೆ ಬಂದಾಗ ಸಮಾರಂಭಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮುಂದೆ ತಮ್ಮ ಹಳೆ ಸಹವರ್ತಿ ಸಂಸದ ಸಿ.ಎಸ್‌.ಪುಟ್ಟರಾಜು ಅವರನ್ನು ಹೊಗಳಿದರೆ,

ಕಾಂಗ್ರೆಸ್‌ ಸರ್ಕಾರದ ಆರೋಗ್ಯ ಮಂತ್ರಿ ರಮೇಶ್‌ ಕುಮಾರ್‌ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅವರನ್ನು ಹೊಗಳುವುದಲ್ಲದೇ ಪುಟ್ಟಣ್ಣಯ್ಯ ಅವರನ್ನು ಮತ್ತೂಮ್ಮೆ ಗೆಲ್ಲಿಸಿ ಎಂದು ನಮ್ಮ ಪಕ್ಷದವರೇ ಕರೆ ನೀಡಿದರೆ ಇಲ್ಲಿ ಕಾಂಗ್ರೆಸ್‌ ನಾಯಕರು ಬೆಳೆಯಲು ಹೇಗೆ ಸಾಧ್ಯ ಎಂದು ಕಿಡಿಕಾರಿದರು.

ಮುಖಂಡ ಕೋ.ಪು.ಗುಣಶೇಖರ್‌ ಮಾತನಾಡಿ, ಪಕ್ಷದ ಹೈಕಮಾಂಡ್‌ ಟಿಕೆಟ್‌ ಯಾರಿಗಾದರೂ ನೀಡಲಿ, ನಾವು ಮಾತ್ರ ಹಳೆಯದನ್ನೆಲ್ಲಾ ಮರೆತು ಮುಖಂಡ ಎಲ್‌.ಡಿ.ರವಿ ನೇತೃತ್ವದಲ್ಲಿ ಮತ್ತೆ ಪಕ್ಷವನ್ನು ಸಂಘಟಿಸಿ ಕ್ಷೇತ್ರದಲ್ಲಿ ಪಕ್ಷದ ಬಲಪ್ರದರ್ಶನ ನಡೆಸುವ ಮೂಲಕ ಮತ್ತೆ ವಿರೋಧಿಗಳಿಗೆ ಸಡ್ಡು ಹೊಡೆಯಬೇಕೆಂದು ಹೇಳಿದರು.

ಸಭೆಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಲ್‌.ಸಿ.ಮಂಜುನಾಥ್‌, ಪ್ರಕಾಶ್‌, ಹಿರಿಯ ಮುಖಂಡರಾದ ಬಸವರಾಜು, ಎಲ್‌.ಡಿ.ರವಿ, ಹಿರೇಮರಳಿ ರಾಮಕೃಷ್ಣ, ಹೊನಗಾನಹಳ್ಳಿ ಕೃಷ್ಣೇಗೌಡ, ದೇವೇಗೌಡ, ನಜೀರ್‌ ಅಹಮದ್‌, ಸಿದ್ದಲಿಂಗಯ್ಯ, ಶ್ರೀನಿವಾಸ್‌, ಚಂದ್ರಶೇಖರ್‌, ದೇವರಾಜು, ಕುಬೇರ, ಸಿ.ಆರ್‌.ರಮೇಶ್‌, ಕೋಮಲ ಚೆನ್ನಪ್ಪ ಇತರರಿದ್ದರು.

ಟಾಪ್ ನ್ಯೂಸ್

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K.R.Pete: ತೆಂಡೇಕೆರೆ ಗ್ರಾಮದಲ್ಲಿ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

K.R.Pete: ತೆಂಡೇಕೆರೆ ಗ್ರಾಮದಲ್ಲಿ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

Vatal Nagaraj ಕರ್ನಾಟಕ-ತಮಿಳುನಾಡು ಸರ್ಕಾರ ಬೀಗರು

Vatal Nagaraj ಕರ್ನಾಟಕ-ತಮಿಳುನಾಡು ಸರ್ಕಾರ ಬೀಗರು

ಸಕ್ಕರೆ ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

HD ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

1-wqeqewewqewqe

TMCಯ ಶಹಜಹಾನ್‌ ವಿರುದ್ಧ ಕೊಲೆ ಯತ್ನ ಕೇಸು

1-wqeqewqe

Congo;ಭಾರತದ ಮೇಜರ್‌ ರಾಧಿಕಾಗೆ ವಿಶ್ವಸಂಸ್ಥೆಯ ಉನ್ನತ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.