ತುಳಸಿಗಿದೆ ವಿಕಿರಣ ತಡೆಯುವ ಶಕ್ತಿ: ಬಾಬಾ ರಾಮದೇವ್‌

Team Udayavani, Nov 17, 2019, 6:30 AM IST

tulasi-vidye

ಉಡುಪಿ: ತುಳಸೀ ಎಲೆಗೆ ವಿದ್ಯುನ್ಮಾನ ಉಪಕರಣಗಳಲ್ಲಿರುವ ರೇಡಿಯೇಶನ್‌ (ವಿಕಿರಣಗಳು) ತಡೆಗಟ್ಟುವ ಶಕ್ತಿ ಇದೆ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದರು.

ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶನಿವಾರ ಆರಂಭಗೊಂಡ ಐದು ದಿನಗಳ ಯೋಗ ಚಿಕಿತ್ಸೆ ಮತ್ತು ಯೋಗ ಶಿಬಿರದಂದು ತಾನು ಇದೇ ಮೊದಲ ಬಾರಿಗೆ ತುಳಸಿಯ ವಿಕಿರಣ ನಿರೋಧಕ ಶಕ್ತಿಯನ್ನು ಬಹಿರಂಗಪಡಿಸುತ್ತಿದ್ದೇನೆ ಎಂದರು. ರಾಮದೇವ್‌ ಮತ್ತು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಲ್ಲ ಮೊಬೈಲ್‌ ಸೆಟ್‌ಗಳಲ್ಲಿ ವಿಕಿರಣ ಇರುತ್ತದೆ. ಒಂದು ವೇಳೆ ಮೊಬೈಲ್‌ ಹಿಂದೆ ಒಂದು ತುಳಸಿ ಎಲೆಯನ್ನು ಸಿಕ್ಕಿಸಿದರೆ ವಿಕಿರಣ ಇಲ್ಲವಾಗುತ್ತದೆ ಎಂದು ಹಾಗೆ ಮಾಡಿ ತೋರಿಸಿದರು. ಅನಂತರ ವೇದಿಕೆಯಲ್ಲಿದ್ದ ಪಲಿಮಾರು ಮಠದ ವಿದ್ವಾಂಸ ಗಿರೀಶ್‌ ಉಪಾಧ್ಯಾಯ ಅವರನ್ನು ಕರೆದು ಒಂದು ಕೈಯಲ್ಲಿ ಮೊಬೈಲ್‌ ಕೊಟ್ಟು ಇನ್ನೊಂದು ಕೈಯನ್ನು ಕೆಳಕ್ಕೆ ಜಗ್ಗಿದರು. ಇದೇ ವೇಳೆ ಕೈ ಜಗ್ಗದಂತೆ ಪ್ರಯತ್ನಿಸಲು ಹೇಳಿದರು. ಅವರ ಕೈ ಕೆಳಕ್ಕೆ ಬಂತು. ಬಳಿಕ ಮೊಬೈಲ್‌ಗೆ ತುಳಸಿ ಎಲೆಯನ್ನು ಸಿಕ್ಕಿಸಿ ಇನ್ನೊಂದು ಕೈಯನ್ನು ಕೆಳಕ್ಕೆ ಜಗ್ಗಿಸಲು ಪ್ರಯತ್ನಿಸಿದರು. ಆದರೆ ಕೈ ಜಗ್ಗಲಿಲ್ಲ. ಮೊಬೈಲ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌, ಟಿವಿ, ಯಾವುದೇ ತರಹದ ಎಲೆಕ್ಟ್ರಾನಿಕ್ಸ್‌ ಉಪಕರಣಗಳಲ್ಲಿ ವಿಕಿರಣ ಹರಿಯುತ್ತ ಇರುತ್ತದೆ. ಇವುಗಳ ತಡೆಗೆ ತುಳಸೀ ಉತ್ತಮ ಮಾಧ್ಯಮ ಎಂದರು.

ಲಕ್ಷತುಳಸಿ ಅರ್ಚನೆಯೂ ವಿಜ್ಞಾನವೇ
ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರು ನಿತ್ಯ ಲಕ್ಷ ತುಳಸಿ ಅರ್ಚನೆ ಮಾಡುವುದೂ ಒಂದು ವಿಜ್ಞಾನವೇ. ದೇವರಿಗೆ ನಿವೇದನೆಯಾದ ತುಳಸಿಯನ್ನು ಪ್ರಸಾದ ರೂಪವಾಗಿ ಬಳಸುವುದೂ ವೈಜ್ಞಾನಿಕವೇ ಆಗಿದೆ ಎಂದು ರಾಮದೇವ್‌ ವಿಶ್ಲೇಷಿಸಿದರು.

“ಚೀನಿ’, ಮೈದಾ, ಚಾಕಲೇಟ್‌ ಬಿಟ್ಟುಬಿಡಿ
ಉಡುಪಿ: “ಚೀನಿ’ ಎಂದರೆ ಹಿಂದಿಯಲ್ಲಿ ಸಕ್ಕರೆ. ಇದರ ಜತೆ ಚೀನ ಉತ್ಪನ್ನಗಳನ್ನೂ ಕೈಬಿಡಿ. ಮೈದಾ, ಚಾಕಲೇಟ್‌ ಕೈಬಿಡಿ. ಸಕ್ಕರೆ, ಮೈದಾ ಎರಡೂ ಬಿಳಿ ವಿಷ…

ಇದು ಯೋಗ ಗುರು ಬಾಬಾ ರಾಮದೇವ್‌ ಅವರ ಸಲಹೆ. ಅವರು ಯೋಗ ಪ್ರಾತ್ಯಕ್ಷಿಕೆ ನೀಡುತ್ತಲೇ ಯೋಗಾಸನ, ಆರೋಗ್ಯ ಟಿಪ್ಸ್‌ಗಳನ್ನು ನೀಡಿದರು.
ಸಕ್ಕರೆ ಬದಲು ಬೆಲ್ಲದ ರಸಗುಲ್ಲ ಸೇವಿಸಿ. ಉಪ್ಪಿನ ಬದಲು ಸೈಂಧವ ಲವಣ ಉಪಯೋಗಿಸಿ. ಊಟದ ಒಂದು ಗಂಟೆ ಮೊದಲು, ಊಟದ ಒಂದು ಗಂಟೆ ಅನಂತರ ನೀರು ಸೇವಿಸಿ. ಹಣ್ಣುಗಳನ್ನು ಊಟಕ್ಕೆ ಮೊದಲೇ ಸೇವಿಸಿ. ವಿವಿಧ ತರಹದ ತರಕಾರಿಗಳನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಸೇವಿಸಿ. ಖಾಲಿ ಹೊಟ್ಟೆಗೆ ಒಂದು ಚಮಚ ಶುದ್ಧ ತೆಂಗಿನೆಣ್ಣೆ ಸೇವಿಸಿದರೆ ಉತ್ತಮ ಎಂದರು.
ರಾಜ್ಯ ಪತಂಜಲಿ ಸಂಸ್ಥೆಗಳ ಪ್ರಭಾರಿ ಭವರ್‌ಲಾಲ್‌ ಆರ್ಯ ಕಾರ್ಯಕ್ರಮ ನಿರ್ವಹಿಸಿ, ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು.

ಜಾತಿ, ಲಿಂಗ ಭೇದ ಮೀರಿದ ಯೋಗ
ಯೋಗಕ್ಕೆ ಜಾತಿ ಮತ, ಲಿಂಗ ಭೇದವಿಲ್ಲ. ಶರೀರ ಇರುವವರಿಗೆಲ್ಲ ಯೋಗ ಅಗತ್ಯವಾಗಿದೆ. ದೇವರು ಶರೀರವೆಂಬ “ಯೋಗ’ವನ್ನು ಕರುಣಿಸಿದ. ಅದರ ಫಿಟ್‌ನೆಸ್‌ಗಾಗಿ “ಯೋಗಕ್ಷೇಮಂ’ ಅರ್ಥದ ಮೂಲಕ ಕೊಟ್ಟ ಶರೀರದ ಕ್ಷೇಮವನ್ನು ನೋಡಿಕೊಳ್ಳಬೇಕಾಗಿದೆ. ರಾಮದೇವ್‌ ಹೇಳಿಕೊಟ್ಟ ಯೋಗಾಸನ, ಪ್ರಾಣಾಯಾಮಗಳ ಮೂಲಕ ಲಭ್ಯ ಶರೀರ ನೂರು ವರ್ಷಗಳವರೆಗೆ ಕೆಡದಂತೆ ಉಳಿಸಿಕೊಳ್ಳಬೇಕು ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಿಳಿಸಿದರು.
ಅಯೋಧ್ಯಾಧಿಪತಿ ರಾಮಚಂದ್ರ ಪ್ರಾಣಶಕ್ತಿಯಾದ ಆಂಜನೇಯನನ್ನು ಹುಡುಕಿಕೊಂಡು ಕರ್ನಾಟಕದ ಹಂಪಿಗೆ ಬಂದ. ಆಂಜನೇಯನ ಅವತಾರವಾದ ಮಧ್ವಾಚಾರ್ಯರನ್ನು ಹುಡುಕಿಕೊಂಡು ದ್ವಾರಕೆಯಲ್ಲಿದ್ದ ಕೃಷ್ಣ ಉಡುಪಿಗೆ ಬಂದ. ಈಗ ಹರಿದ್ವಾರದಲ್ಲಿರುವ ಬಾಬಾ ರಾಮದೇವ್‌ ಉಡುಪಿಗೆ ಆಗಮಿಸಿ ಎಲ್ಲರಿಗೂ ಅಗತ್ಯವಾದ ಯೋಗ ತರಬೇತಿಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಬಾಬಾ ಕಿವಿಮಾತು
ಭಸಿŒಕಾ ಪ್ರಾಣಾಯಾಮದೊಂದಿಗೆ ಯೋಗ ಪ್ರಾತ್ಯಕ್ಷಿಕೆಗಳನ್ನು ಆರಂಭಿಸಿದ ರಾಮದೇವ್‌ ಅವರು, ಕ್ಯಾಲರಿಗಳನ್ನು ಬರ್ನ್ ಮಾಡಲು ಯೋಗ ಅತ್ಯಂತ ಸೂಕ್ತ ಎಂದರು. ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳಿಗೆ, ಕ್ಯಾನ್ಸರ್‌ ನಿಗ್ರಹಕ್ಕೂ ಇದು ಪರಿಣಾಮಕಾರಿ. ಹರ್ನಿಯಾ, ಹೃದಯ ರೋಗ ಇರುವವರು ಮಾತ್ರ ನಿಧಾನವಾಗಿ ಮಾಡಬೇಕು ಎಂದು ರಾಮದೇವ್‌ ಕಿವಿಮಾತು ನುಡಿದರು. ಶ್ವಾಸೋಚ್ಛಾ$Ìಸದ ಸಮಸ್ಯೆ ಇರುವವರಿಗೆ ಭಸಿŒಕಾ ಪರಿಣಾಮಕಾರಿ ಎಂದರು.

ಓಂಕಾರ, ಶೀತಲೀ- ಶೀತ್ಕಾರಿ ಪ್ರಾಣಾಯಾಮ, ಮಂಡೂಕಾಸನ, ವಕ್ರಾಸನ, ಪವನಮುಕ್ತಾಸನ, ಉತ್ತಾನಪಾದಾಸನ, ಭುಜಂಗಾಸನ, ಉಷ್ಟ್ರಾಸನ, ಸೂರ್ಯನಮಸ್ಕಾರಾದಿಗಳನ್ನು ರಾಮದೇವ್‌ ಮಾಡಿ ತೋರಿದರು.

– 20 ಡಿಗ್ರಿ ಉಷ್ಣಾಂಶದಲ್ಲಿಯೂ ಸಹಜಜೀವನ ಸಾಧ್ಯ
ಚೀನದಲ್ಲಿ -20 ಡಿಗ್ರಿ ಉಷ್ಣಾಂಶ ಇರುವಲ್ಲಿಯೂ ನಾನು ಕಪಾಲಭಾತಿಯ ಬಲದಿಂದ ಹೀಗೆಯೇ ಉಡುಗೆಗಳನ್ನು ತೊಟ್ಟಿದ್ದೆ. ಉಷ್ಣಾಂಶ ಧಾರಣೆಯ ಶಕ್ತಿ ದೊರಕುವುದು ಹೊರಗಿನ ಶಕ್ತಿಯಿಂದಲ್ಲ, ಒಳಗಿನಿಂದ. ಮಧುಮೇಹ, ಹೈಪರ್‌ಟೆನ್ಶನ್‌, ರಕ್ತದೊತ್ತಡ, ಕೊಲೆಸ್ಟರಲ್‌, ಜ್ವರ ಇತ್ಯಾದಿಗಳನ್ನು ನಿಯಂತ್ರಣಕ್ಕೆ ತರಬಹುದು.
– ಬಾಬಾ ರಾಮದೇವ್‌

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.