ಜಡ್ಡಿನಮೂಲೆ : ಸೇತುವೆ -ಕಿಂಡಿ ಅಣೆಕಟ್ಟೆಗೆ ಅನುದಾನ ಮಂಜೂರು

Team Udayavani, Mar 19, 2020, 5:25 AM IST

ಜಡ್ಡಿನಮೂಲೆ : ಸೇತುವೆ -ಕಿಂಡಿ ಅಣೆಕಟ್ಟೆಗೆ ಅನುದಾನ ಮಂಜೂರು

ಆಜ್ರಿ: ಇಲ್ಲಿನ ಜನರ ದಶಕಗಳಿಗೂ ಹೆಚ್ಚು ಸಮಯದ ಕಾಲು ಸಂಕದ ನಡಿಗೆಗೆ ಕಡೆಗೂ ಮುಕ್ತಿ ಸಿಗುವ ಕಾಲ ಕೂಡಿ ಬಂದಿದೆ. ಆಜ್ರಿ ಗ್ರಾಮದ ಜಡ್ಡಿನಮೂಲೆಯಲ್ಲಿ ಕುಬಾj ನದಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರ ಮುತುವರ್ಜಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 3.5 ಕೋ.ರೂ. ಅನುದಾನ ಮಂಜೂರಾಗಿದೆ.

ಆಜ್ರಿ ಗ್ರಾಮದ ಬಡಬಾಳು, ಜಡ್ಡಿನಮೂಲೆ, ಯಡೂರು, ಕೇವರ್ಜಿ, ಕ್ಯಾಕೋಡು ಭಾಗದವರು ಸೇತುವೆ ಯಿಲ್ಲದೆ ಮಳೆಗಾಲದಲ್ಲಿ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು. 1 ಕಿ.ಮೀ. ಸಂಚರಿಸಬೇಕಾದ ಗ್ರಾಮಸ್ಥರು ಮಳೆಗಾಲದಲ್ಲಿ ಸೇತುವೆಯಿಲ್ಲದೆ 5 ಕಿ.ಮೀ. ಹೆಚ್ಚುವರಿಯಾಗಿ ಸಂಚರಿಸುವ ಸ್ಥಿತಿ ಇಲ್ಲಿಯರದಾಗಿದೆ.

ಆಜ್ರಿಯಿಂದ ಬಡಬಾಳುವಿಗೆ ಸಂಪರ್ಕಿ ಸಲು ಕುಬಾj ನದಿಯನ್ನು ದಾಟಬೇಕಿದ್ದು, ಸಮರ್ಪಕ ಸೇತುವೆಯಿಲ್ಲದೆ ಸಾರ್ವಜನಿಕರು, ಮಕ್ಕಳು ಸಮಸ್ಯೆ ಅನುಭವಿಸು ತ್ತಿದ್ದಾರೆ. ಮಳೆಗಾಲದಲ್ಲಿ ಊರವರೇ ನಿರ್ಮಿಸಿದ ಕಾಲು ಸಂಕದಲ್ಲಿ ಈ ಭಾಗದ ನೂರಾರು ಮಂದಿ ನದಿ ದಾಟುತ್ತಾರೆ. ಒಂದೊಮ್ಮೆ ಕಾಲು ಸಂಕ ಮುರಿದು ಬಿದ್ದರೆ ಮತ್ತೆ ಮಳೆಗಾಲ ಮುಗಿಯುವವರೆಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ.

ಯಾವೆಲ್ಲ ಊರಿಗೆ ಪ್ರಯೋಜನ?
ಜಡ್ಡಿನಮೂಲೆಯಲ್ಲಿ ಸೇತುವೆ ಯಾದರೆ ಬಡಬಾಳು, ಯಡೂರು, ಯಡ್ನಾಡಿ, ತೆಂಕಬೈಲು, ಜಡ್ಡಿನಮೂಲೆ, ಜಿಗಿನ್‌ಗುಂಡಿ, ಕಂಪದಕೆರೆ, ಕೇವರ್ಜಿ, ಕ್ಯಾಕೋಡು, ತೆಂಕಬೈಲು ಈ ಎಲ್ಲ ಊರಿಗೆ ಒಂದು ಕಡೆಯಿಂದ ಆಜ್ರಿ, ಸಿದ್ದಾಪುರ ಕಡೆಗೆ, ಮತ್ತೂಂದು ಕಡೆಯಿಂದ ಶಂಕರನಾರಾಯಣ, ಸಿದ್ದಾಪುರ, ಕುಂದಾಪುರಕ್ಕೆ ಸಂಚರಿಸಲು ಪ್ರಯೋಜನ ವಾಗಲಿದೆ. ಇದಲ್ಲದೆ ಕಿಂಡಿ ಅಣೆಕಟ್ಟು ಕೂಡ ನಿರ್ಮಾಣವಾಗುವುದರಿಂದ ಈ ಭಾಗದ ಹತ್ತಾರು ಎಕರೆ ಕೃಷಿ ಪ್ರದೇಶಗಳಿಗೂ ಅನುಕೂಲವಾಗಲಿದೆ. ಮಾತ್ರವಲ್ಲದೆ ಈ ಪ್ರದೇಶದ ಸುತ್ತಮುತ್ತಲಿನ ಅಂತರ್ಜಲ ಮಟ್ಟ ಏರಿಕೆಗೂ ಪ್ರಯೋಜನವಾಗಲಿದೆ.

ಶೀಘ್ರ ಕಾಮಗಾರಿಗೆ ಚಾಲನೆ
ಇಲ್ಲಿನ ಗ್ರಾಮಸ್ಥರು ಜಡ್ಡಿನಮೂಲೆಯಲ್ಲಿ ಸೇತುವೆ ಅಗತ್ಯ ಎಂದು ಬಹಳಷ್ಟು ವರ್ಷಗಳಿಂದಲೂ ಮನವಿ ಸಲ್ಲಿಸುತ್ತಲೇ ಬಂದಿದ್ದರು. ನಾನು ಚುನಾವಣಾ ಪ್ರಚಾರ ಸಂದರ್ಭ ಗೆದ್ದು ಬಂದರೆ ಸೇತುವೆಗೆ ಅನುದಾನ ತರುತ್ತೇನೆಂದು ಮಾತು ಕೊಟ್ಟಿದ್ದೆ. ಅದರಂತೆ ಈಗ ನಡೆದುಕೊಂಡಿದ್ದು, ಸೇತುವೆ ಸಹಿತ, ಈ ಭಾಗದ ಕೃಷಿ ಭಾಗಕ್ಕೆ ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟು ಕೂಡ ನಿರ್ಮಾಣವಾಗಲಿದೆ.

ಸಣ್ಣ ನೀರಾವರಿ ಇಲಾಖೆಯಿಂದ 3.5 ಕೋ.ರೂ. ಅನುದಾನ ಮಂಜೂರಾಗಿದೆ. ಶೀಘ್ರ ಟೆಂಡರ್‌ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು.
-ಬಿ.ಎಂ. ಸುಕುಮಾರ್‌ ಶೆಟ್ಟಿ ಬೈಂದೂರು ಶಾಸಕರು

ಸುದಿನ ವರದಿ
ಜಡ್ಡಿನಮೂಲೆಯಲ್ಲಿ ಸೇತುವೆ ಬೇಡಿಕೆ ಕುರಿತಂತೆ ಫೆ.16 ರಂದು “ಉದಯವಾಣಿ ಸುದಿನ’ ಮುಖಪುಟದಲ್ಲಿ “ಕಾಲು ಸಂಕದ ಸಂಕಷ್ಟದ ನಡಿಗೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ ‘ಎನ್ನುವ ವಿಶೇಷ ವರದಿ ಪ್ರಕಟಿಸಿತ್ತು.

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.