ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

Team Udayavani, Feb 11, 2019, 1:00 AM IST

crime.jpg

ಹೆಬ್ರಿ:  ಠಾಣಾ ವ್ಯಾಪ್ತಿಯ ವರಂಗ ಗ್ರಾಮದ ಮಾತಿಬೆಟ್ಟಿನಲ್ಲಿ ತಾಯಿಯೋರ್ವಳು ತನ್ನ ಪುಟ್ಟ ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. 

ಸಂತೋಷ ಅವರ ಪತ್ನಿ ದೀಪಾ (35), ಪುತ್ರಿಯರಾದ 3ನೇ ತರಗತಿಯ ಶ್ರೇಯಾ (9) ಹಾಗೂ ಯುಕೆಜಿ ವಿದ್ಯಾರ್ಥಿನಿ ಪ್ರಿಯಾ (6) ಮೃತಪಟ್ಟವರು. 

ದೀಪಾ ಹಲವು ಸಮಯಗಳಿಂದ ಗರ್ಭಕೋಶದ ತೊಂದರೆಯಿಂದ  ಬಳಲುತ್ತಿದ್ದು, ಚಿಕಿತ್ಸೆ ಪಡೆದರೂ ಗುಣಮುಖವಾಗದ ಕಾರಣ ಈ ಕೃತ್ಯವೆಸಗಿದ್ದಾರೆ ಎಂದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸ್ಥಳಕ್ಕೆ ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ ಸಹಿತ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದಾರೆ. 

ಒಟ್ಟಿಗೆ ಊಟ ಮಾಡಿದ್ದರು
ಕಾರ್ಕಳದಲ್ಲಿ ಕೋಳಿ ಫಾರ್ಮ್ ವ್ಯವಹಾರ ಮಾಡಿ ಕೊಂಡಿರುವ ಮೂಲತಃ ಶಿವಮೊಗ್ಗದವರಾದ ಸಂತೋಷ ಅವರು ಶನಿವಾರ ರಾತ್ರಿ 8.45ರ ಹೊತ್ತಿಗೆ ಮನೆಗೆ ಬಂದು ಪತ್ನಿ ಮತ್ತು ಮಕ್ಕಳ ಜತೆಗೆ ಊಟ ಮಾಡಿ ಮಲಗಿದ್ದರು. ರಾತ್ರಿ 10.30ರ ಹೊತ್ತಿಗೆ ಮಕ್ಕಳು ಹೊಟ್ಟೆ ಉರಿ ಎನ್ನುತ್ತಾ ವಾಂತಿ ಮಾಡಿದ್ದು, ಕೂಡಲೇ ಕಾರ್ಕಳ ಆಸ್ಪತ್ರೆಗೆ ಕೊಂಡೊಯ್ದªರು. ಅಲ್ಲಿ ತಾನು ವಿಷ ನೀಡಿದ್ದೇನೆ ಎಂದು ದೀಪಾ ತಿಳಿಸಿದ್ದರಿಂದ ಕೂಡಲೇ ಮಣಿಪಾಲಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ ರವಿವಾರ ಕೊನೆಯುಸಿರೆಳೆದರು. ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾಲಿಗೆ ವಿಷ ಬೆರೆಸಿದ್ದಳು
ಗಂಡ ಬರುವ ಮೊದಲೇ ದೀಪಾ ತನ್ನ ಎರಡು ಮಕ್ಕಳಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿದ್ದಾರೆ ಎನ್ನಲಾಗಿದೆ.

ಶಾಲೆಗೆ ಹೋಗುತ್ತೇನೆ ಅಪ್ಪ !
ವಿಷ ಕುಡಿದು ಸಾವು ಬದುಕಿನ ನಡುವೆ ಹೊರಳಾಡುತ್ತಿದ್ದ 3ನೇ ತರಗತಿಯ ಶ್ರೇಯಾ ರವಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ “ನಾನು ಶಾಲೆಗೆ ಹೋಗುತ್ತೇನೆ ಅಪ್ಪ’ ಎಂದಿದ್ದಳು ಎನ್ನಲಾಗಿದೆ.

ಟಾಪ್ ನ್ಯೂಸ್

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಹಬ್ಬಕ್ಕಿಲ್ಲ ಹೊಸ ಮೊಬೈಲ್‌? ದೀಪಾವಳಿ ಸೇಲ್‌ಗೆ ಅಡ್ಡಿಯಾದ ಚಿಪ್‌ ಕೊರತೆ

ಹಬ್ಬಕ್ಕಿಲ್ಲ ಹೊಸ ಮೊಬೈಲ್‌? ದೀಪಾವಳಿ ಸೇಲ್‌ಗೆ ಅಡ್ಡಿಯಾದ ಚಿಪ್‌ ಕೊರತೆ

ಗ್ರಾಮ ಪಂಚಾಯತ್‌ ಸ್ವಚ್ಛತೆಗೆ ಸ್ತ್ರೀ ಸಾರಥ್ಯ

ಗ್ರಾಮ ಪಂಚಾಯತ್‌ ಸ್ವಚ್ಛತೆಗೆ ಸ್ತ್ರೀ ಸಾರಥ್ಯ

ರಸಗೊಬ್ಬರ ಖಾಲಿ; ರಾಜ್ಯದಲ್ಲಿ ಹಿಂಗಾರು, ನೀರಾವರಿ ಬೆಳೆಗಳಿಗೆ ರಸಗೊಬ್ಬರದ ಅಭಾವ

ರಾಜ್ಯದಲ್ಲಿ ಹಿಂಗಾರು,ನೀರಾವರಿ ಬೆಳೆಗಳಿಗೆ ರಸಗೊಬ್ಬರದ ಅಭಾವ

ದೇಗುಲಗಳ ರಕ್ಷಣೆ ಕಾಯ್ದೆಗೆ ತಿದ್ದುಪಡಿ ಸ್ವಾಗತಾರ್ಹ

ದೇಗುಲಗಳ ರಕ್ಷಣೆ ಕಾಯ್ದೆಗೆ ತಿದ್ದುಪಡಿ ಸ್ವಾಗತಾರ್ಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜನಪ್ರತಿನಿಧಿಗಳೇ ಒತ್ತಡ ಹೇರಬೇಕು

ಜನಪ್ರತಿನಿಧಿಗಳೇ ಒತ್ತಡ ಹೇರಬೇಕು

Untitled-1

ಕಾಪು: ಗೆಳೆಯರೆ ಶಾಲೆಗೆ ಹೊರಡೋಣ ಬನ್ನಿ ಕಾರ್ಯಕ್ರಮಕ್ಕೆ ಶಾಸಕ ಲಾಲಾಜಿ‌ ಮೆಂಡನ್ ಚಾಲನೆ

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

ವ್ಯಾಕ್ಸಿನೇಶನ್‌: ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ಕೇಂದ್ರ ಪ್ರಥಮ

ವ್ಯಾಕ್ಸಿನೇಶನ್‌: ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ಕೇಂದ್ರ ಪ್ರಥಮ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಆ್ಯಂಬುಲೆನ್ಸ್‌ ನಲ್ಲಿ ಸಾಗುವಾನಿ ನಾಟ ಕಳ್ಳಸಾಗಣೆ

ಆ್ಯಂಬುಲೆನ್ಸ್‌ ನಲ್ಲಿ ಸಾಗುವಾನಿ ನಾಟ ಕಳ್ಳಸಾಗಣೆ

ಜನಪ್ರತಿನಿಧಿಗಳೇ ಒತ್ತಡ ಹೇರಬೇಕು

ಜನಪ್ರತಿನಿಧಿಗಳೇ ಒತ್ತಡ ಹೇರಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.