ಪುತ್ತಿಗೆ ಸೇತುವೆ-ಗರ್ಡರ್‌ ಜೋಡಣೆ: 12.85 ಕೋ. ರೂ. ವೆಚ್ಚದಲ್ಲಿ ನಿರ್ಮಾಣ

Team Udayavani, Dec 13, 2022, 5:40 AM IST

ಪುತ್ತಿಗೆ ಸೇತುವೆ-ಗರ್ಡರ್‌ ಜೋಡಣೆ: 12.85 ಕೋ. ರೂ. ವೆಚ್ಚದಲ್ಲಿ ನಿರ್ಮಾಣ

ಉಡುಪಿ: ಹೆಬ್ರಿ-ಮಲ್ಪೆ ಹೆದ್ದಾರಿ ಅಭಿವೃದ್ಧಿ ಯೋಜನೆ ಭಾಗವಾಗಿ ರಾ.ಹೆ. 169ಎ ನಲ್ಲಿ ಪುತ್ತಿಗೆಯಲ್ಲಿ ಸ್ವರ್ಣಾ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಅಂತಿಮ ಹಂತದ ಗರ್ಡರ್‌ ಜೋಡಣೆಗೆ ಸಿದ್ಧತೆ ನಡೆದಿದೆ.

ರಾ. ಹೆ. ಪ್ರಾಧಿಕಾರ ವತಿಯಿಂದ 12.85 ಕೋ. ರೂ. ವೆಚ್ಚದಲ್ಲಿ ನಿರ್ಮಿ ಸುವ 140 ಮೀಟರ್‌ ಉದ್ದದ, 16.5 ಮೀ. ಅಗಲದ ಸೇತುವೆ ಇದಾಗಿದೆ. 2018 ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಒಂದು ವರ್ಷ ಕೆಲಸ ನಡೆಸಲು ಸಾಧ್ಯವಾಗಿರಲಿಲ್ಲ. ಅನಂತರ ಕಾಮಗಾರಿ ವೇಗ ಪಡೆದುಕೊಂಡಿದ್ದು, ಇದೀಗ ಗರ್ಡರ್‌ ಅಳವಡಿಕೆ ಹಂತಕ್ಕೆ ತಲುಪಿದೆ. ಈ ಸೇತುವೆ ಒಟ್ಟು 5 ಬೃಹತ್‌ ಪಿಲ್ಲರ್‌ಗಳನ್ನು ಒಳಗೊಂಡಿದೆ. ಸೇತುವೆ ನಿರ್ಮಾಣಕ್ಕೆ 35 ಮೀ.ಉದ್ದದ 20 ಗರ್ಡರ್‌ಗಳನ್ನು ಕಾಮಗಾರಿ ಸ್ಥಳದಲ್ಲೇ ನಿರ್ಮಿಸಲಾಗಿದೆ. 30ಕ್ಕೂ ಅಧಿಕ ಕಾರ್ಮಿಕರು ರಾತ್ರಿ, ಹಗಲು 8 ತಿಂಗಳು ಶ್ರಮಿಸಿದ್ದಾರೆ.

220 ಮೆ. ಟನ್‌ ಸಾಮರ್ಥ್ಯದ ಕ್ರೇನ್‌ ಬಳಕೆ
ಗರ್ಡರ್‌ ಅಳವಡಿಕೆಗೆ 220 ಮೆಟ್ರಿಕ್‌ ಟನ್‌ ಮತ್ತು 200 ಮೆ. ಟನ್‌ ಭಾರವನ್ನು ಎತ್ತುವ ಸಾಮರ್ಥ್ಯ ಎರಡು ಬೃಹತ್‌ ಕ್ರೇನ್‌ಗಳನ್ನು ಮಂಗಳೂರು ಮತ್ತು ಬೆಂಗಳೂರಿನಿಂದ ಬಾಡಿಗೆಗೆ ತಂದಿದ್ದು, ವಿಶೇಷ ಹೈಡ್ರಾಲಿಕ್‌ ತಂತ್ರಜ್ಞಾನವನ್ನು ಇದು ಹೊಂದಿದೆ. ಒಂದು ಗರ್ಡರ್‌ ಅಳವಡಿಕೆಗೆ ಮೂರು ಲಕ್ಷ ರೂ. ವ್ಯಯಿಸಲಾಗುತ್ತದೆ ಎಂದು ಎಂಜಿನಿಯರ್‌ ತಿಳಿಸಿದ್ದಾರೆ.

ಮಳೆಯಿಂದಾಗಿ ಎರಡು ದಿನ ಮುಂದಕ್ಕೆ
ಬೃಹತ್‌ ಸೇತುವೆಗಳ ನಿರ್ಮಾಣದಲ್ಲಿ ಅನುಭವ ಇರುವ ಕುಂದಾಪುರ ಮೂಲದ ಸಂಸ್ಥೆಯೊಂದು ಈ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿದೆ. 20 ಗರ್ಡರ್‌ ಲಾಂಚಿಂಗ್‌ಗೆ
10 ದಿನಗಳ ಕಾಲಾವಕಾಶ ಬೇಕಿದ್ದು, ಸೇತುವೆ ಮೇಲ್ಭಾಗದಲ್ಲಿ ಡೆಕ್‌ವರ್ಕ್‌ ಮತ್ತು ಸ್ಲಾéಬ್‌ ಕೆಲಸಕ್ಕೆ ಒಂದು ತಿಂಗಳು ಸಮಯ ಬೇಕು. ಸೋಮವಾರ ಗರ್ಡರ್‌ ಲಾಂಚಿಂಗ್‌ಗೆ
ಎಲ್ಲ ತಯಾರಿ ಮಾಡಿಕೊಂಡಿದ್ದೆವು. ವ್ಯವಸ್ಥಿತವಾಗಿ, ಸೂಕ್ಷ್ಮವಾಗಿ ಕಾಮಗಾರಿ ನಿರ್ವಹಿಸಬೇಕಿದ್ದು, ರವಿವಾರ ರಾತ್ರಿ ಸುರಿದ ಮಳೆಯಿಂದಾಗಿ ಮಣ್ಣು ಕೆಸರು ಆಗಿರುವುದರಿಂದ ಕ್ರೇನ್‌ಗಳ ಚಾಲನೆಗೆ ಕಷ್ಟವಾಗಿದೆ. ಎರಡು ದಿನ ಲಾಂಚಿಂಗ್‌ ಕಾರ್ಯ ಮುಂದೂಡಲಾಗಿದೆ. ಮಾರ್ಚ್‌ ತಿಂಗಳ ಒಳಗೆ ಸೇತುವೆ ಕೆಲಸ ಸಂಪೂರ್ಣಗೊಳ್ಳಲಿದೆ ಎಂದು ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-thekkatte

ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.