Road Mishap ಕಾಪು: ಟ್ರಕ್ ಢಿಕ್ಕಿ; ಕಾರು ಜಖಂ
Team Udayavani, May 22, 2024, 10:00 PM IST
ಕಾಪು: ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿಗೆ ಟ್ರಕ್ ಢಿಕ್ಕಿ ಹೊಡೆದ ಘಟನೆ ಕಾಪು ವಿದ್ಯಾನಿಕೇತನ ಶಾಲೆ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಉಡುಪಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಅಡ್ಡ ಚಲಿಸಿದ್ದು ಈ ವೇಳೆ ಅದೇ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್ ಕಾರಿಗೆ ಢಿಕ್ಕಿ ಹೊಡೆದಿದೆ.
ಟ್ರಕ್ ಢಿಕ್ಕಿ ಹೊಡೆದ ರಭಸಕ್ಕೆ ಕಾರು ಡಿವೈಡರ್ ಮೇಲೇರಿ ಹೋಗಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ಕು ಮಂದಿ ಸಣ್ಣ ಪುಟ್ಟಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದಾಗಿ ಕೆಲ ಕಾಲ ಹೆದ್ದಾರಿ ಸಂಚಾರದಲ್ಲಿ ವೃತ್ಯಯವುಂಟಾಗಿದ್ದು ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ಸುಗಮಗೊಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಬೈಕ್-ಸ್ಕೂಟರ್ ಢಿಕ್ಕಿ; ಗಾಯ
Bakrid: ಅನಧಿಕೃತ ಜಾನುವಾರು ವಧೆ, ಸಾಗಣೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ
Manipal ಎಂಇಐಎಲ್ “ಇಂಡಿಯಾ 5000 ಅವಾರ್ಡ್ಸ್’ ಪುರಸ್ಕಾರಕ್ಕೆ ಆಯ್ಕೆ
ರಾಮ ನಿರ್ಯಾಣದ ಪ್ರವಚನಗೈಯುತ್ತಲೇ ಮೋಕ್ಷಯಾನ ಕೈಗೊಂಡ ದ್ವೈತ ವೇದಾಂತ ವಿಚಕ್ಷಣ
Udupi: ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
MUST WATCH
ಹೊಸ ಸೇರ್ಪಡೆ
ಶ್ರುತಿ ಬಿ.ಆರ್., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ
ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು
ಅನುಚಿತ ವರ್ತನೆ ; ಜೆಸ್ಕಾಂ ಗುತ್ತಿಗೆದಾರನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ
ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್ಡಿಕೆ
ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.