ಮಲೆನಾಡಲ್ಲೂ ಬಸವಳಿದ ನದಿಗಳು!

Team Udayavani, May 21, 2019, 10:56 AM IST

ಶಿರಸಿ: ಮಳೆಯ ನಾಡು ಮಲೆನಾಡು. ಆದರೆ, ಈಚೆಗಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಗಣನೀಯ ಏರಿಳಿತ ಆಗುತ್ತಿರುವ ಕಾರಣದಿಂದ ಇಲ್ಲಿನ ನದಿಗಳು ಜೀವಂತಿಕೆ ಕಳೆದುಕೊಳ್ಳುವಂತಾಗಿದೆ. ವರವಾಗಿದ್ದ ನದಿಗಳು ಹರಿವು ನಿಲ್ಲಿಸಿ ನಿಧಾನವಾಗಿ ಬರದ ಛಾಯೆ ಮೂಡಿಸುತ್ತಿವೆ. ದಿನದಿಂದ ದಿನಕ್ಕೆ ನೀರಿನ ಬವಣೆ ದ್ವಿಗುಣವಾಗುವ ಲಕ್ಷಣಗಳು ದಟ್ಟವಾಗಿದೆ.

ಶಿರಸಿ ತಾಲೂಕಿನಲ್ಲಿ ಹರಿವ ವರದಾ, ಅಘನಾಶಿನಿ, ಶಾಲ್ಮಲಾ ನದಿಗಳು ಈ ಬಾರಿ ಬೇಸಿಗೆ ಆರಂಭದಲ್ಲೇ ನಿಧಾನವಾಗಿ ಹರಿವು ನಿಲ್ಲಿಸಿದ್ದರ ಪರಿಣಾಮ ಬಾವಿಗಳಲ್ಲೂ ಜಲ ಕೊರತೆ ಆರಂಭವಾಗಿದೆ. ಕಳೆದ ಏಪ್ರೀಲ್ ಕೊನೆ, ಮೇ ಮೊದಲ ವಾರದ ತನಕವೂ ಅಷ್ಟಾಗಿ ಕಾಡದ ನೀರು ಈಗ ಕೊರತೆಯನ್ನು ಬಳುವಳಿಯಾಗಿ ನೀಡುತ್ತಿದೆ.

ಮಳೆಗಾಲದಲ್ಲಿ ತುಂಬಿ ಹರಿವ ವರದಾ ನದಿ ಈಗ ಒಣಗಿದ್ದರೆ, ಇನ್ನೊಂದೆಡೆ ಸ್ವಲ್ಪವಾದರೂ ಹರಿವು ಉಳಿಸಿಕೊಳ್ಳುತ್ತಿದ್ದ, ಗುಂಡಿಗಳಲ್ಲೂ ತುಂಬಿದ ನೀರು ಕಾಣಿಸುತ್ತಿದ್ದ ಶಾಲ್ಮಲಾ ನದಿ ಕೂಡ ತನ್ನ ಓಟವನ್ನು ನಿಲ್ಲಿಸಿದೆ. ಆಟದ ಮೈದಾನದಂತೆ ಬೋರಲಾಗಿದೆ.

ಇನ್ನೊಂದೆಡೆ ಅಘನಾಶಿನಿ ನದಿ ಕೂಡ ತನ್ನ ಜಲದ ಓಟವನ್ನು ನಿಲ್ಲಿಸಿದೆ. ಕೆಂಗ್ರೆ ಹಳ್ಳ ಕೂಡ ಬರಿದಾಗಿದೆ. ಈ ಎರಡೂ ನದಿಗಳು ಶಿರಸಿಯ ಸುಮಾರು 70 ಸಾವಿರ ಜನರಿಗೆ ಕುಡಿಯುವ ನೀರು ಒದಗಿಸುತ್ತಿದ್ದು, ಈ ಬಾರಿ ಕಳೆದ ಬಾರಿಗಿಂತ ಅಧಿಕ ತುಟಾಗ್ರತೆ ಸೃಷ್ಟಿಯ ಕಾಲ ಎಂದು ಹೇಳಲಾಗುತ್ತಿದೆ. ಮೂರು ದಿನಗಳಿಗೊಮ್ಮೆ ನೀರು ಬಿಡುತ್ತಿದ್ದು, ಇದೇ ಮುಂದುವರಿದರೆ ಐದಾರು ದಿನಗಳಿಗೊಮ್ಮೆ ನೀರು ಬಿಡುವ ಸಂದರ್ಭ ಕೂಡ ಬರಲಿದೆ ಎನ್ನುತ್ತಿದ್ದಾವೆ ನಗರಸಭೆ ಮೂಲಗಳು.

ಈ ಮಧ್ಯೆ ಕೆಂಗ್ರೆಯಲ್ಲಿ, ಅಘನಾಶಿನಿ ಮಾರಿಗದ್ದೆ ಸಮೀಪ ನೀರು ನಿಲ್ಲಿಸಲು ಕಟ್ಟು ಹಾಕತ್ತಿದ್ದ ರೈತರ ಒಡ್ಡುಗಳನ್ನೂ ನಗರಸಭೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಈ ಒಡ್ಡು ತೆರವು ಮಾಡಿದ್ದರಿಂದ ನಮ್ಮ ಬಾವಿಗಳಲ್ಲಿ ನೀರು ಕಡಿಮೆ ಆಗಿದೆ ಎನ್ನುವುದು ಕೆಂಗ್ರೆ ಭಾಗದ ನಿವಾಸಿಗಳ ಅಳಲು. ನಗರಸಭೆ ಮಾತ್ರ ಒಡ್ಡು ಕಟ್ಟಲು ಅಡ್ಡಿಯಿಲ್ಲ, ನಮಗೆ ಆಗದಾ ಎಂಬ ಪ್ರಶ್ನೆ ಎತ್ತಿದ್ದಾರೆ. ಶಾಲ್ಮಲಾ ಹರಿವು ನಿಲ್ಲಿಸಿದ್ದರಿಂದ ನದಿಯೊಳಗೇ ಇರುವ ಸಹಸ್ರಲಿಂಗದ ಶಿವನ ಬಳಿಯೂ ನೀರಿಲ್ಲದಂತಾಗಿದೆ.

ಶಿರಸಿಯಲ್ಲಿ ಜೀವಜಲ ಕಾರ್ಯಪಡೆ ನೀರು ಉಳಿಸುವ ಕೆರೆ ಅಭಿವೃದ್ಧಿ ಕಾರ್ಯವನ್ನು ದೊಡ್ಡ ಪ್ರಮಾಣದಲ್ಲೇ ಶ್ರೀನಿವಾಸ ಹೆಬ್ಟಾರ ನೇತೃತ್ವದಲ್ಲಿ ನಡೆಸಿದ್ದಾರೆ. ಬಾವಿಗಳ ನೀರು ಬಳಸಿ ಮಿತವಾಗಿ ಇರಲಿ ನೀರಿನ ವ್ಯಯ ಎಂಬ ಮಾತುಗಳೂ ವ್ಯಕ್ತವಾಗಿದೆ.

ಶಿರಸಿ ನೀರ್ನಳ್ಳಿ ಜನತಾ ಕಾಲನಿಯಲ್ಲೂ ನೀರಿನ ಸಮಸ್ಯೆ ತಲೆದೋರಿದೆ. ಬನವಾಸಿ ಹೋಬಳಿಯ ಐದಾರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ತಾತ್ಕಾಲಿಕವಾಗಿ ಪೂರೈಕೆಗೆ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ. ಕಾಡಿನಲ್ಲಿರುವ ವನ್ಯಮೃಗಗಳಿಗೆ ತೊಂದರೆ ಆಗಬಾರದು ಎಂದು ಅರಣ್ಯ ಇಲಾಖೆ ಬನವಾಸಿ ವಲಯದಲ್ಲಿ ನೀರಿನ ಟಾಕಿ ಇಡಲೂ ಮುಂದಾಗಿದ್ದಾರೆ. ಉಳಿದ ಭಾಗದ ವನ್ಯಜೀವಿಗಳಿಗೆ ನೀರಿನ ಕೊರತೆ ಉಂಟಾಗಿದೆ. ಅವುಗಳಿಗೆ ಏನು ಮಾಡಬೇಕು ಎಂಬುದೂ, ಉಭಯ ವಾಸಿಗಳು, ಜಲಚರಗಳಿಗೂ ಈಗ ಜಲ ಸಂಕಷ್ಟ ಕಾಡುತ್ತಿದೆ.

ಶಿರಸಿಯ ಉಷ್ಣಾಂಶ ಮಾಧ್ಯಾಹ್ನ 1 ಗಂಟೆ ಸುಮಾರಿಗೆ 39ರಿಂದ 41 ಡಿಗ್ರಿ ಸೆಲ್ಸಿಯಸ್‌ ಸರಾಸರಿ ಇದ್ದು, ಮಳೆಯೂ ಬಾರದೇ ಕಂಗಾಲಾಗುವಂತೆ ಮಾಡಿದೆ. ಉಷ್ಣಾಂಶ ರಾತ್ರಿ 18:20ಕ್ಕೆ ಬರುತ್ತಿರುವುದರಿಂದ ಅಡಕೆ ಬೇಸಾಯದ ಭವಿಷ್ಯದ ಬೆಳೆಯ ಮೇಲೂ ಪರಿಣಾಮ ಉಂಟು ಮಾಡುವಂತೆ ಆಗಿದೆ.

ಜೀವಜಲ ಕಾರ್ಯಪಡೆ ಎಂಟತ್ತು ಕೆರೆಗಳನ್ನು ಮಾದರಿಯಾಗಿ ಮಾಡಿದೆ. ಮನು ವಿಕಾಸ ಸಂಸ್ಥೆ ಕೆಲವನ್ನು ಮಾಡಿದೆ. ಇನ್ನೂ ಕೆರೆಗಳ ಅಭಿವೃದ್ಧಿ ಆಗಬೇಕಾದ್ದು ಸಾಕಷ್ಟು ಇದೆ. ಎಲ್ಲರೂ ಒಟ್ಟಾಗಿ ಕೆರೆಯ, ಕಾಡಿನ ಉಳಿವಿಗೆ ಪಣ ತೊಡದೇ ಇದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಷ್ಟ ಎಂಬುದಂತೂ ಸುಳ್ಳಲ್ಲ.

•ರಾಘವೇಂದ್ರ ಬೆಟ್ಟಕೊಪ್ಪ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹೊನ್ನಾವರ: ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆಯವರ ಸೆಲ್ಕೋ ಸೋಲಾರ್‌ ಸಂಸ್ಥೆ ಸೌರಶಕ್ತಿಯನ್ನು ಬಹುಪಯೋಗಿಯಾಗಿ ಗ್ರಾಮೀಣ ಭಾಗದ ಜನತೆಗೆ ಜೀವನಾಧಾರವಾಗಿ...

  • ಭಟ್ಕಳ: ಕಳೆದ ಮೂರು ದಿನಗಳಿಂದ ಶಿರಾಲಿ ಗ್ರಾಪಂನ್ನೇ ಮೀನು ಮಾರುಕಟ್ಟೆಯನ್ನಾಗಿ ಮಾಡಿಕೊಂಡ ಮೀನುಗಾರರ ಬೇಡಿಕೆಗೆ ಸ್ಪಂದಿಸುವಲ್ಲಿ ಗ್ರಾಪಂ ವಿಫಲವಾಗಿದ್ದು...

  • ಮುಂಡಗೋಡ: ಅಪಾರ ಪ್ರಮಾಣದ ನೀರು ಹರಿದು ಬಂದು ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಶಿಡ್ಲಗುಂಡಿ ಸೇತುವೆ ಕಾಮಗಾರಿ ಕಳೆದ ಎರಡು ದಿನಗಳಿಂದ ಆರಂಭವಾಗಿರುವುದು ಸಾರ್ವಜನಿಕರಿಗೆ...

  • ಶಿರಸಿ: ನಾಡಿನ ಹೆಸರಾಂತ ಮಾರಿಕಾಂಬಾ ದೇವಸ್ಥಾನಕ್ಕೂ ಅನ ಧಿಕೃತ ಫೇಸ್‌ಬುಕ್‌, ವಾಟ್ಸಆ್ಯಪ್‌, ಟ್ವಿಟ್ಟರ್‌ಗಳ ಕಾಟದಿಂದ ಅನಧಿಕೃತ ಮಾಹಿತಿಗಳು ರವಾನೆಯಾಗಿ ಅನೇಕ...

  • ಹೊನ್ನಾವರ: ಜನಜೀವನಕ್ಕೆ ಉತ್ತಮ ಸಂಸ್ಕಾರ ಯಕ್ಷಗಾನ ಕಲೆಯಿಂದ ಸಿಗುತ್ತಿದೆ. ನಾಡಿನಲ್ಲಿ ಯಕ್ಷಗಾನ ಉಳಿಯಬೇಕು. ಇದಕ್ಕೆ ಸರಕಾರ ಮತ್ತು ಸಮಾಜ ಪ್ರೋತ್ಸಾಹ ನೀಡುವ...

ಹೊಸ ಸೇರ್ಪಡೆ