ಉತ್ತರ ಕನ್ನಡದಲ್ಲಿ ಪ್ರಬಲ ಸ್ಪರ್ಧೆ; ಕಾರವಾರ ಅತಂತ್ರ  

Team Udayavani, Sep 3, 2018, 4:39 PM IST

ಕಾರವಾರ : ಉತ್ತರ ಕನ್ನಡದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫ‌ಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದು  ಮೂರು ಕಡೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. 

ಕಾರವಾರದಲ್ಲಿ  ಅತಂತ್ರ ನಗರಸಭೆ
31 ವಾರ್ಡ್‌ಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 11 ಸ್ಥಾನಗಳನ್ನು ಗೆದ್ದುಕೊಂಡಿವೆ. ಜೆಡಿಎಸ್‌ 4 ಸ್ಥಾನಗಳನ್ನು ಗೆದ್ದಿದ್ದು, ಪಕ್ಷೇತರರು 5 ಮಂದಿ ಆಯ್ಕೆಯಾಗಿದ್ದು ಅವರೇ ನಿರ್ಣಾಯಕರಾಗಿದ್ದಾರೆ.

ಶಿರಸಿ ಬಿಜೆಪಿಗೆ 
ಶಿರಸಿ ನಗರಸಭೆಯಲ್ಲಿ 17 ಸ್ಥಾನಗಳನ್ನು ಗೆದ್ದು  ಬಿಜೆಪಿ ಅಧಿಕಾರಕ್ಕೇರಿದ್ದು,ಕಾಂಗ್ರೆಸ್‌ 9 , ಜೆಡಿಎಸ್‌ 1 ಮತ್ತು ಪಕ್ಷೇತರರು 4 ಸ್ಥಾನಗಳನ್ನು ಗೆದ್ದಿದ್ದಾರೆ. 

ದಾಂಡೇಲಿ ನಗರಸಭೆ ಉಳಿಸಿಕೊಂಡ ಕಾಂಗ್ರೆಸ್‌ 
31 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದು ಅಧಿಕಾರ ಹಿಡಿದಿದೆ. ಬಿಜೆಪಿ 11 ಮತ್ತು ನಾಲ್ವರು ಪಕ್ಷೇತರರು ಗೆದ್ದಿದ್ದಾರೆ.

ಕುಮಟಾ ಬಿಜೆಪಿಗೆ 
ಕುಮಟಾ ಪುರಸಭೆಯಲ್ಲಿ 16 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅಧಿಕಾರಕ್ಕೇರಿದೆ. ಕಾಂಗ್ರೆಸ್‌ 6 , ಜೆಡಿಎಸ್‌ 1 ಸ್ಥಾನಗಳನ್ನು ಗೆದ್ದಿದೆ. 

ಹಳಿಯಾಳ ಕಾಂಗ್ರೆಸ್‌ಗೆ 
ಹಳಿಯಾಳ ಪುರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್‌ 14 , ಬಿಜೆಪಿ 7 , ಜೆಡಿಎಸ್‌ 1 ಮತ್ತು ಪಕ್ಷೇತರ 1 ಸ್ಥಾನಗಳನ್ನು ಗೆದ್ದಿದ್ದಾರೆ. 

ಅಂಕೋಲಾ ಪುರಸಭೆ ಅತಂತ್ರ 
23 ಕ್ಷೇತ್ರಗಳಿರುವ ಆಂಕೋಲಾ ಪುರಸಭೆ ಅತಂತ್ರವಾಗಿದ್ದು ಕಾಂಗ್ರೆಸ್‌ 10 , ಬಿಜೆಪಿ 8 ಮತ್ತು 5 ಪಕ್ಷೇತರರು ಗೆದ್ದಿದ್ದಾರೆ. 

ಮುಂಡಗೋಡ ಬಿಜೆಪಿ ಪಾಲು 
ಮುಂಡಗೋಡ ಪಟ್ಟಣ ಪಂಚಾಯತ್‌‌ನಲ್ಲಿ  10 ಸ್ಥಾನಗಳಲ್ಲಿ  ಬಿಜೆಪಿ ಅಧಿಕಾರಕ್ಕೇರಿದ್ದು , ಕಾಂಗ್ರೆಸ್‌ ನಿಂದ 9 ಮಂದಿ ಜಯಗಳಿಸಿದ್ದಾರೆ. 

ಯಲ್ಲಾಪುರ ಉಳಿಸಿಕೊಂಡ ಕಾಂಗ್ರೆಸ್‌ 
ಯಲ್ಲಾಪುರ ಪಟ್ಟಣ ಪಂಚಾಯತ್‌ನಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಕಾಂಗ್ರೆಸ್‌ ಅಧಿಕಾರ ಹಿಡಿದಿದ್ದು , ಬಿಜೆಪಿ 5 , ಜೆಡಿಎಸ್‌ 1 ಮತ್ತು ಪಕ್ಷೇತರ 1 ಸ್ಥಾನದಲ್ಲಿ ಜಯಗಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಜೋಯಿಡಾ: ತಾಲೂಕಿನ ಡೇರಿ ಗ್ರಾಮದಲ್ಲಿ ಪ್ರಕೃತಿ ಸಂಸ್ಥೆ ಶಿರಸಿ ಮತ್ತು ಜೇನು ಸಾಕಣಿಕೆದಾರರ ಸಂಘ ಡೇರಿ ಸಂಯುಕ್ತ ಆಶ್ರಯದಲ್ಲಿ ಜೋಯಿಡಾ ತಾಲೂಕಿನ ಪ್ರಥಮ ಜೇನು...

  • ಅಂಕೋಲಾ: ತಾಲೂಕಿನಾದ್ಯಂತ ಭೀಕರ ಬರಗಾಲ ಎದುರಾಗಿದೆ. ಈ ವೇಳೆ ಅನೇಕರು ಜಲದಾನ ಮಾಡುವುದರ ಮೂಲಕ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿನ...

  • ಯಲ್ಲಾಪುರ: ಬೇಸಿಗೆಯ ತೀವೃತೆ ಹೆಚ್ಚಿದ್ದು, ತಾಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ಕುಡಿಯುವ ನೀರು ಸೇರಿದಂತೆ ಅಡಕೆ, ಬಾಳೆ ತೋಟಗಳು ನೀರಿಲ್ಲದೇ ಒಣಗಿ ರೈತರಲ್ಲಿ...

  • ಕುಮಟಾ: ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಸಮುದ್ರದಾಳದಲ್ಲಿ ಕಾಣಿಸಿದೆ ಎಂದು ಭಾರತೀಯ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದು, ತಕ್ಷಣ ಬೋಟನ್ನು ಮೇಲಕ್ಕೆತ್ತುವ...

  • ಅಂಕೋಲಾ: ತಾಲೂಕಿನ ಜನತೆಗೆ ನೀರುಣಿಸುವ ಗಂಗಾವಳಿ ನದಿ ನೀರು ಸಂಪೂರ್ಣ ಬತ್ತಿದ್ದು ಪುರಸಭಾ ವ್ಯಾಪ್ತಿಯ ಜನತೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ....

ಹೊಸ ಸೇರ್ಪಡೆ