ದಾಂಡೇಲಿ-ಜೊಯಿಡಾ ತಾಲೂಕಿನಲ್ಲಿ ಚುರುಕುಗೊಂಡ ಪ್ರವಾಸೋದ್ಯಮ ಚಟುವಟಿಕೆ

Team Udayavani, Sep 22, 2021, 4:43 PM IST

Tourism

ದಾಂಡೇಲಿ : ದಾಂಡೇಲಿ-ಜೊಯಿಡಾ ತಾಲೂಕಿನ ಪ್ರವಾಸೋದ್ಯಮದ ಬಹುದೊಡ್ಡ ಶಕ್ತಿಯಾದ ಜಲಕ್ರೀಡೆ ಹಾಗೂ ಜಲ ಸಂಪನ್ಮೂಲ ಸಂಬಂಧಿತ ಚಟುವಟಿಕೆಗಳಿಗೆ ಇದೀಗ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಅನುಮತಿಯನ್ನು ನೀಡುವುದರ ಮೂಲಕ ಪ್ರವಾಸೋದ್ಯಮ ಮತ್ತೆ ಈ ಹಿಂದಿನ ಗತವೈಭವವನ್ನು ಪಡೆಯಲು ತುದಿಗಾಲಲ್ಲಿ ನಿಂತಿದೆ.

ಕಳೆದ ಕೆಲ ಸಮಯಗಳಿಂದ ಜಲಕ್ರೀಡೆಗೆ ಅನುಮತಿಯನ್ನು ಸ್ಥಗಿತಗೊಳಿಸಿದ್ದರಿಂದ ಪ್ರವಾಸೋದ್ಯಮ ಸಂಪೂರ್ಣ ದುಸ್ಥಿತಿಯತ್ತ ಸಾಗಿತ್ತು. ಸಾವಿರಾರು ಯುವ ಜನತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗದಾಸರೆಯನ್ನು ಒದಗಿಸಿರುವ ಪ್ರವಾಸೋದ್ಯಮದ ಬೆಳವಣಿಗೆಗೆ ಪ್ರಮುಖ ಆಸರೆಯೆ ಇಲ್ಲಿಯ ಕಾಳಿ ನದಿಯಲ್ಲಿನ ಜಲಕ್ರೀಡೆಗಳು.

ಕೋವಿಡ್ ಹಿನ್ನೆಲೆಯಲ್ಲಿ ಜಲಕ್ರೀಡೆಗೆ ಅನುಮತಿಯನ್ನು ಸ್ಥಗಿತಗೊಳಿಸಲಾಗಿದ್ದು, ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡು ಪ್ರವಾಸೋದ್ಯಮ ಚಟುವಟಿಕೆ ಕುಂಠಿತಗೊಂಡಿತ್ತು. ಸೆ:21 ರಂದು ಉತ್ತರ ಕನ್ನಡ ಜಿಲ್ಲಾಧಿಕಾರಿಯವರಾದ ಮುಲ್ಲೈ ಮುಗಿಲನ್ ಅವರು ಜಲಕ್ರೀಡೆಗಳು ಹಾಗೂ ಜಲ ಸಂಬಂಧಿತ ಚಟುವಟಿಕೆಗಳಿಗೆ ಅನುಮತಿಯನ್ನು ನೀಡಿ ಆದೇಶವನ್ನು ಹೊರಡಿಸಿರುವುದು ದಾಂಡೇಲಿ-ಜೊಯಿಡಾ ತಾಲೂಕಿನ ಪ್ರವಾಸೋದ್ಯಮಿಗಳಿಗೆ ನೆಮ್ಮದಿ ತಂದಿರುವುದರ ಜೊತೆಗೆ ಹರ್ಷವನ್ನು ತಂದೊಡ್ಡಿದೆ.

ಇದನ್ನೂ ಓದಿ:ದೇಶದ ಬೃಹತ್ ಮತಾಂತರ ಜಾಲ ಭೇದಿಸಿದ ಉತ್ತರಪ್ರದೇಶದ ಎಟಿಎಸ್; ಮೌಲಾನಾ ಸಿದ್ದಿಖಿ ಬಂಧನ

ಇಲ್ಲಿ ಗಮನಿಬೇಕಾದ ಅಂಶವೆಂದರೇ ಈ ಭಾಗದ ಪ್ರವಾಸೋಧ್ಯಮದ ಪ್ರಗತಿಗೆ ವಿಶೇಷ ಆಸಕ್ತಿ ವಹಿಸಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜಲಕ್ರೀಡೆಗೆ ಅನುಮತಿಯನ್ನು ನೀಡುವ ಬಗ್ಗೆ ಸರಕಾರ ಪ್ರಧಾನ ಕಾರ್ಯದರ್ಶಿಗಳ ಗಮನ ಸೆಳೆದಿದ್ದರು. ಇದರ ಹೊರತಾಗಿಯೂ ದಾಂಡೇಲಿ-ಜೋಯಿಡಾ ಹೋಂ ಸ್ಟೇ, ರೆಸಾರ್ಟ್ಸ್ ಮಾಲಕರ ಸಂಘವು ಖುದ್ದಾಗಿ ಕಂದಾಯ ಸಚಿವರಾದ ಅಶೋಕ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್, ಶಾಸಕರಾದ ಆರ್.ವಿ.ದೇಶಪಾಂಡೆಯವರು, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಹಾಗೂ ಮಾಜಿ ಶಾಸಕರಾದ ಸುನೀಲ್ ಹೆಗಡೆಯವರು ಸಹ ಜಲಕ್ರೀಡೆ ಆರಂಭಕ್ಕೆ ತಮ್ಮದೇ ಆದ ರೀತಿಯಲ್ಲಿ ಸರಕಾರದ ಮಟ್ಟದಲ್ಲಿ ಒತ್ತಡವನ್ನು ತಂದಿದ್ದರು.

ನಿನ್ನೆಯಿಂದ ಜಲಕ್ರೀಡೆಗೆ ಅನುಮತಿ ನೀಡಲಾಗಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಡೆ ಮುಖ ಮಾಡಲಿದ್ದಾರೆ. ಇನ್ನೂ ವಿಕೆಂಡ್ ಸಮಯದಲ್ಲಂತೂ ದಾಂಡೇಲಿ ಮತ್ತು ಜೋಯಿಡಾ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಮತ್ತೇ ಗರಿಗೇರಲಿದೆ.

ಟಾಪ್ ನ್ಯೂಸ್

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

27pramod

ಓಮಿಕ್ರಾನ್‍ಗೆ ಜನತೆ ಹೆದರುವ ಅಗತ್ಯವಿಲ್ಲ: ಪ್ರಮೋದ ಸಾವಂತ್

ಒಮಿಕ್ರಾನ್ ಅಪಾಯಕಾರಿಯಲ್ಲ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 887 ಅಂಕ ಜಿಗಿತ, ನಿಫ್ಟಿ ಟಾಪ್

ಒಮಿಕ್ರಾನ್ ಅಪಾಯಕಾರಿಯಲ್ಲ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 887 ಅಂಕ ಜಿಗಿತ, ನಿಫ್ಟಿ ಟಾಪ್

ಸ್ವಂತ ಸಹೋದರನನ್ನೇ ಸೋಲಿಸಿ ಬಿಜೆಪಿ ಗೆಲ್ಲಿಸಿದ ರಮೇಶ: ಬಾಲಚಂದ್ರ ಜಾರಕಿಹೊಳಿ

ಸ್ವಂತ ಸಹೋದರನನ್ನೇ ಸೋಲಿಸಿ ಬಿಜೆಪಿ ಗೆಲ್ಲಿಸಿದ ರಮೇಶ: ಬಾಲಚಂದ್ರ ಜಾರಕಿಹೊಳಿ

ಪ್ರತಿಭಟನೆ ವೇಳೆ ಸಾವನ್ನಪ್ಪಿರುವ ರೈತ ಕುಟುಂಬಕ್ಕೆ ಪರಿಹಾರ, ಉದ್ಯೋಗ ನೀಡಿ: ರಾಹುಲ್ ಗಾಂಧಿ

ಪ್ರತಿಭಟನೆ ವೇಳೆ ಸಾವನ್ನಪ್ಪಿರುವ ರೈತ ಕುಟುಂಬಕ್ಕೆ ಪರಿಹಾರ, ಉದ್ಯೋಗ ನೀಡಿ: ರಾಹುಲ್ ಗಾಂಧಿ

Untitled-1

ಕುಂಭಾಸಿ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಸಂಭ್ರಮದ ಬ್ರಹ್ಮ ರಥೋತ್ಸವ

ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿ

ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21BJP

ಮೇಲ್ಮನೆಗೆ ಬಿಜೆಪಿಯದ್ದೇ ಬಹುಮತ: ಪ್ರಮೋದ

ದಾಂಡೇಲಿ: ಕಟ್ಟುನಿಟ್ಟಿನ ಕ್ರಮಗಳಿದ್ದರೂ ಸಂಚಾರಿ ನಿಯಮಗಳ ಉಲ್ಲಂಘನೆ

ದಾಂಡೇಲಿ: ಕಟ್ಟುನಿಟ್ಟಿನ ಕ್ರಮಗಳಿದ್ದರೂ ಸಂಚಾರಿ ನಿಯಮಗಳ ಉಲ್ಲಂಘನೆ

ಕಳಚಿದ ಮಿರಾಶಿ ಮನೆತನದ ಹಿರಿಯ ಕೊಂಡಿ ಗೋಪಾಲ ಅರ್ಜುನ ಮಿರಾಶಿ

ಕಳಚಿದ ಮಿರಾಶಿ ಮನೆತನದ ಹಿರಿಯ ಕೊಂಡಿ ಗೋಪಾಲ ಅರ್ಜುನ ಮಿರಾಶಿ

3congress

ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ: ಭೀಮಣ್ಣ ನಾಯ್ಕ

2road

ಉಳವಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಹಳಿಯಾಳದಲ್ಲಿ ಘೋಟ್ನೇಕರ ಆಗ್ರಹ

MUST WATCH

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

udayavani youtube

JDS ಜೊತೆ BJP ಹೊಂದಾಣಿಕೆ ಮಾಡಲು ಹೊರಟಿದೆ ಎಂದಾದರೆ… ನೀವೇ ಯೋಚಿಸಿ : ಡಿಕೆಶಿ ವ್ಯಂಗ್ಯ

udayavani youtube

ಬೆಳೆಗಳಿಗೆ ಬಸವನ ಹುಳುಗಳ ಕಾಟ : ನೀರಾವರಿ ಸೌಲಭ್ಯವಿದ್ದರೂ ರೈತನಿಗಿಲ್ಲ ಮುಕ್ತಿ

ಹೊಸ ಸೇರ್ಪಡೆ

31kannada

ಕನ್ನಡಿಗರನ್ನು ಒಗ್ಗಟ್ಟು ಮಾಡುವ ಕೆಲಸ ಮಾಡಬೇಕಾಗಿದೆ: ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ

ಪಾಂಡೇಶ್ವರ ಶಿವನಗರದಿಂದ ಅತ್ತಾವರಕ್ಕೆ ರೈಲ್ವೇ ಅಂಡರ್‌ಪಾಸ್‌ ರಸ್ತೆ

ಪಾಂಡೇಶ್ವರ ಶಿವನಗರದಿಂದ ಅತ್ತಾವರಕ್ಕೆ ರೈಲ್ವೇ ಅಂಡರ್‌ಪಾಸ್‌ ರಸ್ತೆ

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ…ಕೆಜಿಎಫ್ ಚಾಪ್ಟರ್-2, ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ ಅಧೀರ

ಮೀನಕಳಿಯ: ಬಸ್‌ ಸೌಲಭ್ಯವಿಲ್ಲದೆ ಸಂಚಾರ ಸಂಕಷ್ಟ

ಮೀನಕಳಿಯ: ಬಸ್‌ ಸೌಲಭ್ಯವಿಲ್ಲದೆ ಸಂಚಾರ ಸಂಕಷ್ಟ

30indian

ಭಾರತೀಯ ನೆಲದಲ್ಲಿ ಜನಿಸಿದ ನಾವೇ ಧನ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.