BJP ರೈತಮೋರ್ಚಾ ರಾಜ್ಯಾಧ್ಯಕ್ಷ ಭವಿಷ್ಯವಾಣಿ;ಎಂಪಿ ಚುನಾವಣೆ ನಂತರ ಕಾಂಗ್ರೆಸ್ ದೇಶದಲ್ಲಿರೊಲ್ಲ

Team Udayavani, Jan 28, 2024, 4:11 PM IST

4-

ಮುದ್ದೇಬಿಹಾಳ: ಲೋಕಸಭೆ ಚುನಾವಣೆಗೂ ಮುನ್ನ ಬಹಳಷ್ಟು ಜನ ಕಾಂಗ್ರೆಸ್ ತೊರೆದು ಬಿಜೆಪಿಗೆ ಬರಲಿದ್ದಾರೆ. ಆ ಚುನಾವಣೆಯ ನಂತರ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಇರುವುದಿಲ್ಲ. ಆ ಪಕ್ಷ ಒಡೆದು ಎರಡು ಹೋಳಾಗುತ್ತದೆ. ನಂತರದ ದಿನಗಳಲ್ಲಿ ತಾನಾಗಿಯೇ ಮುಳುಗಿ ಹೋಗುತ್ತದೆ ಎಂದು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಭವಿಷ್ಯ ನುಡಿದರು.

ತಮ್ಮ ಫಾರ್ಮಹೌಸ್ ನಲ್ಲಿ ಜ.28ರ ಭಾನುವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಹೋಗಿದ್ದ ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿ ಬಂದಿದ್ದಾರೆ. ಇವರಂತೆಯೇ ಕಾಂಗ್ರೆಸ್ ನಲ್ಲಿರುವ ಲಕ್ಷ್ಮಣ ಸವದಿ ಸೇರಿ ಹಲವರು ಬಿಜೆಪಿಗೆ ಮರಳಲಿದ್ದಾರೆ. ಆ ಪಕ್ಷವನ್ನು ನಾವು (ಬಿಜೆಪಿಯವರು), ನೀವು (ಮತದಾರರು) ಮುಳುಗಿಸಬೇಕಾದ ಅಗತ್ಯವಿಲ್ಲ. ಈಗ ಅಲ್ವಸ್ವಲ್ಪ ಉಸಿರಾಡುತ್ತಿದ್ದು, ಕೆಲವೇ ತಿಂಗಳಲ್ಲಿ ಅದೂ ನಿಂತು ಹೋಗುತ್ತದೆ ಎಂದರು.

ಕಾಂಗ್ರೆಸ್ ಎಂ.ಎಲ್‌.ಎ. ಗಳಿಗೆ ಈ ಸರ್ಕಾರ ಬೇಸರ ಮೂಡಿಸಿದೆ. ಕಾಂಗ್ರೆಸ್ ನ ಹಿರಿಯರಾದ ಶಾಮನೂರು ಶಿವಶಂಕರಪ್ಪ, ಸಚಿವ ರಾಜಣ್ಣನವರು ಹೇಳಿರುವ ಮಾತುಗಳನ್ನು ಗಮನಿಸಿದರೆ ಪಕ್ಷದ ಅವನತಿ ಈಗಲೇ ಕಂಡು ಬರತೊಡಗಿದೆ. ಕಾಂಗ್ರೆಸ್ ಯಾಕೆ ನಾಶವಾಗ್ತಿದೆ ಅಂದ್ರೆ ಅದು ಈ ದೇಶದ ಜನರ ಹೃದಯಕ್ಕೆ ಚೂರಿ ಹಾಕಲು ಹೊರಟಿದೆ. ಈ ದೇಶದ ಜನರ ಹೃದಯ ಆಧ್ಯಾತ್ಮ, ಸಂಸ್ಕೃತಿ, ಸಂಸ್ಕಾರ. ಇದಕ್ಕೆ ಚೂರಿ ಹಾಕುವ ಪ್ರಯತ್ನ ನಡೆಸುತ್ತಿದೆ. ದೇಶದಲ್ಲಿ ಹಿಂದೂ-ಮುಸ್ಲಿಂ ಒಂದಾಗಿ ಬದುಕಿದರೆ ಕಾಂಗ್ರೆಸ್ ನವರಿಗೆ ಸಂಕಟ ಆಗುತ್ತದೆ ಎಂದರು.

ಬರಗಾಲವಿದ್ದರೂ ನಿರ್ಲಕ್ಷ್ಯ:

ರಾಜ್ಯದ ಹಲವೆಡೆ ಬರಗಾಲ ಬಿದ್ದು 4 ತಿಂಗಳಾದರೂ ಎಲ್ಲಿಯೂ ಉಸ್ತುವಾರಿ ಸಚಿವರು ರೈತರ ಹೊಲಗಳಿಗೆ ಹೋಗಿ ಬೆಳೆ ಪರಿಶೀಲನೆ ನಡೆಸಿದ ಉದಾಹರಣೆಗಳಿಲ್ಲ. ದನಗಳಿಗೆ ಮೇವು, ನೀರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಯಾವುದೇ ಹೇಳಿಕೆ ಹೊರ ಬಿದ್ದಿಲ್ಲ ಎಂದ ಅವರು ಮುಖ್ಯಮಂತ್ರಿಯವರು ತಕ್ಷಣ ದನಕರುಗಳಿಗೆ ಮೇವು, ಕುಡಿವ ನೀರು, ಪ್ರತಿ ಗ್ರಾಪಂ ಮಟ್ಟದಲ್ಲಿ ಗೋ ಶಾಲೆ ಸ್ಥಾಪಿಸಲು ಮುಂದಾಗುವಂತೆ ಆಗ್ರಹಿಸುವುದಾಗಿ ಹೇಳಿದರು.

ಸರ್ಕಾರದಿಂದ ರೈತರಿಗೆ ದ್ರೋಹ:

ಬರ ಪರಿಹಾರ ಕೊಡುವ ವಿಚಾರದಲ್ಲಿ ಸರ್ಕಾರ ರೈತರಿಗೆ ದೊಡ್ಡ ದ್ರೋಹ ಮಾಡುತ್ತಿದೆ. ಸಿದ್ದರಾಮಯ್ಯನವರ ಕಾಂಗ್ರಸ್ ಸರ್ಕಾರ ಮೋದಿಜಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ದುಡ್ಡು ಕೊಟ್ಟಿಲ್ಲ ಎಂದು ಗೂಬೆ ಕೂರಿಸುತ್ತಿದೆ. ಕೇಂದ್ರ ಸರ್ಕಾರವೇ ಎಲ್ಲ ಮಾಡೋದಾದರೆ ನಿಮ್ಮನ್ಯಾಕೆ ಜನ ಆಯ್ಕೆ ಮಾಡಬೇಕು. ಎಲ್ಲರಿಗೂ ಅನ್ನ ಹಾಕುವ ರೈತನಿಗ ಇದುವರೆಗೆ ನಯಾಪೈಸೆ ಪ್ರಯೋಜನ ಒದಗಿಸಿಲ್ಲ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೇರವಾಗಿ ರೈತರ ಖಾತೆಗೆ ವಾರ್ಷಿಕ 3 ಕಂತುಗಳಲ್ಲಿ 6000 ರೂ ಬರುತ್ತದೆ. ಇದಕ್ಕೆ ಹಿಂದಿನ ನಮ್ಮ ಸರ್ಕಾರ 4000 ಸೇರಿಸಿ 10 ಸಾವಿರ ಕೊಡುತ್ತಿದ್ದೆವು. ಈ ಸರ್ಕಾರ ಇದನ್ನು ಮುಂದುವರೆಸಿಲ್ಲ ಎಂದರು.

ಡೀಜೈಲ್ ಸಬ್ಸಿಡಿ ಎಕರೆಗೆ 250 ಬಂದ್ ಮಾಡಿದ್ದಾರೆ. ರೈತರ ಮಕ್ಕಳಿಗೆ ಜಾತ್ಯಾತೀತವಾಗಿ 8ನೇ ಕ್ಲಾಸ್ ನವರಿಗೆ 2 ಸಾವಿರ, ಡಿಗ್ರಿಯವರಿಗೆ 11 ಸಾವಿರದವರೆಗೆ ಪ್ರತಿ ವರ್ಷ ಉಚಿತ ಸ್ಕಾಲರ್‌ ಶಿಪ್ ಯೋಜನೆ ನಿಲ್ಲಿಸಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವ್ಯಾವುದನ್ನು ರೈತರಿಗೆ ಕೊಟ್ಟಿದ್ದೆವೂ ಅವೆಲ್ಲವನ್ನೂ ನಿಲ್ಲಿಸಿದ್ದಾರೆ. ಇವತ್ತು ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರ ರೂ. ನಗದು ಸೌಲಭ್ಯ ಮಾತ್ರ ಸಿಗುತ್ತಿದೆ. ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯಡಿ ಹೆಕ್ಟರ್‌ ಗೆ 40 ಸಾವಿರ ರೂ. ಪರಿಹಾರ ಸಿಗುತ್ತಿದ್ದು, ಇದನ್ನಾದರೂ ವಿಮಾ ಕಂಪನಿಗಳಿಂದ ಕೊಡಿಸುವ ಕೆಲಸವನ್ನು ಬರ ಪೀಡಿತ ಮತಕ್ಷೇತ್ರಗಳ ಶಾಸಕರು ಮಾಡಬೇಕು ಎಂದರು.

ಟಾಪ್ ನ್ಯೂಸ್

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya ದೇಶದಲ್ಲಿ ಧರ್ಮ ಜಾಗೃತಿ ಪರ್ವ: ಪೇಜಾವರ ಶ್ರೀ

Ayodhya Ram Mandir ದೇಶದಲ್ಲಿ ಧರ್ಮ ಜಾಗೃತಿ ಪರ್ವ: ಪೇಜಾವರ ಶ್ರೀ

10-hosapete

Hosapete: ಮಕರ ಸಂಕ್ರಾತಿ: ದಕ್ಷಿಣಕಾಶಿ ಹಂಪಿಗೆ ಪ್ರವಾಸಿಗರ ದಂಡು!

Hospet: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ… ಲಾಡ್ಜ್ ಮಾಲೀಕ ಸೇರಿ ಇಬ್ಬರು ವಶಕ್ಕೆ

Hospet: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ… ಲಾಡ್ಜ್ ಮಾಲೀಕ ಸೇರಿ ಇಬ್ಬರು ವಶಕ್ಕೆ

vij ramu

Ayodhya: ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಬಹಿಷ್ಕಾರ: ಶ್ರೀರಾಮುಲು ಆಕ್ರೋಶ

b k shivani

Hospete: ಫೆ.3 ರಂದು ಅಂತರಾಷ್ಟ್ರೀಯ ಪ್ರವಚನಕಾರರಾದ ಬಿ.ಕೆ.ಶಿವಾನಿ ಹೊಸಪೇಟೆಗೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.