Udayavni Special

ಆಸ್ಪತ್ರೆ ಅವ್ಯವಸ್ಥೆಗೆ ಸಿಬ್ಬಂದಿಗಳ ವಿರುದ್ಧ ಗರಂ ಆದ  ಡಿಹೆಚ್‌ಓ


Team Udayavani, May 1, 2021, 9:00 PM IST

incident held at yadagiri

ಯಾದಗಿರಿ: ಚಂಡರಕಿಯ ಒಬ್ಬ ಸೋಂಕಿತ ಸತ್ತಿರುವುದಕ್ಕೆ ಸ್ಪಂದನೆ ಮಾಡಲು ಆಗಿಲ್ಲ. ಏನಪ್ಪಾ, ಬೆಳ್ಳಗೆ ಬಟ್ಟೆ ಹಾಕಿಕೊಂಡಿದ್ದೀಯಾ, ಮುಂದೆ ಇಲ್ಲಿ ಚುನಾವಣೆಗೆ ನೀನೇ ನಿಲ್ಲು, ಎಂಎಲ್‌ಎ ಎಲೆಕ್ಷನ್‌ಗೆ ನೀನೆ ನಿಲ್ಲು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯ ಗುರುಮಠಕಲ್ ಸಮುದಾಯ ಆಸ್ಪತ್ರೆಯಲ್ಲಿ ಸಮರ್ಪಕ ಆರೋಗ್ಯ ಸೇವೆ ದೊರೆಯದ ಕುರಿತು ದೂರುಗಳು ಬಂದ ಹಿನ್ನೆಲೆ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಕೆಲ ದಿನಗಳ ಹಿಂದೆಯಷ್ಟೇ ಸಂಸದ ಡಾ.ಉಮೇಶ ಜಾಧವ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದರು.

ಅವರ ಭೇಟಿ ವೇಳೆ ಕೇವಲ ಒಬ್ಬ ಸಿಬ್ಬಂದಿ ಹೊರತುಪಡಿಸಿ ವೈದ್ಯರು, ಇತರೆ ಸಿಬ್ಬಂದಿಗಳು ಇರದಿರುವುದನ್ನು ಕಂಡು ಸಿಬ್ಬಂದಿಗಳ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಈ ವೇಳೆ ವೈದ್ಯರು ಮತ್ತು ಸಿಬ್ಬಂದಿಗಳು ಗೈರಾಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇದು ಇಲಾಖೆ ಆಂತರಿಕ ವಿಚಾರ ಮಾಧ್ಯಮಗಳಿಗೆ ಹೇಳಲಾಗಲ್ಲ ಎಂದು ಡಿಹೆಚ್‌ಓ ಡಾ.ಇಂದುಮತಿ ಪ್ರತಿಕ್ರಿಯಿಸಿದರು.

ಮನೆಯಿಂದ ಬಂದ ವೈದ್ಯೆ: ಡಿಹೆಚ್‌ಓ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಯಾವೊಬ್ಬ ವೈದ್ಯರೂ ಕರ್ತವ್ಯದಲ್ಲಿರಲಿಲ್ಲ. ಅಧಿಕಾರಿಗಳು ಬಂದ ಬಳಿಕವೇ ವೈದ್ಯೆ ಡಾ|ಪ್ರಿಯಾಂಕ ಎನ್ನುವವರು ಮನೆಯಿಂದ ಆಗಮಿಸಿದ್ದನ್ನು ಕಂಡು ಏನಮ್ಮಾ ಮನೆಯಿಂದ ಈಗ ಕರ್ತವ್ಯಕ್ಕೆ ಬರುತ್ತಿದ್ದಿಯಾ? ವೈದ್ಯರು ಎಲ್ಲಿ ಎಂದು ಪ್ರಶ್ನಿಸಿದರು.

ಪರೀಕ್ಷೆಗೆ ಕಳಿಸಬೇಕಿದ್ದ ಗಂಟಲು ದ್ರವ ಟೇಬಲ್ ಮೇಲೆ: ತಾಲೂಕು ಆಸ್ಪತ್ರೆಗಳಲ್ಲಿಯೂ ಬರುವ ಶಂಕಿತ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಗುರುಮಠಕಲ್ ಆಸ್ಪತ್ರೆಯ ಗೇಟ್ ಬಳಿ ಪರೀಕ್ಷೆಗೆಂದು ತೆಗೆದ ಗಂಟಲು ದ್ರವದ ಮಾದರಿಗಳು ಅನಾಥವಾಗಿ ಟೇಬಲ್ ಮೇಲೆ ಇರಿಸಲಾಗಿತ್ತು. ಮಧ್ಯಾಹ್ನ ೨ ಗಂಟೆ ವೇಳೆಗೆ ಆಸ್ಪತ್ರೆಯಲ್ಲಿ ಏನು ತಿಳಿಯದ ಮಹಿಳೆಯರು, ಮಕ್ಕಳು ಸಹ ಇದ್ದರು. ಅಚಾನಕ್ ಆಗಿ ಯಾರಾದರೂ ಇದೇನು ಎಂದು ಕೈಯಲ್ಲಿ ತೆಗೆದುಕೊಂಡಿದ್ದರೇ ಎಷ್ಟು ಅಪಾಯವಾಗುತ್ತಿತ್ತು ಎನ್ನುವುದನ್ನು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಅರಿಯಬೇಕು. ಇದಕ್ಕೆ ವಾಟ್ಸ್ ಆ್ಯಪ್ ಸಂದೇಶದ ಮೂಲಕ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗುವುದು ಎಂದಿದ್ದಾರೆ.

ಟಾಪ್ ನ್ಯೂಸ್

ಜೀವನ ಬಿಮಾ ಜಾರಿಗೆ ಜಾಗೃತಿ ಕೊರತೆ

ಜೀವನ ಬಿಮಾ ಜಾರಿಗೆ ಜಾಗೃತಿ ಕೊರತೆ

ಕೋವಿಡ್ ಬೆನ್ನಲ್ಲೇ ಪ್ರವಾಹ ಭೀತಿ!

ಕೋವಿಡ್ ಬೆನ್ನಲ್ಲೇ ಪ್ರವಾಹ ಭೀತಿ!

ಮೂರನೇ ಅಲೆಯಿಂದ ತಪ್ಪಿಸಲಾಗದು, 6 ರಿಂದ 8 ವಾರದೊಳಗೆ ಅಪ್ಪಳಿಸುವ ಸಾಧ್ಯತೆ: ಏಮ್ಸ್ ಮುಖ್ಯಸ್ಥ

ಮೂರನೇ ಅಲೆಯಿಂದ ತಪ್ಪಿಸಲಾಗದು, 6 ರಿಂದ 8 ವಾರದೊಳಗೆ ಅಪ್ಪಳಿಸುವ ಸಾಧ್ಯತೆ: ಏಮ್ಸ್ ಮುಖ್ಯಸ್ಥ

ಉತ್ತರಕ್ಕೆ ಈ ವರ್ಷವೂ ನೆರೆ ಹೊರೆ ಭೀತಿ

ಉತ್ತರಕ್ಕೆ ಈ ವರ್ಷವೂ ನೆರೆ ಹೊರೆ ಭೀತಿ

Untitled-1

ವಾರಾಂತ್ಯ ಕರ್ಫ್ಯೂ: ವಿಟ್ಲ ಪೇಟೆ ಸಂಪೂರ್ಣ ಬಂದ್

ಜಮ್ಮು-ಕಾಶ್ಮೀರ: ಜೂ.24ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಜಮ್ಮು-ಕಾಶ್ಮೀರ: ಜೂ.24ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಅರವಿಂದ ಬೆಲ್ಲದ ಮೇಲೆ ಗರಂ ಆದ ಅರುಣ್‌ ಸಿಂಗ್‌

ಅರವಿಂದ ಬೆಲ್ಲದ ಮೇಲೆ ಗರಂ ಆದ ಅರುಣ್‌ ಸಿಂಗ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yadagiri news

ಕೃಷಿ ಪರಿಕರ ಜಿಎಸ್‌ಟಿ ತೆಗೆಯಿರಿ

ಕೋವಿಡ್ ಗೆದ್ದ 80 ವರ್ಷದ ಅಜ್ಜಿ

ಕೋವಿಡ್ ಗೆದ್ದ 80 ವರ್ಷದ ಅಜ್ಜಿ

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ: ಡಿಸಿ

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ: ಡಿಸಿ

hಗ್ಗಹಜಕ

ಇಂದಿರಾ ಕ್ಯಾಂಟೀನ್‌ ಗೆ ಅನುದಾನವೇ ಇಲ್ಲ

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

MUST WATCH

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

udayavani youtube

ಯಾರೋ ಒಬ್ಬಿಬ್ಬರು ಮಾತನಾಡಿದರೆ ಗೊಂದಲವಾಗುವುದಿಲ್ಲ CM B S Yediyurappa

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

ಹೊಸ ಸೇರ್ಪಡೆ

ಜೀವನ ಬಿಮಾ ಜಾರಿಗೆ ಜಾಗೃತಿ ಕೊರತೆ

ಜೀವನ ಬಿಮಾ ಜಾರಿಗೆ ಜಾಗೃತಿ ಕೊರತೆ

ಸೊಳ್ಳೆ ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ

ಸೊಳ್ಳೆ ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ

ಕೋವಿಡ್ ಬೆನ್ನಲ್ಲೇ ಪ್ರವಾಹ ಭೀತಿ!

ಕೋವಿಡ್ ಬೆನ್ನಲ್ಲೇ ಪ್ರವಾಹ ಭೀತಿ!

ಮೂರನೇ ಅಲೆಯಿಂದ ತಪ್ಪಿಸಲಾಗದು, 6 ರಿಂದ 8 ವಾರದೊಳಗೆ ಅಪ್ಪಳಿಸುವ ಸಾಧ್ಯತೆ: ಏಮ್ಸ್ ಮುಖ್ಯಸ್ಥ

ಮೂರನೇ ಅಲೆಯಿಂದ ತಪ್ಪಿಸಲಾಗದು, 6 ರಿಂದ 8 ವಾರದೊಳಗೆ ಅಪ್ಪಳಿಸುವ ಸಾಧ್ಯತೆ: ಏಮ್ಸ್ ಮುಖ್ಯಸ್ಥ

ಉತ್ತರಕ್ಕೆ ಈ ವರ್ಷವೂ ನೆರೆ ಹೊರೆ ಭೀತಿ

ಉತ್ತರಕ್ಕೆ ಈ ವರ್ಷವೂ ನೆರೆ ಹೊರೆ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.