ಸಿದ್ಧರಾಮೇಶ್ವರ ಜಯಂತಿ 18ರಂದು

Team Udayavani, Jan 11, 2019, 10:40 AM IST

yad-3.jpg

ಯಾದಗಿರಿ: ಜಿಲ್ಲಾಡಳಿತ ವತಿಯಿಂದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಜ. 18ರಂದು ಬೆಳಗ್ಗೆ 11:00 ಗಂಟೆಗೆ ಯಾದಗಿರಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾದಗಿರಿ ತಾಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆ ಹಾಗೂ ಮಕರ ಸಂಕ್ರಮಣ ಹಬ್ಬವು ಜನವರಿ 14 ಮತ್ತು 15ರಂದು ಜರುಗುವ ಪ್ರಯುಕ್ತ ಜ. 15ರಂದು ಆಚರಿಸಬೇಕಾದ ಜಯಂತಿಯನ್ನು ಸಮಾಜದ ಮುಖಂಡರ ಒಪ್ಪಿಗೆಯ ಮೇರೆಗೆ ಜನವರಿ 18ರಂದು ಆಚರಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.

ಜಯಂತ್ಯುತ್ಸವ ಅಂಗವಾಗಿ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಅಂದು ಬೆಳಗ್ಗೆ 9:00 ಗಂಟೆಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಅದರಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳಲ್ಲಿಯೂ ಸಹ ಶ್ರದ್ಧಾ, ಭಕ್ತಿಯೊಂದಿಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು. ತಹಶೀಲ್ದಾರರು ತಾಲೂಕು ಮಟ್ಟದಲ್ಲಿ ಸದರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾಡಳಿತ ಕಾರ್ಯಕ್ರಮದ ಪೂರ್ವದಲ್ಲಿ ನಡೆಯುವ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಮೆರವಣಿಗೆಗಾಗಿ ಸಮಾಜದ ಸಂಘಟನೆಗೆ ಒಂದು ದಿನ ಮುಂಚಿತವಾಗಿ ಟ್ರಾ ್ಯಕ್ಟರ್‌ ನೀಡಬೇಕು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಅಥವಾ ಇನ್ನಿತರೆ ಒಂದು ನುರಿತ ಕಲಾವಿದರ ತಂಡವನ್ನು ಏರ್ಪಾಡು ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅವರಿಗೆ ನಿರ್ದೇಶಿಸಿದರು.

ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಸೂಕ್ತ ವ್ಯವಸ್ಥೆ, ಜಯಂತಿಯಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೊಲೀಸ್‌ ಇಲಾಖೆಗೆ ತಿಳಿಸಲಾಯಿತು. ಕಾರ್ಯಕ್ರಮದ ನೋಡಲ್‌ ಅಧಿಕಾರಿಯಾಗಿ ಜಿಲ್ಲಾ ಹಿಂದುಳಿದ ಕಲ್ಯಾಣ ಅಧಿಕಾರಿಗಳನ್ನು ನೇಮಕ ಮಾಡಲಾಯಿತು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್‌ ಠಾಕೂರ್‌ ಸಭೆಯ ನಡಾವಳಿ ಓದಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ್‌ ಬಿರಾದಾರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಲೆಕ್ಕಾಧೀಕ್ಷಕ ಮಲ್ಲಿಕಾರ್ಜುನ ಸಿ. ಕೊಲ್ಲೂರ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಟಾಪ್ ನ್ಯೂಸ್

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yadagiri

SSLC Exam Result; ಮತ್ತೆ ಕೊನೆಯ ಸ್ಥಾನ ಪಡೆದ ಯಾದಗಿರಿ..; ಕಾರಣವೇನು?

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.