ಕೋಸಂಬರಿ ಕಮಾಲ್‌

Team Udayavani, Apr 18, 2018, 5:06 PM IST

cukking.jpg

ದೇಹಕ್ಕೆ ತಂಪು ಮತ್ತು ಪೌಷ್ಟಿಕಾಂಶ ಒದಗಿಸುವ ತಿನಿಸುಗಳಲ್ಲಿ ಕೋಸಂಬರಿಯೂ ಒಂದು. ಇದನ್ನು ತಯಾರಿಸುವುದೂ ಕೂಡ ಬಹಳ ಸುಲಭ. ಬೇಸಿಗೆಯ ಈ ದಿನಗಳಲ್ಲಿ ತಂಪು ತಂಪಾಗಿ ಏನಾದರೂ ತಿನ್ನಬೇಕು ಅನಿಸಿದಾಗ ಹಣ್ಣು, ತರಕಾರಿ ಬಳಸಿ ಕೋಸಂಬರಿ ಮಾಡಬಹುದು. ಊಟದ ಜೊತೆಗೆ ಸಬ್‌ ಐಟಂ ರೀತಿ ಕೂಡ ಇದನ್ನು ಸವಿಯಬಹುದು. ಹೊಸ ಬಗೆಯ ಕೋಸಂಬರಿ ರೆಸಿಪಿಗಳು ಇಲ್ಲಿವೆ.

1.ಆಲೂಗಡ್ಡೆ-ಸೌತೆಕಾಯಿ ಕೋಸಂಬರಿ
ಬೇಕಾಗುವ ಸಾಮಗ್ರಿ:
ಆಲೂಗಡ್ಡೆ ತುರಿ-2 ಕಪ್‌, ಸಣ್ಣಗೆ ಕತ್ತರಿಸಿದ ಸೌತೆಕಾಯಿ-1 ಕಪ್‌, ತೆಂಗಿನತುರಿ-1/2 ಕಪ್‌, ಹಸಿಮೆಣಸು-4-5, ಶುಂಠಿ ತುರಿ-1/2 ಚಮಚ, ಜೀರಿಗೆ-1 ಚಮಚ, ಉಪ್ಪು-ರುಚಿಗೆ ತಕ್ಕಷ್ಟು,ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಕೊತ್ತಂಬರಿ ಸೊಪ್ಪು-4 ಚಮಚ

ಮಾಡುವ ವಿಧಾನ: ತೆಂಗಿನ ತುರಿ, ಹಸಿಮೆಣಸು, ಶುಂಠಿ, ಜೀರಿಗೆ ಸೇರಿಸಿ ರುಬ್ಬಿ. ನಂತರ ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ-ಇಂಗಿನ ಒಗ್ಗರಣೆ ಮಾಡಿ. ಆಲೂಗಡ್ಡೆ ತುರಿ, ಸೌತೆಕಾಯಿ, ಉಪ್ಪು ಸೇರಿಸಿ, ಬಾಡಿಸಿ, ಅರೆದ ಮಿಶ್ರಣ ಸೇರಿಸಿ ಚೆನ್ನಾಗಿ ಕಲಕಿ ಒಲೆಯಿಂದ ಕೆಳಗಿರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಆಲೂಗಡ್ಡೆ-ಸೌತೆಕಾಯಿ ಕೋಸಂಬರಿ ರೆಡಿ.

2. ಸೀಬೆ ಹಣ್ಣಿನ ಕೋಸಂಬರಿ
ಬೇಕಾಗುವ ಸಾಮಗ್ರಿ:
ಸೀಬೆ (ಪೇರಳೆ) ಹಣ್ಣಿನ ಹೋಳು-2 ಕಪ್‌, ಹಸಿಮೆಣಸು-3, ಸಾಸಿವೆ-1/2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ-1/4 ಚಮಚ, ತೆಂಗಿನ ತುರಿ-1/4 ಕಪ್‌, ಕೊತ್ತಂಬರಿ ಸೊಪ್ಪು-4 ಚಮಚ.

ಮಾಡುವ ವಿಧಾನ: ತೆಂಗಿನ ತುರಿ, ಸಾಸಿವೆ, ಹಸಿಮೆಣಸಿನಕಾಯಿ ಸೇರಿಸಿ ರುಬ್ಬಿ. ಸೀಬೆ ಹಣ್ಣಿನ ಹೋಳುಗಳಿಗೆ, ಅರೆದ ಮಿಶ್ರಣ, ಸಕ್ಕರೆ, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಕಿದರೆ ಕೋಸಂಬರಿ ಸಿದ್ಧ. 

3. ಹೆಸರುಕಾಳಿನ ಕೋಸಂಬರಿ
ಬೇಕಾಗುವ ಸಾಮಗ್ರಿ:
ಮೊಳಕೆ ತರಿಸಿದ ಹೆಸರುಕಾಳು-2 ಕಪ್‌, ದಾಳಿಂಬೆ ಕಾಳು-1 ಕಪ್‌, ಕ್ಯಾರೆಟ್‌ ತುರಿ-1/2 ಕಪ್‌, ತೆಂಗಿನತುರಿ-4 ಚಮಚ, ಕೊತ್ತಂಬರಿ ಸೊಪ್ಪು-3 ಚಮಚ, ಉಪ್ಪು-ರುಚಿಗೆ ತಕ್ಕಷ್ಟು,ಕಾಳುಮೆಣಸಿನ ಪುಡಿ-1 ಚಮಚ, ಜೀರಿಗೆ ಪುಡಿ-2 ಚಮಚ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಅರಶಿನ ಪುಡಿ-1/2 ಚಮಚ

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ-ಇಂಗು-ಅರಶಿನ ಸೇರಿಸಿ ಒಗ್ಗರಣೆ ಮಾಡಿ. ಒಗ್ಗರಣೆಗೆ, ಹೆಸರುಕಾಳು, ಕ್ಯಾರೆಟ್‌ ತುರಿ ಹಾಗೂ ದಾಳಿಂಬೆ ಸೇರಿಸಿ ಕಲಕಿ, ಒಲೆಯಿಂದ ಕೆಳಗಿರಿಸಿ. ಈ ಮಿಶ್ರಣಕ್ಕೆ ಕಾಳುಮೆಣಸಿನ ಪುಡಿ, ಜೀರಿಗೆ, ಉಪ್ಪು ಸೇರಿಸಿ ಕಲಕಿ. ಕೊನೆಯಲ್ಲಿ ರುಚಿಗೆ ತೆಂಗಿನತುರಿ ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. 

4. ಕಲ್ಲಂಗಡಿ ಕೋಸಂಬರಿ 
ಬೇಕಾಗುವ ಸಾಮಗ್ರಿ:
ಕಲ್ಲಂಗಡಿ ಹೋಳು-3 ಕಪ್‌, ಲಿಂಬೆರಸ-1 ಚಮಚ, ತೆಂಗಿನ ತುರಿ-1/4 ಕಪ್‌, ಹಸಿಮೆಣಸಿನಕಾಯಿ-2, ಕೊತ್ತಂಬರಿ ಸೊಪ್ಪು-3 ಚಮಚ, ಪುದೀನಾ ಸೊಪ್ಪು-3 ಚಮಚ, ಕಾಳುಮೆಣಸಿನ ಪುಡಿ-1/4 ಚಮಚ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಉದ್ದಿನಬೇಳೆ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ತೆಂಗಿನತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಸೇರಿಸಿ ರುಬ್ಬಿ. ಸಾಸಿವೆ, ಇಂಗು, ಉದ್ದಿನಬೇಳೆ ಹಾಕಿ ಒಗ್ಗರಣೆ ತಯಾರಿಸಿ. ಕಲ್ಲಂಗಡಿ ಹೋಳುಗಳಿಗೆ, ಒಗ್ಗರಣೆ, ಅರೆದ ಮಿಶ್ರಣ, ಲಿಂಬೆರಸ, ಕಾಳುಮೆಣಸಿನ ಪುಡಿ,  ಉಪ್ಪು ಸೇರಿಸಿ ಕೈಯಾಡಿಸಿ. 

5. ಹಣ್ಣು-ತರಕಾರಿಗಳ ಕೋಸಂಬರಿ
ಬೇಕಾಗುವ ಸಾಮಗ್ರಿ:
ಕ್ಯಾರೆಟ್‌-1, ದೊಣ್ಣೆ ಮೆಣಸಿನಕಾಯಿ-1, ಸೇಬು-1, ಬಾಳೆ ಹಣ್ಣು-2, ಕಪ್ಪು ದ್ರಾಕ್ಷಿ-1/2 ಕಪ್‌, ಪಪ್ಪಾಯ-1/2 ಕಪ್‌, ಗೋಡಂಬಿ-7-8, ಏಲಕ್ಕಿ ಪುಡಿ-1/2 ಚಮಚ, ಕಾಳುಮೆಣಸಿನ ಪುಡಿ-1/2 ಚಮಚ, ಸಕ್ಕರೆ ಪುಡಿ-1 ಚಮಚ, ಜೀರಿಗೆ ಪುಡಿ-1 ಚಮಚ, ತೆಂಗಿನ ತುರಿ-1/4 ಕಪ್‌, ತುಪ್ಪ-3 ಚಮಚ.

ಮಾಡುವ ವಿಧಾನ: ಬಾಳೆಹಣ್ಣುಗಳನ್ನು ಕತ್ತರಿಸಿ. ತರಕಾರಿ ಹಾಗೂ  ಮಿಕ್ಕ ಹಣ್ಣುಗಳನ್ನು ಉದ್ದುದ್ದುಕ್ಕೆ ಕತ್ತರಿಸಿ, ಬೇರೆಬೇರೆಯಾಗಿ ತುಪ್ಪದಲ್ಲಿ ಹುರಿಯಿರಿ. ಗಾಜಿನ ತಟ್ಟೆಯಲ್ಲಿ, ಕತ್ತರಿಸಿದ ಹಣ್ಣು-ತರಕಾರಿಗಳನ್ನು ನಿಮಗೆ ಬೇಕಾದಂತೆ ಜೋಡಿಸಿ. ಏಲಕ್ಕಿ ಪುಡಿ, ಸಕ್ಕರೆ ಪುಡಿ, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿಗಳನ್ನು ಸೇರಿಸಿ ಕಲಕಿ, ಸಮನಾಗಿ ಹಣ್ಣು-ತರಕಾರಿಗಳ ಮೇಲೆ ಉದುರಿಸಿ ಮತ್ತೆ ಕಲಕಿ. ತೆಂಗಿನತುರಿ ಹಾಗೂ ಗೋಡಂಬಿಗಳಿಂದ ಅಲಂಕರಿಸಿದರೆ, ಪೌಷ್ಟಿಕವಾದ ಕೋಸಂಬರಿ ಸವಿಯಲು ಸಿದ್ಧ.

* ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

ಟಾಪ್ ನ್ಯೂಸ್

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.