ವಿಪಕ್ಷಗಳಲ್ಲಿ ಬಿರುಕು

Team Udayavani, May 13, 2019, 6:00 AM IST

ಮತದಾನದ ಕೊನೆಯ ಹಂತ ಇನ್ನೂ ಬಾಕಿ ಇರು ವಾಗಲೇ ವಿಪಕ್ಷಗಳಲ್ಲೇ ಬಿರುಕು ಕಂಡುಬರುತ್ತಿದೆ. ಮೇ 21 ರಂದು ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ವಿಪಕ್ಷಗಳ ಸಭೆಗೆ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಗೈರಾಗುತ್ತಾರೆ ಎಂದು ಹೇಳಲಾಗಿದೆ.

ಕಳೆದ ವಾರ ಕೋಲ್ಕತ್ತಾಗೆ ತೆರಳಿ ಮಮತಾ ಭೇಟಿ ಮಾಡಿದ್ದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಮಮತಾರಿಂದ ಋಣಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ ಎನ್ನಲಾಗಿದೆ. ಮಾಯಾವತಿ ಕೂಡ ಸಭೆಗೆ ಹಾಜರಾಗಲು ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಫ‌ಲಿತಾಂಶ ಅಸ್ಥಿರವಾದರೆ ಪ್ರಧಾನಿ ಹುದ್ದೆಗೆ ರಾಹುಲ್‌ ಗಾಂಧಿಯನ್ನು ಪರಿಗಣಿಸುವ ಕುರಿತು ಈ ಮುಖಂಡರಲ್ಲಿ ಅಸಮಾಧಾನವಿದೆ ಎನ್ನಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ