ದ.ಕ.: 15 ಅಭ್ಯರ್ಥಿಗಳು; ಒಟ್ಟು 24 ನಾಮಪತ್ರ

Team Udayavani, Mar 27, 2019, 6:30 AM IST

ಮಂಗಳೂರು: ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಲು ಒಟ್ಟು 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 9 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಮಾ. 19ರಿಂದ ನಾಮಪತ್ರ ಸಲ್ಲಿಕೆ ಆರಂಭ ಗೊಂಡಿದ್ದು, ಒಟ್ಟು 15 ಮಂದಿಯಿಂದ 24 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬುಧವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದೆಗೆದುಕೊಳ್ಳಲು ಮಾ. 29 ಕೊನೆಯ ದಿನ.

ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಅವರು ಸೋಮವಾರ 2 ಪ್ರತಿ ನಾಮಪತ್ರಗಳನ್ನು ಸಲ್ಲಿಸಿದ್ದರು. ಮಂಗಳವಾರ ಮತ್ತೆ 2 ಪ್ರತಿ ಸಲ್ಲಿಕೆ ಮಾಡಿದ್ದು, ಒಟ್ಟು 4 ಪ್ರತಿ ನಾಮಪತ್ರಗಳನ್ನು ಸಲ್ಲಿಕೆ ಮಾಡಿದಂತಾಗಿದೆ.

ನಾಮಪತ್ರ ಸಲ್ಲಿಸಿದವರು
ನಳಿನ್‌ ಕುಮಾರ್‌ ಕಟೀಲು (ಬಿಜೆಪಿ)-4 ಪ್ರತಿ, ಸುದರ್ಶನ್‌ ಎಂ. (ಬಿಜೆಪಿ) -2 ಪ್ರತಿ, ಮಿಥುನ್‌ ರೈ (ಕಾಂಗ್ರೆಸ್‌) – 4 ಪ್ರತಿ. ಇಲ್ಯಾಸ್‌ ಮಹಮ್ಮದ್‌ ತುಂಬೆ, ಇಸ್ಮಾಯಿಲ್‌ ಶಾಫಿ ಕೆ. (ಎಸ್‌ಡಿಪಿಐ). ಸತೀಶ್‌ ಸಾಲ್ಯಾನ್‌ (ಬಿಎಸ್‌ಪಿ). ಸುಪ್ರೀತ್‌ ಕುಮಾರ್‌ ಪೂಜಾರಿ (ಲೋಕ ತಾಂತ್ರಿಕ ಜನತಾದಳ, ಹಿಂದೂಸ್ತಾನ್‌ ಜನತಾ ಪಾರ್ಟಿ). ವಿಜಯ ಶ್ರೀನಿವಾಸ ಸಿ. (ಉತ್ತಮ ಪ್ರಜಾಕೀಯ ಪಾರ್ಟಿ). ಮಹಮ್ಮದ್‌ ಖಾಲೀದ್‌, ಡೊಮಿನಿಕ್‌ ಅಲೆಗಾÕಂಡರ್‌ ಡಿ’ಸೋಜಾ, ವೆಂಕಟೇಶ್‌ ಬೆಂಡೆ, ಅಬ್ದುಲ್‌ ಹಮೀದ್‌, ಸುರೇಶ್‌ ಪೂಜಾರಿ ಎಚ್‌., ಡಾ| ದೀಪಕ್‌ ರಾಜೇಶ್‌ ಕುವೆಲ್ಲೊ, ಮ್ಯಾಕ್ಸಿಂ ಪಿಂಟೋ (ಪಕ್ಷೇತರರು).


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ