ಬೆಳ್ತಂಗಡಿ: ವಿವಿಧೆಡೆ ನಳಿನ್ ಪ್ರಚಾರ ಸಭೆ
Team Udayavani, Apr 13, 2019, 6:00 AM IST
ನಳಿನ್ ಕುಮಾರ್ ಕಟೀಲ್ ಬುಧವಾರ ಪೂಂಜ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು.
ಬೆಳ್ತಂಗಡಿ: ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರು ಬುಧವಾರ ತಾಲೂಕಿನ ವಿವಿಧೆಡೆ ಚುನಾವಣ ಪ್ರಚಾರ ನಡೆಸಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮೂಡುಕೋಡಿ, ಅಂಡಿಂಜೆ, ಸಾವ್ಯ, ಕೊಕ್ರಾಡಿ, ಪೆರಾಡಿ, ಕಾಶಿಪಟ್ನ, ಮರೋಡಿ, ಹೊಸಂಗಡಿ, ನಾರಾವಿ, ಕುತ್ಲೂರು, ಬಡಕೋಡಿ ಗ್ರಾಮದ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಕಾರ್ಯಕರ್ತರಿಗೆ ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಬೆಳ್ತಂಗಡಿ ಮಂಡಲ ಅಧ್ಯಕ್ಷ, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಯಂತ್ ಕೋಟ್ಯಾನ್, ಶಾಸಕ ಹರೀಶ್ ಪೂಂಜ, ಚುನಾವಣ ಉಸ್ತುವಾರಿ ಜಿ. ಆನಂದ್ ಉಪಸ್ಥಿತರಿದ್ದರು.