ರಾಹುಲ್‌ರ ಜಾಣ ಮರೆವು

ಹಿರಿಯರನ್ನು ಅವಮಾನಿಸುವುದೇ ಕಾಂಗ್ರೆಸ್‌ನ ಇತಿಹಾಸ

Team Udayavani, May 10, 2019, 6:04 AM IST

ರಾಹುಲ್‌ ಗಾಂಧಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ಪಕ್ಷವು ಹಿರಿಯರನ್ನು ಗೌರವಿಸುತ್ತದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ರೊಂದಿಗೆ ಕಾಂಗ್ರೆಸ್‌ ಪಕ್ಷ ಕೆಟ್ಟದಾಗಿ ವರ್ತಿಸಿತು. ಬಾಬು ಜಗಜೀವನ್‌ ರಾಮ್‌ರಂಥ ದಲಿತ್‌ ಐಕಾನ್‌ರಿಗೂ ಅವಮಾನ ಮಾಡಲಾಯಿತು. ಪ್ರಣಬ್‌ ಮುಖರ್ಜಿಯವರಿಗೆ ಪ್ರಧಾನಿ ಹುದ್ದೆಯನ್ನು ನಿರಾಕರಿಸಲಾಯಿತು

ರಾಹುಲ್‌ ಗಾಂಧಿಯವರಿಗೆ ಈಗ ಹಠಾತ್ತನೆ ಹಿರಿಯರ ಬಗ್ಗೆ ಹೊಸದಾಗಿ ಗೌರವ ಹುಟ್ಟಿಕೊಂಡಿದೆ ಮತ್ತು ಬಿಜೆಪಿಯ ಶಿಸ್ತಿನ ಸೈನಿಕ ಪ್ರಧಾನಿ ಮೋದಿ ವಿರುದ್ಧ ಅವರು ಹಾಸ್ಯಾಸ್ಪದ, ಆಧಾರರಹಿತ ಆರೋಪಗಳನ್ನು ಮಾಡಲಾರಂಭಿಸಿದ್ದಾರೆ. “ಮೋದಿ ತಮ್ಮ ಕೋಚ್‌ ಆಡ್ವಾಣಿಯವರ ಮುಖಕ್ಕೆ ಪಂಚ್‌ ಮಾಡಿದರು’ ಎಂಬ ರಾಹುಲ್‌ರ ಹೇಳಿಕೆಯಲ್ಲಿ ಕಾಂಗ್ರೆಸ್‌ನ ಹತಾಶೆ ಮತ್ತು ಯುವರಾಜನ ಅಹಂಕಾರ ಕಾಣಿಸುತ್ತಿದೆ.
ಬಹುಶಃ ರಾಹುಲ್‌ ಗಾಂಧಿಯವರು ಜಾಣ ಮರೆವಿನಿಂದ ಬಳಲುತ್ತಿದ್ದಾರೆ ಎನಿಸುತ್ತದೆ. ಇದೇ ರಾಹುಲ್‌ ಅವರು ನವದೆಹಲಿಯ ಪತ್ರಿಕಾಗೋಷ್ಠಿ ಯೊಂದರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರದ ಸುಗ್ರೀವಾಜ್ಞೆಯನ್ನು ಹರಿದುಹಾಕಿದ್ದರು ಎನ್ನುವುದನ್ನು ನೆನಪಿಸಬೇಕಿದೆ. ಕಾಂಗ್ರೆಸ್‌ನ ಕುಟುಂಬದವರು ಹೀಗೆ ಹಿರಿಯರಿಗೆ ಅಗೌರವ ತೋರಿಸಿದ ಅನೇಕ ಉದಾಹರಣೆಗಳು ಇವೆ.

ಉದಾ: ದೇಶದಲ್ಲಿ ಆರ್ಥಿಕ ಸುಧಾರಣೆ ಗಳನ್ನು ತಂದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ರೊಂದಿಗೆ ಕಾಂಗ್ರೆಸ್‌ ಕೆಟ್ಟದಾಗಿ ವರ್ತಿಸಿತು. ನರಸಿಂಹರಾವ್‌ ನಿಧನಾ ನಂತರ ಕಾಂಗ್ರೆಸ್‌ ನಾಯಕತ್ವವು ಅವರ ದೇಹವನ್ನು ಪಕ್ಷದ ಕಾರ್ಯಾ ಲಯಕ್ಕೆ ತರುವುದಕ್ಕೂ ಅನುಮತಿ ನೀಡಲಿಲ್ಲ. ಇನ್ನು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಸೀತಾರಾಮ್‌ ಕೇಸರಿಯವರನ್ನಂತೂ ಅಕ್ಷರಶಃ ಎಐಸಿಸಿ ಕಚೇರಿಯಲ್ಲಿ ಅವರ ಚೇರ್‌ನಿಂದ ಎಳೆಯಲಾಯಿತು. ಇನ್ನು ಶ್ರೀ ಬಾಬು ಜಗಜೀವನ್‌ ರಾಮ್‌ರಂಥ ಅತ್ಯಂತ ಹಿರಿಯ ನಾಯಕ ಮತ್ತು ದಲಿತ್‌ ಐಕಾನ್‌ರಿಗೂ ಪ್ರಧಾನಿಯಾಗು ವುದಕ್ಕೆ ಅವಕಾಶಮಾಡಿಕೊಡದೇ, ಅವರಿಗೆ ಅವಮಾನ ಮಾಡಲಾಯಿತು. ಕೊನೆಗೆ ಅವರು ಕಾಂಗ್ರೆಸ್‌ನಿಂದ ಬಲವಂತವಾಗಿ ಹೊರಹೋಗುವಂತಾಯಿತು.

ಕಾಂಗ್ರೆಸ್‌ನ ಹಿರಿಯ ನಾಯಕ ಶ್ರೀ ಪ್ರಣಬ್‌ ಮುಖರ್ಜಿಯವರಿಗೆ 2004 ಮತ್ತು 2009ರಲ್ಲಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಲಾಯಿತು. 1980- 1982ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಯಾಗಿದ್ದ ತಂಗಟೂರಿ ಅಂಜಯ್ಯ ಅವರನ್ನು ಅಂದಿನ ಕಾಂಗ್ರೆಸ್‌ ಅಧ್ಯಕ್ಷರು ವಿಮಾನನಿಲ್ದಾಣವೊಂದರಲ್ಲಿ ಅವಮಾನಮಾಡಿದ್ದಷ್ಟೇ ಅಲ್ಲದೆ, ಅಂಜಯ್ಯನವರಿಗೆ ವಿಮಾನವೇರುವುದಕ್ಕೂ ಬಿಡಲಿಲ್ಲ.

ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಅವರ ಹೆಸರಿಗೆ ಮಸಿ ಬಳಿಯಲು ಕೆಟ್ಟ ಪ್ರಚಾರ ತಂತ್ರ ಅನುಸರಿಸಿದ ಕಾಂಗ್ರೆಸ್‌, ಅಂಬೇಡ್ಕರ್‌ ಅವರು ಸೋಲುವಂತೆ ಮಾಡಿತು. 1990ರವರೆಗೂ ಅಂಬೇಡ್ಕರರಿಗೆ ಕಾಂಗ್ರೆಸ್‌ ಭಾರತರತ್ನವನ್ನು ಕೊಟ್ಟಿರಲಿಲ್ಲ. ಎಲ್ಲಿಯವರೆಗೂ ಅಂದರೆ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲೂ ಅಂಬೇಡ್ಕರ್‌ ಅವರ ಛಾಯಾಚಿತ್ರವನ್ನು ತೂಗುಹಾಕಲು ಬಿಟ್ಟಿರಲಿಲ್ಲ.
ಬಿಜೆಪಿಯಲ್ಲಿ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಯವರನ್ನು ಪ್ರಧಾನಿಯನ್ನಾಗಿಸಲಾಯಿತು, ಶ್ರೀ ಅಡ್ವಾಣಿ ಅವರು ಉಪಪ್ರಧಾನಿಯಾದರು. 2009ರಲ್ಲಿ ಅಡ್ವಾಣಿಯವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದರು. ಆ ಸಮಯದಲ್ಲಿ ನೀವೆಲ್ಲ ಅಡ್ವಾಣಿಯವರನ್ನು ಕಟ್ಟರ್‌ ಹಿಂದುತ್ವ ಪ್ರತಿಪಾದಕ ಎಂದು ಅಪಪ್ರಚಾರ ನಡೆಸುತ್ತಿದ್ದಿರಿ. ಅಡ್ವಾಣಿಯವರು ಮೂರು ಬಾರಿ ಬಿಜೆಪಿಯ ಅಧ್ಯಕ್ಷರಾಗಿದ್ದವರು.

ನೀವು ನಿಮ್ಮ ನಾಯಕತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದಿರಿ ಮತ್ತು ಅನೇಕ ರಾಜಕೀಯ ಎದುರಾಳಿಗಳನ್ನು ಜೈಲಿಗಟ್ಟಿದಿರಿ. ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಿದ್ದಷ್ಟೇ ಅಲ್ಲದೇ, ಪತ್ರಿಕಾ ಸ್ವಾತಂತ್ರ್ಯದ ಮೇಲೂ ಸೆನ್ಸರ್‌ಶಿಪ್‌ ಹೇರಿದಿರಿ.
ಅಂದು ಜಯಪ್ರಕಾಶ್‌ ನಾರಾಯಣ್‌, ಮೊರಾರ್ಜಿ ದೇಸಾಯಿ, ಅಟಲ್‌ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ, ರಾಜಮಾತಾ ಸಿಂದಿಯಾ ಅವರನ್ನೆಲ್ಲ ಬಂಧನದಲ್ಲಿ ಇಡಲಾಯಿತು.

ಕಾಂಗ್ರೆಸ್‌ನಲ್ಲಿ ನಿಮ್ಮ ಕುಟುಂಬದವರನ್ನು ಬಿಟ್ಟು ಬೇರೆ ಯಾರಿಗೂ ನೀವು ಇದುವರೆಗೂ ಉನ್ನತ ಸ್ಥಾನ ಪಡೆಯಲು ಬಿಟ್ಟಿಲ್ಲ. ತನ್ನದೇ ಪಕ್ಷದ ಹಿರಿಯ ನಾಯಕರಿಗೆ ಅವಮಾನ ಮಾಡುವ ಇತಿಹಾಸ ಕಾಂಗ್ರೆಸ್‌ಗೆ ಇದೆ. ಈಗ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ತಮ್ಮ ಪಕ್ಷವು ಹಿರಿಯರನ್ನು ಗೌರವಿಸುತ್ತದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿಗಳು.
(ಕೃಪೆ: ಟೈಮ್ಸ್‌ ಆಫ್ ಇಂಡಿಯಾ)

ಪ್ರಕಾಶ್‌ ಜಾವಡೇಕರ್‌ ಕೇಂದ್ರ ಸಚಿವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸ್ಪರ್ಧೆಯಲ್ಲಿರುವ ಇಬ್ಬರು ನಾಯಕರು ಸಮಬಲರೇ ಆಗಿರುವ  ಅತ್ಯಂತ ಹಾಟ್‌ ಲೋಕಸಭಾ ಕ್ಷೇತ್ರಗಳು ಇವು ಅಮೇಠಿ (ಉತ್ತರ ಪ್ರದೇಶ) ರಾಹುಲ್‌ ಗಾಂಧಿ (ಕಾಂಗ್ರೆಸ್‌) Vs ಸ್ಮತಿ...

  • ಹರ್ಯಾಣದ ಹಿಸಾರ್‌ ಲೋಕಸಭಾ ಕ್ಷೇತ್ರವು ಮೂರು ರಾಜಕೀಯ ಕುಟುಂಬಗಳ ನಡುವಿನ ಅಖಾಡವಾಗಿ ಬದಲಾಗಿದ್ದು, ಈ ತಿಕ್ರೋನ ಸ್ಪರ್ಧೆಯು ಹರ್ಯಾಣದ ಅತಿದೊಡ್ಡ ಕುಟುಂಬ ರಾಜಕಾರಣದ...

  • ಹಝಾರಿಭಾಗ್‌ ಜಾರ್ಖಂಡ್‌ನ‌ ಅತ್ಯಂತ ಪ್ರಮುಖ ಲೋಕಸಭಾ ಕ್ಷೇತ್ರ. ಸದ್ಯ ಬಿಜೆಪಿಯ ಮಾಜಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಮೂರು ಬಾರಿ ಪ್ರತಿನಿಧಿಸಿದ್ದ...

  • ಲೋಕಜನ ಶಕ್ತಿ ಪಕ್ಷದ ನಾಯಕ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಪ್ರತಿನಿಧಿಸುವ ಕ್ಷೇತ್ರವೇ ಹಾಜಿಪುರ. ಈ ಕ್ಷೇತ್ರದಿಂದ ಪ್ರಸಕ್ತ ಸಾಲಿನಲ್ಲಿ...

  • ಉತ್ತರ ಪ್ರದೇಶದ ಎಂಭತ್ತು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಮುಖ ಕ್ಷೇತ್ರವೆಂದರೆ ಕಾನ್ಪುರ. 2014ರ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಡಾ.ಮುರಳೀ ಮನೋಹರ...

ಹೊಸ ಸೇರ್ಪಡೆ