ನವೋಲ್ಲಾಸ ತರುವ ಮಹಾಗಣೇಶ ಹಬ್ಬ

ಸಾಮಾಜಿಕ ಸಾಮರಸ್ಯ ಸಾರುವ ಉತ್ಸವ

Team Udayavani, Sep 2, 2019, 5:26 AM IST

ವಿದ್ಯಾನಗರ: ಸಿದ್ಧಿ ಬುದ್ಧಿ ಪ್ರದಾಯಕ ಡೊಲ್ಲುಹೊಟ್ಟೆ ಗಣಪ ಸಕಲ ರಿಗೂ ಆಪ್ತ. ಭಕ್ತಕುಲ ಪ್ರಿಯನಾದ ಗಣೇಶ ವಿಘ್ನವಿನಾಶಕನೆಂಬ ಹಿರಿಮೆ ಯನ್ನು ಹೊಂದಿದಾತ.
ಚಾತಿಯ ಹಬ್ಬವೆಂದರೆ ಕಷ್ಟಗಳನ್ನು ಮರೆಸಿ ನವೊಲ್ಲಾಸವನ್ನು ತರುವ ಹಬ್ಬ. ಪ್ರತಿ ಮನೆಗಳಲ್ಲೂ ಸಂತಸ ಸಂಭ್ರಮ. ಆದಿಪೂಜಿತ ಗಣಪನ ಸಂಕಲ್ಪವೇ ವೈವಿಧ್ಯ ಪೂರ್ಣವಾದುದು. ಅವನ ಪೂಜೆಯ ಮೂಲಕ ನೆಮ್ಮದಿ ಕಾಣುವ ಭಾರತೀಯ ಸನಾತನ ಸಂಸ್ಕೃತಿ ನಮ್ಮದು.

ಗಣೇಶಹಬ್ಬಕ್ಕೆ ಸಾರ್ವಜನಿಕ ಆಚರ ಣೆಯ ಸ್ವರೂಪವನ್ನು ನೀಡಿದವರು ಲೋಕಮಾನ್ಯ ಬಾಲಗಂಗಾಧರ ತಿಲಕರು. ಇಂದು ಇದು ಜಾತೀಯತೆ, ಭಾಷೆ, ಬಡವ-ಬಲ್ಲಿದ, ಹಿರಿಯ-ಕಿರಿಯ ಎಂಬ ಬೇಧ ಭಾವವನ್ನು ತೊಡೆದು ಹಾಕುವಲ್ಲಿ ಸಹಕಾರಿಯಾಗಿದೆ. ಈ ಮೂಲಕ ಮಂತ್ರದ ಮೂಲಕವೇ ಗಣೇಶೋತ್ಸವ ವ್ಯಾಪಕವಾಗಿ ಆಚರಣೆಗೊಳ್ಳುತ್ತಿದೆ. ಪ್ರತಿಯೊಬ್ಬ ಭಾರತೀಯನೂ ಇದರ ಭಾಗವಾಗುತ್ತಾನೆ. ಹಾಗಾಗಿಯೇ ಎಲ್ಲೆಲ್ಲೂ ಗಣೇಶನನ್ನು ಕೂರಿಸುವ, ಪೂಜಿಸುವ ಗೌಜು ಗಮ್ಮತ್ತು. ಮನೆ ಯಲ್ಲಿ ಕೂರಿಸಿ ಪೂಜಿಸುವ ಪುಟ್ಟ ಗಣಪ ನಿಂದ ಪ್ರಾರಂಭಿಸಿ ಖಾಸಗಿ ಕಂಪೆನಿ ಗಳು, ಸಾರ್ವಜನಿಕ ಸಂಘ ಸಂಸ್ಥೆ ಗಳು, ಮಠಗಳು, ಮೈದಾನದ ಕಟ್ಟೆ ಮಾತ್ರ ವಲ್ಲದೆ ಬೀದಿಗಳಲ್ಲೂ ಸಾರ್ವಜನಿಕ ಗಣೇಶೋತ್ಸವದ ಆಕರ್ಷಣೆ ಕಣ್ಮನ ಸೆಳೆಯುತ್ತದೆ.

ಸಾಮಾಜಿಕ ಸಾಮರಸ್ಯ
ಸಾರುವ ಹಬ್ಬಗಳು
ಸಾಮಾಜಿಕ ಸಾಮರಸ್ಯವನ್ನಯ ಕಾಯ್ದುಕೊಳ್ಳುವಲ್ಲಿ ಹಬ್ಬಗಳ ಪಾತ್ರ ಹಿರಿದು. ಪರಸ್ಪರರ ಭಾವನೆಗಳನ್ನು ಗೌರವಿಸಿ ಹಬ್ಬದ ದಿನ ಹತ್ತಿರಾದಂತೆ ಆ ಆಚರಣೆಯ ಭಾಗವಾಗುವ, ಅದರಿಂದ ಆನಂದವನ್ನು ಹಂಚಿಕೊಳ್ಳುವ ದೊಡ್ಡ ಶƒಂಖಲೆಯೇ ಹುಟ್ಟಿಕೊಳ್ಳುತ್ತದೆ. ಹಬ್ಬಗಳೆಂದರೆ ಹೊಸ ಬಟ್ಟೆ ಇರಲೇ ಬೇಕು. ಅದು ಜವಳಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರದ ಭರಾಟೆ, ಹೊಲಿಗೆ ಕೆಸದಲ್ಲಿ ನಿರತರಾದವರಿಗೆ ಮಾಡಿದಷ್ಟು ಮುಗಿಯದ ಕೆಲಸ ನೀಡುತ್ತದೆ. ಹಾಗೆಯೇ ತರಕಾರಿ, ಹಣ್ಣುಹಂಪಲು, ದವಸಧಾನ್ಯ, ಬೇಕರಿಯ ಸಿಹಿತಿನಿಸುಗಳು ಹಾಗೂ ಹೂವಿನ ವ್ಯಾಪಾರಿಗಳ ಜೇಬನ್ನೂ ತುಂಬುತ್ತದೆ. ಪೇಟೆ ಪಟ್ಟಣಗಳಲ್ಲಿ ವಾಹನಗಳ ಓಡಾಟವೂ ಹೆಚ್ಚಾಗುತ್ತದೆ. ಹಬ್ಬಗಳು ಬಂಧುಮಿತ್ರಾದಿಗಳ ಸಮಾಗಮ, ಶುಭಹಾರೈಕೆಗಳೂ ಸೇರಿ ವಿಭಿನ್ನವಾದ ಸಂಭ್ರಮವನ್ನು ಎಲ್ಲೆಲ್ಲು ಹರಡುತ್ತವೆ. ಸಂಸ್ಕಾರಯುತವಾದ ಬದುಕಿಗೆ ಬೆಳಕು ನೀಡುತ್ತದೆ.

ಪ್ರಣವ ಸ್ವರೂಪನ
ಮೋಹಕ ರೂಪ
ಡೊಳ್ಳು ಹೊಟ್ಟೆ, ನಾಲ್ಕು ಕೈಗಳು, ಆನೆ ಮುಖ, ಹೊಳೆಯುವ ಕಂಗಳು, ಏಕದಂತ, ಹೊಟ್ಟೆ ಸುತ್ತಿಕೊಂಡ ಹಾವು ಜತೆಗೆ ವಾಹನವಾಗಿ ಪುಟ್ಟ ಇಲಿ. ಈ ವರ್ಣಮಯ ವ್ಯಕ್ತಿತ್ವ, ಪ್ರಣವ ಸ್ವರೂಪನ ಅಗಾಧತೆಯನ್ನು ಸಾರುವ ಮೋಹಕ ರೂಪ ಭಕ್ತ ಜನಮಾನಸದಲ್ಲಿ ಮೂಡಿಸುವ ಭಕ್ತಿಯಭಾವ ವರ್ಣನಾತೀತ.

ಬಹುರೂಪಿ ಗಣಪ
ಹೇರಂಬ ಗಣಪತಿ, ಹರಿದ್ರ ಗಣಪತಿ, ಲಕ್ಷ್ಮಿ ಗಣಪತಿ, ತ್ರ್ಯಕ್ಷ ಗಣಪ, ಗಣೇಶಾನಿ ರೂಪ, ಉಚ್ಚಿಷ್ಟ ಗಣಪ, ದ್ವಿಜ ಗಣಪತಿ, ದುರ್ಗಾ ಗಣಪತಿ, ಯೋಗ ಗಣಪತಿ, ದುಂಡಿ ಗಣಪತಿ ಊಧ್ವì ಗಣಪತಿ, ಉದ್ದಂಡ ಗಣಪತಿ, ಸƒಷ್ಟಿ ಗಣಪತಿ, ಸಿಂಹ ಗಣಪತಿ, ವಿದ್ಯಾಗಣಪತಿ ಸೇರಿದಂತೆ ಹಲವಾರು ರೂಪಗಳಲ್ಲಿ ಪೂಜೆಗೊಳ್ಳುವ ಬಹುರೂಪಿ ಗಣಪ ಒಂದೊಂದು ರೂಪದಲ್ಲು ಜನರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎನ್ನುವ ನಂಬಿಕೆ ಭಕ್ತಜನರಿಗಿದೆ. ಜಿಲ್ಲೆಯಾದ್ಯಂತ ಇಂದು ಇಷ್ಟಾರ್ಥ ಪ್ರದಾಯಕ ವಿN°àಶ್ವರನ ಮಹೋತ್ಸವವು ಸಂಭ್ರಮ ಸಡಗರದೊಂದಿಗೆ ಸೌಹಾರ್ಧತೆಯ ಸಂದೇಶದೊಂದಿಗೆ ನಡೆಯಲಿದೆ.

ವಿದ್ಯಾಗಣಪ
ಈ ಸಂದರ್ಭದಲ್ಲಿ ಕಾಸರಗೋಡಿನ ಗಿರಿಧರ ನಾಯ್ಕ ತನ್ನ ಸಂಗ್ರಹದಲ್ಲಿರುವ ಸಾವಿರಾರು ಅತ್ಯಮೂಲ್ಯ ವಸ್ತುಗಳ ಜತೆ ಜೋಪಾನವಾಗಿ ತೆಗೆದಿಟ್ಟ ಸುಮಾರು 400 ವರ್ಷ ಗಳಿಗಿಂತಲೂ ಹಿಂದಿನದೆಂದು ನಂಬಲಾದ ಅತಿ ಪುರಾತನ ವಿದ್ಯಾಗಣಪತಿಯ ವಿಗ್ರಹದ ಛಾಯಾಚಿತ್ರವನ್ನು ಉದಯವಾಣಿಯ ಓದುಗಾರಿಗಾಗಿ ನೀಡಿದ್ದು ಪ್ರಪಂಚದಲ್ಲಿ ಇರುವ ಏಕೈಕ ವಿದ್ಯಾಗಣಪತಿ ವಿಗ್ರಹ ಇದಾಗಿದೆ ಎನ್ನುತ್ತಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ