‘ಕುಂಟಂಗೇರಡ್ಕ ಸಾಧನೆ ಸಾರ್ಥಕ’

Team Udayavani, Jul 10, 2019, 5:23 AM IST

ಕುಂಬಳೆ: ಹಸಿರು ಇಂದು ನಮ್ಮ ಪರಿಸರದಿಂದ ಮಾಯವಾಗುತ್ತಿದೆ. ಕಾಂಕ್ರೀಟೀಕರಣಕ್ಕೆ ನಾವು ಮಾರುಹೋಗುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹರಿತ ಕೇರಳ ಮಿಶನ್‌ ಹಸಿರು ತಾಣ ಎಂಬ ಹಸಿರು ಬೆಳೆಸಿ ಉಳಿಸುವ ಯೋಜನೆಯೊಂದಕ್ಕೆ ರೂಪು ನೀಡಿದೆ. ಇಂದು ಅದು ಕುಂಬಳೆ ಗ್ರಾಮ ಪಂಚಾಯತ್‌ನ ಕಿದೂರು ಕುಂಟಂಗೇರಡ್ಕದಲ್ಲಿ ಸಾರ್ಥಕವಾಗಿದೆ ಎಂದು ಹಸಿರು ತಾಣವನ್ನು ಉದ್ಘಾಟಿಸಿ ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಪುಂಡರೀಕಾಕ್ಷ ಹೇಳಿದರು.

ಕಿದೂರು ಪಕ್ಷಿಪ್ರೇಮಿ ತಂಡವು ಪಾಳು ಬಿದ್ದ ಸರಕಾರಿ ಭೂಮಿಯನ್ನು ಕಳೆದ ಮೂರು ವರ್ಷಗಳಿಂದ ಜೈವ ಬೇಲಿ ನಿರ್ಮಿಸಿ ಅಲ್ಲಿ ಸ್ಥಳೀಯ ಸಸ್ಯ ಸಂಪತ್ತನ್ನು ಸಂರಕ್ಷಿಸಿ ಬರುತ್ತಿತ್ತು. ಇದೀಗ ಅದೇ ಜಾಗವನ್ನೇ ಹಸಿರು ತಾಣವನ್ನಾಗಿ ಘೋಷಿಸಲಾಯಿತು. ಅಲ್ಲದೆ ಹೆಚ್ಚಿನ ಸಸ್ಯ ಪ್ರಭೇದಗಳನ್ನು ನೆಟ್ಟು ಬೆಳೆಸುವಲ್ಲಿ ಗ್ರಾಮೀಣ ಉದ್ಯೋಗ ಖಾತರಿಯ ಸದಸ್ಯರಿಗೆ ಜವಾಬ್ದಾರಿ ನೀಡಲಾಯಿತು.

ಗ್ರಾಮ ಪಂಚಾಯತ್‌ ಸದಸ್ಯರಾದ ಅರಣಾ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದರು.

ಹರಿತ ಕೇರಳ ಮಿಶನಿನ ಜಿಲ್ಲಾ ಸಂಯೋಜಕ ಅಭಿರಾಜ್‌, ಕುಂಬಳೆ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಜಯನ್‌, ಸಾಮಾಜಿಕ ಮುಂದಾಳು ಚಂದ್ರ ಕಾಜೂರು, ಚಂದ್ರಾವತಿ ಮಡ್ವ, ಕಿದೂರು ಪಕ್ಷಿ ಪ್ರೇಮಿ ತಂಡದ ಸದಸ್ಯರಾದ ರಾಜು ಕಿದೂರು, ಪ್ರದೀಪ್‌ ಕಿದೂರು, ರವಿಚಂದ್ರ ಕುಂಟಂಗೇರಡ್ಕ, ಸುಂದರ ಕೊಲ್ಲೂರು, ಜೋಯೆಲ್ ಕಿದೂರು ಮೊದಲಾದವರು ಭಾಗವಹಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ