3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಸರಳ ಸೂತ್ರಗಳು


Team Udayavani, May 18, 2021, 6:55 AM IST

3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಸರಳ ಸೂತ್ರಗಳು

ಉಡುಪಿ : ಕೊರೊನಾ ಮೊದಲ ಅಲೆ ಹಿರಿಯರ ಮೇಲೆ, ಎರಡನೆಯ ಅಲೆ ಯುವಕರ ಮೇಲೆ ಬಂದಿರುವುದರಿಂದ ಮೂರನೆಯ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬುದು ಅಂದಾಜು. ಒಂದು ವೇಳೆ ಬಂದರೆ ಏನು ಮಾಡ ಬೇಕೆಂಬ ಕುರಿತು ಸರಕಾರ ಮತ್ತು ವೈದ್ಯ ಲೋಕ ಚಿಂತನೆ/ಸಿದ್ಧತೆ ನಡೆಸುತ್ತಿದೆ. ಇದಕ್ಕೆ ಸರಳ ಪರಿಹಾರವಾಗಿ ಮನೆಯ ಹಿರಿಯರು ಲಸಿಕೆ ಹಾಕಿಕೊಳ್ಳದೆ ಇದ್ದರೆ ಲಭ್ಯವಾದಾಗ ಹಾಕಿಸಿಕೊಳ್ಳಿ. ತಂದೆ ತಾಯಂದಿರು ಮಾಸ್ಕ್ ಹಾಕಿ ಧರಿಸಿ, ಕಾದು ಆರಿಸಿದ ನೀರನ್ನು ಬಳಸಿ. ಫ್ರಿಡ್ಜ್ ನಲ್ಲಿರಿಸಿದ ನೀರು ತ್ಯಜಿಸಿ. ತಾಜಾ ಹಣ್ಣು, ಮೊಳಕೆ ಬರಿಸಿದ ಧಾನ್ಯಗಳನ್ನು ಬಳಸು ವುದು, ಐದು ವರ್ಷದೊಳಗಿನ ಮಕ್ಕಳಿಗೆ ಹಾಕುವ ಎಲ್ಲ ಲಸಿಕೆಗಳನ್ನು ಹಾಕಿಸು ವುದೇ ಮೊದಲಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಿರಿಯ ವೈದ್ಯತಜ್ಞರು ಸಲಹೆ ನೀಡಿದ್ದಾರೆ.

ಸೋಮವಾರ “ಉದಯವಾಣಿ’ ವತಿಯಿಂದ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ “ಕೊರೊನಾ ಮೂರನೆಯ ಅಲೆ ಮತ್ತು ಮಕ್ಕಳ ರಕ್ಷಣೆ’ ಕುರಿತ ವಿಷಯ ಕುರಿತು ಸಾರ್ವಜನಿಕರ ಕರೆಗಳಿಗೆ ಮಣಿಪಾಲ ಕೆಎಂಸಿ ಮಕ್ಕಳ ವಿಭಾಗ ಮುಖ್ಯಸ್ಥ ಡಾ| ಲೆಸ್ಲಿ ಎಡ್ವರ್ಡ್‌ ಲುವಿಸ್‌, ಅಜ್ಜರಕಾಡು ಜಿಲ್ಲಾಸ್ಪತ್ರೆ ಮಕ್ಕಳ ವಿಭಾಗ ಮುಖ್ಯಸ್ಥ ಡಾ| ವೇಣು ಗೋಪಾಲ್‌, ಜಿಲ್ಲಾ ಲಸಿಕಾಧಿಕಾರಿ ಡಾ| ಎಂ.ಜಿ. ರಾಮ ಉತ್ತರಿಸಿದರು.

ಮನೆಯಲ್ಲಿ ಧೂಳು ಶೇಖರವಾಗದಂತೆ ಶುಚಿ ಯಾಗಿರಿಸಿ ಕೊಳ್ಳಬೇಕು. ಮಕ್ಕಳನ್ನು ಫ್ಯಾನ್‌ ಮತ್ತು ಎಸಿ ಕೆಳಗೆ ಮಲಗಿಸಬೇಡಿ. ಇದರಿಂದ ಅಲರ್ಜಿ ಬರುತ್ತದೆ. ಆಟಿಕೆಗಳಲ್ಲಿ ಧೂಳು ಇರದಂತೆ ನೋಡಿಕೊಳ್ಳಿ. ಅಂಗವಸ್ತ್ರ, ಮುಖ ಒರೆಸಿದ ಟಿಶ್ಯೂ ಪೇಪರ್‌, ಮಾಸ್ಕ್ ಇತ್ಯಾದಿಗಳನ್ನು ಇತರರು ಮುಟ್ಟಿದರೆ ಅವರಿಗೂ ಅದರಲ್ಲಿನ ರೋಗಾಣು ಹರಡುವ ಸಾಧ್ಯತೆ ಇರುವು ದರಿಂದ ಅದು ಯಾರಿಗೂ ಸಿಗದಂತೆ ನಿರ್ವಹಿಸಿ. ಮಕ್ಕಳನ್ನು ಎಲ್ಲರ ಜತೆ ಸೇರದಂತೆ ಗಮನ ಹರಿಸಿ ಎಂದರು.

ಅಮೆರಿಕದಲ್ಲಿ 12-15 ವರ್ಷದ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಭಾರತ ದಲ್ಲಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಲಸಿಕೆ ಕೊಡಬಹುದೇ ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.

ಮಳೆಗಾಲದ ಇತರ ಸೋಂಕುಗಳೂ…
ಮಳೆಗಾಲ ಬರುತ್ತಿದೆ. ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾ, ವಾಂತಿಬೇಧಿ, ಎಚ್‌1ಎನ್‌1 ಇತ್ಯಾದಿಗಳೂ ಬರುತ್ತವೆ. ಒಬ್ಬರಿಗೇ ಕೊರೊನಾದೊಂದಿಗೆ ಇನ್ನೊಂದು ಸೋಂಕೂ ಬರಬಹುದು. ಮಕ್ಕಳಿಗೆ ಉಸಿರಾಟದ ಸಮಸ್ಯೆ ಬಂದರೆ, ತಲೆನೋವು, ಸುಸ್ತು ಆಗಿದ್ದರೆ ಗಂಟಲ ದ್ರವ ಪರೀಕ್ಷಿಸಬೇಕು.

ತಲಾ 2,000 ಮಕ್ಕಳಿಗೆ ಸೋಂಕು
2020ರ ಸಾಲಿನಲ್ಲಿ 0-15 ವರ್ಷದ ಸುಮಾರು 2,000 ಮಕ್ಕಳಿಗೆ ಸೋಂಕು ತಗಲಿದ್ದರೆ, 2021ರ 2 ತಿಂಗಳಲ್ಲಿ ಅಷ್ಟೇ ಸಂಖ್ಯೆಯ ಮಕ್ಕಳಿಗೆ ಸೋಂಕು ತಗಲಿದೆ. ಉಡುಪಿ ಜಿಲ್ಲೆಯ 2.25 ಲಕ್ಷ ಮಕ್ಕಳಲ್ಲಿ ಒಂದು ವರ್ಷದಲ್ಲಿ ಆದಷ್ಟೇ ಎರಡೇ ತಿಂಗಳಲ್ಲಿ ಶೇ. 1 ಮಕ್ಕಳಿಗೆ ಸೋಂಕು ತಗಲಿದೆ. ಹೋದ ವರ್ಷ 3-4 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರೆ, ಈ ವರ್ಷ ಆರು ಮಕ್ಕಳು ವೆಂಟಿಲೇಟರ್‌ ವಾರ್ಡ್‌ಗೆ ದಾಖಲಾಗಿದ್ದರು. 15-18 ವರ್ಷದ ಸ್ಥೂಲ ಕಾಯದ ಮಕ್ಕಳು ಬರಬಹುದು. ಇವರನ್ನು ನಿರ್ವ ಹಿಸುವುದು ಸ್ವಲ್ಪ ಕಷ್ಟ ಎನ್ನುತ್ತಾರೆ ಮಣಿ ಪಾಲ ಕೆಎಂಸಿ ಮಕ್ಕಳ ವಿಭಾಗ ಮುಖ್ಯಸ್ಥ ರಾದ ಡಾ| ಲೆಸ್ಲಿ ಎಡ್ವರ್ಡ್‌ ಲುವಿಸ್‌.

ಮಣಿಪಾಲ ಆಸ್ಪತ್ರೆಯಲ್ಲಿ 2020ರಲ್ಲಿ 87 ಗರ್ಭಿಣಿಯರಿಗೆ ಹೆರಿಗೆ ಆಗುವಾಗ ಪಾಸಿಟಿವ್‌ ಇತ್ತು. 11 ಮಕ್ಕಳಿಗೆ ಪಾಸಿಟಿವ್‌ ಬಂದಿತ್ತು. 2020ರಲ್ಲಿ 0-18 ವರ್ಷದ 26 ಮಕ್ಕಳಿಗೆ ಪಾಸಿಟಿವ್‌ ಬಂದಿತ್ತು. ಇದೇ ಎಪ್ರಿಲ್‌ನಿಂದ ಮೇ 11ರ ವರೆಗೆ 16 ಗರ್ಭಿಣಿ ಯರಿಗೆ ಹೆರಿಗೆಯಾಗುವಾಗ ಪಾಸಿಟಿವ್‌ ಇತ್ತು, ಎರಡು ಮಕ್ಕಳಿಗೆ ಪಾಸಿಟಿವ್‌ ಇತ್ತು. 18 ವರ್ಷಕ್ಕಿಂತ ಒಳಗಿನ ಏಳು ಮಕ್ಕಳಿಗೆ ಪಾಸಿಟಿವ್‌ ತಗಲಿದೆ ಎಂದರು.

1 ಮಗು = 4 ದೊಡ್ಡವರು
ದೊಡ್ಡವರಿಗೆ ಆರೋಗ್ಯ ಸಮಸ್ಯೆಯಾದರೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡುವುದಕ್ಕಿಂತ ಮಕ್ಕಳಿಗೆ ಚಿಕಿತ್ಸೆ ನೀಡುವುದು ಕಷ್ಟ. ಒಂದು ಮಗುವನ್ನು ಐಸಿಯುನಲ್ಲಿರಿ ಸುವುದು ನಾಲ್ಕು ಮಂದಿ ದೊಡ್ಡವರನ್ನು ಇರಿಸುವುದಕ್ಕೆ ಸಮ. ಕೇವಲ ಮಗು ವನ್ನು ಮಾತ್ರ ಐಸಿಯುನಲ್ಲಿರಿಸಲು ಆಗುವುದಿಲ್ಲ, ತಾಯಿಯೂ ಬೇಕಾಗುತ್ತದೆ. ಇವರಿಗೂ ರಿಸ್ಕ್ ಇರುತ್ತದೆ.

15 ದಿನಗಳಲ್ಲಿ ಲಸಿಕೆ ಪೂರೈಕೆ ನಿರೀಕ್ಷೆ
ಪ್ರಥಮ ಡೋಸ್‌ ತೆಗೆದುಕೊಳ್ಳುವವರಿಗೆ ಇನ್ನು 15 ದಿನಗಳಲ್ಲಿ ಲಸಿಕೆ ಪೂರೈಕೆ ಆಗುವ ಸಾಧ್ಯತೆ ಇದೆ ಎಂದು ಡಾ| ಎಂ.ಜಿ. ರಾಮ ಹೇಳಿದರು. ಮೊದಲ ಡೋಸ್‌ ಕೊವಿಶೀಲ್ಡ್‌ ಪಡೆದು 12 ವಾರ ಆದವರು ಯಾರೂ ಇಲ್ಲ. ಈ ಬಗ್ಗೆ ಪಟ್ಟಿ ಆರೋಗ್ಯ ಇಲಾಖೆಯಲ್ಲಿದ್ದು ಅಲ್ಲಿಂದ ಸಂದೇಶ ಬಂದ ಬಳಿಕ ಲಸಿಕಾ ಕೇಂದ್ರಕ್ಕೆ ತೆರಳಿ.ಕೊವ್ಯಾಕ್ಸಿನ್‌ ಪಡೆದು 6 ವಾರ ಅದವರಿಗೆ ಸೋಮವಾರ, ಮಂಗಳವಾರ ಸುಮಾರು 1,100 ಡೋಸ್‌ ಕೊಡಲಾಗುತ್ತಿದೆ. ಲಸಿಕೆ ಲಭ್ಯತೆಯ ಮಾಹಿತಿ ಆಶಾ ಕಾರ್ಯ ಕರ್ತೆಯರು ನೀಡುವರು ಎಂದರು.

ಪ್ರಕಾಶ್‌ ಪಡಿಯಾರ್‌ ಮರವಂತೆ, ಧೇನು ಬಾಗಲಕೋಟೆ
– 3ನೇ ಅಲೆಗೆ ಸಿದ್ಧವಾಗುವುದು ಹೇಗೆ?
ಮೂರನೇ ಅಲೆ ಯಾವಾಗ ಬರುತ್ತದೆ ಎನ್ನುವುದು ಕಷ್ಟ. ಮನೆಯಲ್ಲಿ ಸ್ವತ್ಛತೆ ಮುಖ್ಯ. ಕೊರೊನಾ ಮಾರ್ಗಸೂಚಿ ಪಾಲನೆ ಜತೆಗೆ ಮನೆಯ ಹಿರಿಯರೆ ಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಮನೆಮಂದಿಯಲ್ಲಿ ಯಾರಿಗಾ ದರೂ ನೆಗಡಿ, ಕೆಮ್ಮು, ಜ್ವರ ಲಕ್ಷಣವಿದ್ದರೆ ಮಾಸ್ಕ್ ಧರಿಸಬೇಕು. ಬಿಸಿ ನೀರು ಸೇವಿಸಬೇಕು. ಬಳಸಿದ ಕರವಸ್ತ್ರಗಳನ್ನು ಇತರ ವಸ್ತ್ರಗಳ ಜತೆ ಸೇರಿಸಬಾರದು.

ರೋಹಿಣಿ, ಉಡುಪಿ

– 7 ವರ್ಷದ ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿಗೆ ಉಪಾಯ?
-ಇಂಥ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಸಹಜವಾಗಿ ಇರುತ್ತದೆ. ತೂಕ ಚೆನ್ನಾಗಿರಬೇಕು. ಕಾಲಕಾಲಕ್ಕೆ ಹಾಕುವ ಲಸಿಕೆಯನ್ನು ತಪ್ಪದೆ ಹಾಕಿಸಿ ಕೊಂಡಿರಬೇಕು. ಹಣ್ಣುಹಂಪಲು, ಮೊಳಕೆ ಬರಿಸಿದ ಕಾಳುಗಳನ್ನು ಬೇಯಿಸಿ ಬೆಲ್ಲ ತುರಿದು ಸೇರಿಸಿ ಕೊಟ್ಟರೆ ಉತ್ತಮ. ಮನೆಯಲ್ಲೇ ಉತ್ತಮ ಆಹಾರ ತಯಾರಿಸಿ ನೀಡಬೇಕು. ಅಲರ್ಜಿಯಿಂದ ಶೀತ ಬರಬಹುದು. ಇದಕ್ಕಾಗಿ ಶುಚಿತ್ವ ಕಾಪಾಡಿ ಕೊಳ್ಳಬೇಕು. ತಣ್ಣೀರಿನಿಂದ ಸಮಸ್ಯೆಯಿಲ್ಲ. ಆದರೆ ಫ್ರಿಜ್‌ನಲ್ಲಿರಿಸಿದ ಅತೀ ತಣ್ಣೀರು ಒಳ್ಳೆಯದಲ್ಲ.

ನೀಲ್‌,ಅಂಬಲಪಾಡಿ,ಸುಜಾತಾ ಕಲ್ಲಡ್ಕ, ಅನುರಾಧ, ಕುಂದಾಪುರ

– ಕೊರೊನಾ ಮೂರನೇ ಅಲೆಯ ಪರಿಣಾಮ ಏನು?
ಮಕ್ಕಳಿಗೆ ಸಮಸ್ಯೆ ಕಂಡುಬರಬಹುದು. ಈ ಸೋಂಕು ಲಕ್ಷಣ ಕಂಡುಬಂದಾಗ ಜ್ವರ, ಕೆಮ್ಮು, ಉಸಿರಾಟ, ತಲೆ ನೋವು, ಸುಸ್ತು, ವಾಂತಿಭೇದಿಯಂತಹ ಲಕ್ಷಣ ಕಂಡುಬರಬಹುದು. ಈಗಿನಿಂದಲೇ ಎಚ್ಚರ ವಹಿಸಿ. ಕೊರೊನಾ ಸೋಂಕು ಇದ್ದವರು ಮಕ್ಕಳೊಂದಿಗೆ ಸಂಪರ್ಕ ಮಾಡಿದರೆ ಸೋಂಕು ತಗಲಬಹುದು.

ಜಗನ್ನಾಥ, ಕುಕ್ಕಂದೂರು
– ಲಸಿಕೆ ಸ್ವೀಕರಿಸಿದ್ದು,ನಾಲಗೆ ರುಚಿ ಅಷ್ಟಿಲ್ಲ. ಸೋಂಕು ಲಕ್ಷಣವೇ?
-ಲಸಿಕೆ ಪಡೆದ ಕಾರಣ ಸೋಂಕಿನ ತೀವ್ರತೆ ಹೆಚ್ಚಳವಾಗುವ ಸಾಧ್ಯತೆ ಕಡಿಮೆ. ಸೋಂಕು ತಗಲಬಾರದೆಂದಿಲ್ಲ. ಸಂಶಯವಿದ್ದರೆ ಒಮ್ಮೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳಿ. ಸ್ವಂತ ಔಷಧ ಮಾಡಬೇಡಿ. ಮನೆಯವರೊಂದಿಗೆ ಮಾಸ್ಕ್ ಧರಿಸಿ ವ್ಯವಹರಿಸಿ.

ಚಿದಾನಂದ, ಬೆಳ್ಳೆ
– ಪತ್ನಿ ಗರ್ಭಿಣಿ. ಅವರ ಮನೆಯ ಯಾರಿಗೂ ಸೋಂಕಿರಲಿಲ್ಲ. ಈಗ ಅವಳ ವರದಿ ಪಾಸಿಟಿವ್‌ ಬಂದಿದೆ, ಇದು ಹೇಗೆ?
-ಗರ್ಭಿಣಿಯರು ರೋಗಲಕ್ಷಣ ಇಲ್ಲದಿದ್ದರೂ ಪರೀಕ್ಷೆ ಮಾಡಿಸಿಕೊಳ್ಳ ಬೇಕು. ಹೆರಿಗೆ ಸಂದರ್ಭ ವೈದ್ಯರು, ತಾಯಿ ಜಾಗರೂಕತೆ ವಹಿಸಬೇಕು. ಹೆರಿಗೆ ಆದ ದಿನದಿಂದ 10 ದಿನ ಪತ್ನಿಗೆ ಮಾಸ್ಕ್ ಧರಿಸುವಂತೆಸೂಚಿಸಬೇಕು.

ಮೊಹಮ್ಮದ್‌, ವೇಣೂರು
– ಮೂರನೇ ಅಲೆ ಗಾಳಿಯಿಂದ ಹರಡುವ ಸಾಧ್ಯತೆ ಇದೆಯಾ?
-ಈ ವೈರಸ್‌ ಗಾಳಿಯಿಂದಲೂ ಹರಡುತ್ತದೆ. ಆಸ್ಪತ್ರೆಗಳಲ್ಲಿ ಹಿರಿಯರಿಗೆ ಇರುವಷ್ಟು ವ್ಯವಸ್ಥೆ ಮಕ್ಕಳಿಗಿಲ್ಲ. ಐಸಿಯು ಬೆಡ್‌ಗಳ ಸಂಖ್ಯೆ ಕಡಿಮೆ ಇದೆ. ಅದು ಸುಧಾರಣೆಯಾಗಬೇಕು.

ಸುಬ್ರಹ್ಮಣ್ಯ ಹೆಬ್ರಿ, ಪ್ರಭಾಕರ ಕೊರಂಗ್ರಪಾಡಿ ಬೈಲೂರು
– ಮೂರನೆ ಅಲೆ ತಡೆಯಲು ಮಕ್ಕಳಿಗೆ ಲಸಿಕೆ ಇದೆಯಾ?
12ರಿಂದ 15 ವರ್ಷದ ಮಕ್ಕಳಿಗೆ ಯುಎಸ್‌ಎ ಸಹಿತ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ನಮ್ಮಲ್ಲಿನ್ನೂ ಅಧ್ಯಯನ ನಡೆಯುತ್ತಿದ್ದು, 2-3 ತಿಂಗಳಲ್ಲಿ ಈ ಬಗ್ಗೆ ಸೂಚನೆ ಬರಬಹುದು.

ಸುಮಂಗಲಾ, ಉಡುಪಿ
– ಮಕ್ಕಳಿಗೆ ಜ್ವರ ಬಂದ ತತ್‌ಕ್ಷಣ ವೈದ್ಯರಲ್ಲಿಗೆ ಹೋಗಬೇಕಾ?
-ಮನೆಯಲ್ಲಿ ಅಥವಾ ಆಸುಪಾಸಿನ ಮನೆಯವರಿಗೆ ಯಾರಿಗೂ ಕೊರೊನಾ ರೋಗಲಕ್ಷಣ ಇಲ್ಲದಿದ್ದರೆ ಆಸ್ಪತ್ರೆಗೆ ತೆರಳಬೇಕಿಲ್ಲ. ಮಗುವಿಗೆ ಮೈಕೈ ನೋವು, ಆಹಾರಸೇವನೆ ಮಾಡದಿದ್ದರೆ, ಆಸಕ್ತಿ ಇಲ್ಲದೆ ಮಲಗಿದರೆ ಪರೀಕ್ಷೆ ಮಾಡಿಸಬೇಕು.

ಮಹೇಶ್‌ ಸಜ್ಜನ್‌, ಬೀದರ್‌, ಗೋಪಿನಾಥ ಪ್ರಭು, ಉಡುಪಿ
– ಬ್ಲ್ಯಾಕ್‌ ಫ‌ಂಗಸ್‌, ಕೊರೊನಾ ಕ್ಕೆ ಮುನ್ನೆಚ್ಚರಿಕೆ ಎನು?
ಕೊರೊನಾ ಪೀಡಿತ ವಯಸ್ಕರಲ್ಲಿ, ಸ್ಟಿರಾಯ್ಡ ತೆಗೆದುಕೊಂಡವರಲ್ಲಿ, ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಕಾಣಿಸಿಕೊ ಳ್ಳುವ ಸಾಧ್ಯತೆ ಇದೆ. ಕೊರೊನಾ ಲಕ್ಷಣ ಇದ್ದರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರಥಮ ಹಂತದ ಚಿಕಿತ್ಸೆ ನೀಡಿ 48 ಗಂಟೆ ಮನೆಯಲ್ಲಿರುವುದು ಉತ್ತಮ.

ಸುಲೈಮಾನ್‌, ಮಟಪಾಡಿ
– ನನಗೆ 75 ವರ್ಷ. ಹೆಂಡತಿಯೊಂದಿಗೆ ವಾಸವಾಗಿದ್ದೇನೆ. ಎರಡೂ ಡೋಸ್‌ ಲಸಿಕೆ ಪಡೆದಿರುವೆ. ಮನೆಪಕ್ಕದವರಿಗೆ ಸೋಂಕಿದೆ. ನಾವು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?
-ಪಕ್ಕದ ಮನೆಯವರ ಸಂಪರ್ಕ ನಿಲ್ಲಿಸಬೇಕು. ಅನಿವಾರ್ಯವಾದರೆ ಮಾಸ್ಕ್ ಧರಿಸಿ. ಮನೆಯೊಳಗೆ ಸೋಂಕಿತರು ಇಲ್ಲದಿದ್ದರೆ ಮಾಸ್ಕ್ ಧರಿಸಬೇಕಿಲ್ಲ. ಸಾಮಾಜಿಕ ಅಂತರ ಪಾಲಿಸಿ. ಲಸಿಕೆ ಪಡೆದಿರುವ ಕಾರಣ ಸಮಸ್ಯೆ ಇಲ್ಲ.

ದೀಪ್ತಿ, ಮೂಲ್ಕಿ
– 5 ವರ್ಷದ ಒಳಗಿನ ಮಕ್ಕಳಲ್ಲಿ ಜ್ವರ, ಉಸಿರಾಟದ ಸಮಸ್ಯೆ ಕಂಡು ಬಂದರೆ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು?
-ಮಕ್ಕಳಲ್ಲಿ ಅಸ್ತಮದ ಸಮಸ್ಯೆಯಿದ್ದರೆ ವೈದ್ಯರು ಸೂಚಿಸಿರುವ ಔಷಧಗಳನ್ನು ತೆಗೆದುಕೊಳ್ಳಬೇಕು. ವೈದ್ಯರು ಸೂಚಿಸಿರುವ ಔಷಧ, ಜ್ವರದ ಮಾತ್ರೆ, ಕಷಾಯ ಸೇವನೆ ಉತ್ತಮ. ಎರಡು ದಿನದೊಳಗೆ ಕಡಿಮೆಯಾಗದಿದ್ದರೆ ವೈದ್ಯರನ್ನು ಭೇಟಿ ಮಾಡಬೇಕು.

ಕೃಷ್ಣಭಟ್‌, ಮಂಗಳೂರು
– ಕೊರೊನಾ ಬಾರದಂತೆ ತಡೆಯುವುದು ಹೇಗೆ?
-ಇದಕ್ಕಾಗಿ ಮನೆಯಲ್ಲಿರುವ ಎಲ್ಲರೂ ಮೊದಲು ಲಸಿಕೆ ತೆಗೆದುಕೊಳ್ಳಬೇಕು. ಕೆಮ್ಮು, ಜ್ವರ ಇದ್ದರೆ ಮಾಸ್ಕ್ ಧರಿಸಬೇಕು. ಸ್ವತ್ಛತೆ, ಉತ್ತಮ ಆಹಾರ ಸೇವನೆ ಅಗತ್ಯ.

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.