SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಯಾವಾಗ ಯಾವ ವಿಷಯ ಇಲ್ಲಿದೆ ಫುಲ್ ಡೀಟೇಲ್ಸ್
ಮಾರ್ಚ್ 27 ರಿಂದ ಎಪ್ರಿಲ್ 09ರವರೆಗೆ ನಡೆಯಲಿದೆ SSLC ಪರೀಕ್ಷೆ
Team Udayavani, Nov 29, 2019, 9:18 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಮಾರ್ಚ್ 27ರಿಂದ ಏಪ್ರಿಲ್ 9ರ ತನಕ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆ ನಡೆಯಲಿದ್ದು, ಈ ಸಂಬಂಧ ಅಧಿಕೃತ ವೇಳಾಪಟ್ಟಿಯನ್ನು ಮಂಡಳಿ ತನ್ನ ಅಧಿಕೃತ ವೆಬ್ ಸೈಟ್ನಲ್ಲಿ ಪ್ರಕಟಿಸಿದೆ.
ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30/45ರವೆಗೆ ಮತ್ತು ಕೆಲವು ಪರೀಕ್ಷೆಗಳು 2ರಿಂದ 5.15ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಭಾನುವಾರ ರಜೆ ಸೇರಿದಂತೆ ಏಳು ದಿನಗಳ ರಜೆ ಇದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಿದೆ.
ಪ್ರಥಮ ಭಾಷೆಗೆ ನಡೆಯಲಿರುವ ಪರೀಕ್ಷೆಗಳು ಒಟ್ಟು 100 ಅಂಕಗಳನ್ನು ಹೊಂದಿದ್ದರೆ, ದ್ವಿತೀಯ ಭಾಷೆ, ತೃತೀಯ ಭಾಷೆ ಹಾಗೂ ಕೋರ್ ಸಬ್ಜೆಕ್ಟ್ಸ್ ಗಳಿಗೆ 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಇನ್ನು NSQF ಪರೀಕ್ಷಾ ವಿಷಯಗಳಿಗೆ ಲಿಖಿತ ಪರೀಕ್ಷೆ 60 ಅಂಕಗಳಿಗೆ ನಡೆಯಲಿದೆ.
ವೇಳಾಪಟ್ಟಿ
ಮಾ.27 ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಆಂಗ್ಲ, ಸಂಸ್ಕೃತ
ಮಾ.28 ರಜೆ
ಮಾ.29 ರಜೆ
ಮಾ.30 ಕೋರ್ ಸಬ್ಜೆಕ್ಟ್: ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮಾ.31 ರಜೆ
ಏ.1 ದ್ವಿತೀಯ ಭಾಷೆ: ಅಂಗ್ಲ, ಕನ್ನಡ
ಏ.2 ರಜೆ
ಏ.3 ತೃತೀಯ ಭಾಷೆ: ಹಿಂದಿ, ಕನ್ನಡ, ಆಂಗ್ಲ, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್ಎಸ್ಕ್ಯೂಎಫ್ ಪರೀಕ್ಷೆಗಳು ನಡೆಯಲಿವೆ.
ಏ.4 ಕೋರ್ ಸಬ್ಜೆಕ್ಟ್
ಏ.5 ರಜೆ
ಏ.6 ರಜೆ
ಏ.7 ಕೋರ್ ಸಬ್ಜೆಕ್ಟ್: ಗಣಿತ, ಸಮಾಜಶಾಸ್ತ್ರ
ಏ.8 ರಜೆ
ಏ.9 ಕೋರ್ ಸಬ್ಜೆಕ್ಟ್: ಸಮಾಜ ವಿಜ್ಞಾನ
ಎಪ್ರಿಲ್ 03ರಂದು 9.30 ರಿಂದ 11.45ರವರೆಗೆ NSQF ಪರೀಕ್ಷೆಗಳು ನಡೆಯಲಿವೆ (ಮಾಹಿತಿ ತಂತ್ರಜ್ಞಾನ, ರೀಟೇಲ್, ಅಟೋಮೊಬೈಲ್,ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್ ನೆಸ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ