Udayavni Special

ಕೇರಳದಲ್ಲೀಗ ಬಿಸಿಗಾಳಿಗಿಂತ ಚಿನ್ನದ ಬಿರುಗಾಳಿ!

Team Udayavani, Mar 8, 2021, 6:40 AM IST

ಕೇರಳದಲ್ಲೀಗ ಬಿಸಿಗಾಳಿಗಿಂತ ಚಿನ್ನದ ಬಿರುಗಾಳಿ!

ಕರಾವಳಿ ಭಾಗದಲ್ಲಿ ಬೇಸಗೆಯ ಧಗೆ ಆರಂಭವಾಗಿ ಕೆಲವು ದಿನಗಳಾಗಿವೆ. ಈ ಬಾರಿಯ ತಾಪಮಾನ ಕಂಡ ಊರ ಹಿರಿಯರು, ಈ ಬೇಸಗೆ ಇನ್ನಷ್ಟು ಕಷ್ಟ ಎನ್ನುತ್ತಿದ್ದಾರೆ. ಅದೂ ಕರಾವಳಿಯ ಅಂಚಿನಲ್ಲೇ ಇರುವ ಕೇರಳದಲ್ಲಂತೂ ಈ ತಾಪಮಾನ ತುಸು ಇನ್ನೂ ಹೆಚ್ಚು. ಯಾಕೆಂದರೆ ಮೊನ್ನೆವರೆಗೂ ತಣ್ಣಗೆ ಬೀಸುತ್ತಿದ್ದ ಗಾಳಿಯೂ ದಿನೇದಿನೆ ಬಿಸಿಯಾಗತೊಡಗಿದೆ. ಅದೂ ಚಿನ್ನದ ಬಿರುಗಾಳಿ.

ಕಳೆದ ಚುನಾವಣೆವರೆಗೂ ಇಲ್ಲಿ ಇದ್ದದ್ದು ಎರಡೇ ತಂಡಗಳು. ಪ್ರದರ್ಶನ ಗೊಳ್ಳುತ್ತಿದ್ದುದೂ ಹಳೆಯ ಕಥಾನಕಗಳೇ. ಕೇರಳ ಹಾಗೂ ತಮಿಳುನಾಡುಗಳ ವಿಶೇಷ ಗೊತ್ತಿರಬಹುದು. ಅಲ್ಲಿ ಏಕ ವ್ಯಕ್ತಿ ಪ್ರದರ್ಶನಗಳೇ ಇಲ್ಲ. ಏನಿದ್ದರೂ ತಂಡಗಳಂತೆಯೇ. ಒಂದು ಬಗೆಯಲ್ಲಿ ಕ್ರಿಕೆಟ್‌ನಲ್ಲಿ ದೊಡ್ಡವರನ್ನೆಲ್ಲ ಸೇರಿಸಿ “ವಿಶೇಷ ಇಲೆವನ್‌’ ಎಂದು ಆಡಿಸುತ್ತಾರಲ್ಲಾ ಹಾಗೆಯೇ. ಆದರೆ ಈ ಬಾರಿ ಕೇರಳದಲ್ಲಿ ಕೊಂಚ ವಿಭಿನ್ನವಾಗಿದೆ. ಎಲ್‌ಡಿಎಫ್ ಹಾಗೂ ಯುಡಿಎಫ್ ಜತೆಗೆ ಪ್ರದರ್ಶನಕ್ಕೆ ಬಿಜೆಪಿಯೂ ಸೇರಿಕೊಂಡಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಎಲ್‌ಡಿಎಫ್ ನ್ನು ಮುನ್ನಡೆಸುತ್ತಿರುವವರು. ಇದ ರಲ್ಲಿ ಎಡಪಕ್ಷಗಳದ್ದೇ ಸಾರಥ್ಯ. ಯುಡಿಎಫ್ನಲ್ಲಿ ಕಾಂಗ್ರೆಸ್‌ ದೊಡ್ಡ ರಾಷ್ಟ್ರೀಯ ಪಕ್ಷ. ಎರಡೂ ತಂಡಗಳೂ ಶಂಖ ಊದಿಯಾಗಿವೆ. ಎನ್‌ಡಿಎ ಯೂ ಹಿಂದೆ ಬಿದ್ದಿಲ್ಲ. ಅವರ ವಿಜಯ ಯಾತ್ರೆಯೂ ಆರಂಭವಾಗಿದೆ.

ಸದ್ಯಕ್ಕೆ ಪಿಣರಾಯ್‌ ವಿಜಯನ್‌ ಮುಖಕ್ಕೆ ರಾಚುತ್ತಿರುವುದು ಚಿನ್ನ ಕಳ್ಳಸಾ ಗಣೆಯ ಆರೋಪಕ್ಕೆ ಅಂಟಿಕೊಂಡಿರುವ ಬಿಸಿಬೂದಿ. ಚಿನ್ನ ಕಳ್ಳಸಾಗಣೆ ಸಂಬಂಧಿ ಸಿದ ಸ್ವಪ್ನಾ ಸುರೇಶ್‌ ಪ್ರಕರಣದಲ್ಲಿ ಸಿಎಂ ಕಚೇರಿಯ ಪಾತ್ರದ ಕುರಿತು ಆರೋ ಪಗಳು ಕೇಳಿಬರುತ್ತಿವೆ.

ಅದಕ್ಕೆ ಪಿಣರಾಯ್‌ ವಿಜಯನ್‌, “ಸುಂಕ ಇಲಾಖೆಯ ಅಧಿಕಾರಿಗಳು ಕೇಂದ್ರದ ತಾಳಕ್ಕೆ ಕುಣಿಯುತ್ತಿ ದ್ದಾರೆ. ಅವರೆಲ್ಲ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ದ್ದಾರೆ. ಅದಕ್ಕೆ ಪ್ರತಿಯಾಗಿ ಇಂದು ತಿರುವನಂತಪುರದಲ್ಲಿ ಬಿಜೆಪಿ ಪರ ಚುನಾವಣ ಪ್ರಚಾರವನ್ನು ಕೈಗೊಂಡ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಚಿನ್ನದ ಹಗರಣ ಕುರಿತೇ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಎ. 6 ರಂದು ನಡೆಯುವ ಚುನಾವಣೆಯಲ್ಲಿ ಸದ್ಯಕ್ಕೆ ಜೋರಾದ ಪ್ರದರ್ಶನ ಆರಂಭ ವಾಗಿರುವುದು ಇವರಿಬ್ಬರದ್ದೇ. ಕಾಂಗ್ರೆಸ್‌ನ ವರಿಷ್ಠ ರಾಹುಲ್‌ ಗಾಂಧಿ ಚುನಾವಣ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಬಿಸಿಗಾಳಿಯ ತೀವ್ರತೆಯನ್ನು ಹೆಚ್ಚಿ ಸುವತ್ತ ಗಮನಕೊಟ್ಟಿದ್ದು ಕಡಿಮೆ.

ಸದ್ಯದ ವಾತಾವರಣದಲ್ಲಿ ಹಣಾ ಹಣಿಯ ವರಸೆ ಎಲ್‌ಡಿಎಫ್ ಮತ್ತು ಯುಡಿಎಫ್ ನಿಂದ ಎಲ್‌ಡಿಎಫ್ ಮತ್ತು ಬಿಜೆಪಿಯ ಕಡೆಗೆ ತಿರುಗಿದಂತಿದೆ. ಬಿಜೆಪಿ ಕಳೆದ ಬಾರಿ ಗೆದ್ದದ್ದು ಒಂದು ಕ್ಷೇತ್ರ. ಈ ಬಾರಿ ಕಣ್ಣಿಟ್ಟಿರುವುದು 15-16 ಕ್ಷೇತ್ರಗಳತ್ತ.

ಕಳೆದ ಎರಡು ವಿಧಾನಸಭಾ ಚುನಾವಣೆಗಳನ್ನು ಅವಲೋಕಿಸಿದರೆ ಕೇರಳದಲ್ಲಿ ಎರಡೂ ಹಳೇ ತಂಡಗಳ ನಿದ್ದೆ ಕೊಂಚ ಹಾಳಾಗಿದೆ. ಮತ ಗಳಿಕೆಯನ್ನೇ ಲೆಕ್ಕ ಹಾಕೋಣ. ಎಲ್‌ಡಿಎಫ್ 2016 ರ ಚುನಾವಣೆಯಲ್ಲಿ ಶೇ. 43.48ರಷ್ಟು (ಚಲಾವಣೆಯಾದ ಒಟ್ಟು ಮತಗಳಲ್ಲಿ) ಮತ ಪಡೆದು 91 ಸ್ಥಾನ ಗಳಿಸಿ ಅಧಿಕಾರ ಪಡೆಯಿತು. ಮತ ಗಳಿಕೆ ಪ್ರಮಾಣ 2011 ರಲ್ಲಿ ಶೇ. 44. 94ರಷ್ಟಿತ್ತು. ಯುಡಿಎಫ್ 2016ರಲ್ಲಿ ಶೇ. 38.81ರಷ್ಟು ಮತ ಗಳಿಸಿತು. ಪಡೆದ ಸ್ಥಾನಗಳು 47. ಈ ಪ್ರಮಾಣ 2011ರಲ್ಲಿ ಶೇ. 45. 83ರಷ್ಟಿತ್ತು. 2011ರಲ್ಲಿ ಲೆಕ್ಕಕ್ಕೇ ಇಲ್ಲದ ಎನ್‌ಡಿಎ 2016ರ ಚುನಾವಣೆಯಲ್ಲಿ ಶೇ. 14.96ರಷ್ಟು ಮತ ಗಳಿಸಿ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು.

ಈ ಬಿಸಿಗಾಳಿ ಯಾರ ಪಾಲಿಗೆ ಬಿರುಗಾಳಿಯಾಗಿ ಪರಿಣಮಿಸುತ್ತದೋ ಕಾದು ನೋಡಬೇಕು.

– ಅಶ್ವಘೋಷ

ಟಾಪ್ ನ್ಯೂಸ್

heath streak

ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!

ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್

ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್

‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು

‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು

inc tv youtube channel by congress

ಕಾಂಗ್ರೆಸ್ ನಿಂದ ಹೊಸ ಚಾನೆಲ್ “ಐಎನ್ ಸಿ ಟಿವಿ” ಶುರು

ಸವಣೂರು ಗೇಟ್ ಬಳಿ ರೈಲುಹಳಿಯಲ್ಲಿ ಯುವಕನ ಶವ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ!

ಸವಣೂರು ಗೇಟ್ ಬಳಿ ರೈಲುಹಳಿಯಲ್ಲಿ ಯುವಕನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ!

anrich nortje

ಡೆಲ್ಲಿ ಕ್ಯಾಪಿಟಲ್ಸ್ ವೇಗಿಗೆ ಕೋವಿಡ್-19 ಸೋಂಕು ದೃಢ!

ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಅಣ್ಣಾವ್ರು ಕುಮಾರರಾಮ ಚಿತ್ರ ಮಾಡಬೇಕಿತ್ತು, ಆದ್ರೆ..!

ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಅಣ್ಣಾವ್ರು ಕುಮಾರರಾಮ ಚಿತ್ರ ಮಾಡಬೇಕಿತ್ತು, ಆದ್ರೆ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಾಳುವಿಕೆಗಿಂತನ್ಯ ತಪವು ಇಲ್ಲ

ತಾಳುವಿಕೆಗಿಂತನ್ಯ ತಪವು ಇಲ್ಲ

ಕೊರೊನಾ ಬಗ್ಗೆ ಉಡಾಫೆ ಬೇಡವೇ ಬೇಡ

ಕೊರೊನಾ ಬಗ್ಗೆ ಉಡಾಫೆ ಬೇಡವೇ ಬೇಡ

ಅಸೀರ ಮತ್ತು ಜಿಜಾನ ಮರುಭೂಮಿಯ  ಹಸುರಿನ ಆಗರ

ಅಸೀರ ಮತ್ತು ಜಿಜಾನ ಮರುಭೂಮಿಯ ಹಸುರಿನ ಆಗರ

ಲಾಕ್‌ಡೌನ್‌ನಲ್ಲಿ ಲಂಡನ್‌ ಲೈಫ್

ಲಾಕ್‌ಡೌನ್‌ನಲ್ಲಿ ಲಂಡನ್‌ ಲೈಫ್

ಭ್ರಷ್ಟಾಚಾರದ ವಿರುದ್ಧ ಸಮರ ಅಸಹಾಯಕ ಹೆಣ್ಣಿನ ಚಿತ್ರ ಸಾರ ಆ್ಯಕ್ಟ್ 1978

ಭ್ರಷ್ಟಾಚಾರದ ವಿರುದ್ಧ ಸಮರ ಅಸಹಾಯಕ ಹೆಣ್ಣಿನ ಚಿತ್ರ ಸಾರ ಆ್ಯಕ್ಟ್ 1978

MUST WATCH

udayavani youtube

ಹೊಟ್ಟೆ ತುಂಬಾ ಊಟ ಮಾಡಿದ ಕೂಡಲೇ ಮಲಗಬಾರದು ಏಕೆ?

udayavani youtube

ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಪುತ್ತೂರು ಮಹಾಲಿಂಗೇಶ್ವರ ಮತ್ತು ವೆಂಕಟರಮಣ ದೇವರ ಮುಖಾಮುಖಿ.!

udayavani youtube

CBSE 10th ಪರೀಕ್ಷೆ ರದ್ದು, 12th ಪರೀಕ್ಷೆ ಮುಂದೂಡಿಕೆ

udayavani youtube

ಮಸ್ಕಿಯಲ್ಲಿ ಪ್ರತಾಪ್‌ ಗೌಡ ಪರ ಖ್ಯಾತ SINGER MANGLI

udayavani youtube

ಹೊಸ ಕೈಗಾರಿಕಾ ನೀತಿ 2020-2025, ಬಗ್ಗೆ ಮಾಹಿತಿ ಇಲ್ಲಿದೆ!

ಹೊಸ ಸೇರ್ಪಡೆ

heath streak

ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!

ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್

ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್

‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು

‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು

inc tv youtube channel by congress

ಕಾಂಗ್ರೆಸ್ ನಿಂದ ಹೊಸ ಚಾನೆಲ್ “ಐಎನ್ ಸಿ ಟಿವಿ” ಶುರು

ಸವಣೂರು ಗೇಟ್ ಬಳಿ ರೈಲುಹಳಿಯಲ್ಲಿ ಯುವಕನ ಶವ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ!

ಸವಣೂರು ಗೇಟ್ ಬಳಿ ರೈಲುಹಳಿಯಲ್ಲಿ ಯುವಕನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.