ಕರಾವಳಿಯ ವಾಜಪೇಯಿ, ಬಿಜೆಪಿಯ ಭೀಷ್ಮ ರಾಮ ಭಟ್‌ ನಿಧನ : ಬೊಮ್ಮಾಯಿ ಸಂತಾಪ


Team Udayavani, Dec 7, 2021, 9:08 AM IST

kjjkjkhjh

ಪುತ್ತೂರು: ಕರಾವಳಿಯ ವಾಜಪೇಯಿ ಎಂದೇ ಹೆಸರುವಾಸಿಯಾಗಿದ್ದ ತತ್ತ್ವಾಧಾರಿತ  ರಾಜಕಾರಣಿ ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನೇತಾರ, ಮಾಜಿ ಶಾಸಕ ಉರಿಮಜಲು ರಾಮ ಭಟ್‌ (92) ಕೊಂಬೆಟ್ಟು ನಿವಾಸದಲ್ಲಿ ಡಿ. 6ರಂದು ನಿಧನ ಹೊಂದಿದರು. ಅವರು ಪತ್ನಿ ಸವಿತಾ ಭಟ್‌, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಹಲವು ಸಮಯದಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರಾಮ ಭಟ್‌ ಅವರು ಕೆಲವು ತಿಂಗಳ ಹಿಂದೆ ಮಂಗ ಳೂರು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯು ತ್ತಿದ್ದರು.

ಅ.18ರಂದು ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖ ಲಿಸಲಾಗಿತ್ತು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿ ಅನೇಕ ನಾಯಕರು ರಾಮ ಭಟ್‌ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಕರಾವಳಿಯ ವಾಜಪೇಯಿ: ಪುತ್ತೂರಿನ ಪ್ರಸಿದ್ಧ ಉರಿಮಜಲು ಮನೆತನಕ್ಕೆ ಸೇರಿದ ರಾಮ ಭಟ್‌ ರಾಷ್ಟ್ರ ಮಟ್ಟದ ನಾಯಕ ರಾಗಿ ಗಮನ ಸೆಳೆದವರು. 1929ರಲ್ಲಿ ಜನಿಸಿದ ಅವರು ಬೆಳಗಾವಿ ಯಲ್ಲಿ ಕಾನೂನು ಪದವಿ ಪಡೆದು ಮಂಗಳೂ ರಿನಲ್ಲಿ ವಕೀಲ ವೃತ್ತಿ ಆರಂಭಿಸಿದರು. ಹೆಂಚಿನ ಕಾರ್ಖಾನೆ ಕಾರ್ಮಿಕರ ಸಮಸ್ಯೆ ವಿರುದ್ಧ ಹೋರಾಟಕ್ಕೆ ಇಳಿದು ಸಾರ್ವಜನಿಕ ಜೀವನಕ್ಕೆ ಧುಮುಕಿದ್ದರು.

1951ರಲ್ಲಿ ಭಾರತೀಯ ಜನ ಸಂಘ ಸ್ಥಾಪನೆಯಾದಾಗ ಅದರಲ್ಲಿ ಸಕ್ರಿಯವಾಗಿ ತೊಡಗಿ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿ ದ್ದರು. ಸರಿ ಸುಮಾರು 60 ವರ್ಷಗಳ ಕಾಲ ಜನ ಸಂಘ, ಬಿಜೆಪಿ ಪಕ್ಷದ ನೇತಾರರಾಗಿ ಕರಾವಳಿಯ ವಾಜಪೇಯಿ ಎಂದೇ ಜನಜನಿತರಾಗಿದ್ದರು.

ವಿಧಾನಸಭೆಗೆ ಸ್ಪರ್ಧೆ: 1957ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರ ಒತ್ತಾಸೆ ಯಂತೆ ಪುತ್ತೂ ರಿನಲ್ಲಿ ಕಣಕ್ಕಿಳಿದ ರಾಮ ಭಟ್‌ ಮೊದಲ ಚುನಾವಣೆಯಲ್ಲಿ 11, 684 ಮತ ಗಳಿಸಿ ಪರಾಜಿತರಾದರು. ಅನಂತರ ರಾಜ ಕೀಯ ಕ್ಷೇತ್ರದಲ್ಲಿ ಸಕ್ರಿಯರಾದ ಅವರು 1962, 1967 ಮತ್ತು 1972ರಲ್ಲೂ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.

ರಾಷ್ಟ್ರೀಯ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ ಸೇರಿ  ದಂತೆ ರಾಷ್ಟ್ರ ನಾಯಕರ ಜತೆ ನಿಕಟ ಸಂಬಂಧ ಹೊಂದಿದ್ದರು. ಮೊದಲ ಕಾಂಗ್ರೆಸೇತರ ಶಾಸಕ: 1978ರಲ್ಲಿ ಜನತಾ ಪಕ್ಷ ಮತ್ತು ಜನಸಂಘ ವಿಲೀನಗೊಂಡ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಿಂದ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ ಪಕ್ಷದ ಈಶ್ವರ ಭಟ್‌ ಅವರನ್ನು ಸೋಲಿಸಿ ಶಾಸಕ ರಾದರು.

ತನ್ಮೂಲಕ ಪುತ್ತೂರಿನ ಮೊದಲ ಕಾಂಗ್ರೆಸೇತರ ಶಾಸಕ ಎಂಬ ಕೀರ್ತಿ ಅವರಿಗೆ ಒಲಿಯಿತು. 1980ರಲ್ಲಿ ಜನಂಘದ ಉತ್ತರಾಧಿಕಾರಿಯಾಗಿ ಬಿಜೆಪಿ ಸ್ಥಾಪನೆಯಾದಾಗ ರಾಮ ಭಟ್‌ ಬಿಜೆಪಿ ನಾಯಕರಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡರು. 1983ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕಾಂಗ್ರೆಸ್‌ನ ಬಿ. ಸಂಕಪ್ಪ ರೈ ಅವರನ್ನು ಸೋಲಿಸಿ 2ನೇ ಬಾರಿ ಶಾಸಕರಾದರು.

ತನ್ಮೂಲಕ ಬಿಜೆಪಿಯ ಮೊದಲ ಶಾಸಕ ಎಂಬ ಹಿರಿಮೆಗೆ ಪಾತ್ರರಾದರು. ಇಂದು ಅಂತ್ಯ ಸಂಸ್ಕಾರ: ರಾಮ ಭಟ್‌ ಅವರ ಅಂತ್ಯ ಸಂಸ್ಕಾರ ಮಂಗಳವಾರ ಮಧ್ಯಾಹ್ನ ಪುತ್ತೂರಿನ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ. ಬೆಳಗ್ಗೆ ಪಾರ್ಥಿವ ಶರೀರವನ್ನು ವಿವೇಕಾನಂದ ಮಹಾವಿದ್ಯಾಲಯಕ್ಕೆ ಕೊಂಡೊಯ್ದು ಅಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಗೌರವ ನಮನ ಸಲ್ಲಿಸಲಾಗುತ್ತದೆ.

ನಂತರ ಪುತ್ತೂರು ಕೋ ಆಪರೇಟಿವ್‌ ಟೌನ್‌ ಬ್ಯಾಂಕ್‌ ಅಂಗಳದಲ್ಲಿ 11 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದಾದ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ.

ಟಾಪ್ ನ್ಯೂಸ್

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

goa

Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ

1-ddsadsa

Amit Shah; ತಡೆಯದಿದ್ದರೆ ಅಕ್ರಮ ವಲಸಿಗರೇ ಬಹುಸಂಖ್ಯಾಕರಾಗುತ್ತಾರೆ!

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

ದಸರೆಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Electric scooter

Battery production ಅಮೆರಿಕ ಹೂಡಿಕೆ; ಚೀನಕ್ಕೆ ಸಡ್ಡು

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.