ಗ್ರಾಚುಯಿಟಿ ಬಗ್ಗೆ ನಿಮಗೆಷ್ಟು ಗೊತ್ತು?

Team Udayavani, Mar 14, 2021, 6:50 AM IST

ಗ್ರಾಚುಯಿಟಿ ಬಗ್ಗೆ ನಿಮಗೆಷ್ಟು ಗೊತ್ತು?

ನಿವೃತ್ತಿಯ ಸಮಯದಲ್ಲಿ ಉದ್ಯೋ ಗಿಗಳಿಗೆ ರಜಾ ನಗದೀಕರಣ, ಭವಿಷ್ಯ ನಿಧಿ, ಪಿಂಚಣಿ ಮುಂತಾದ ನಿವೃತ್ತಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಇವು ಇಲಾಖೆಯಿಂದ ಇಲಾಖೆಗೆ, ಕಂಪೆನಿಯಿಂದ ಕಂಪೆನಿಗಳಿಗೆ ವ್ಯತ್ಯಾಸ ಇರಬಹುದು. ದೊರಕುವ ಮೊತ್ತದಲ್ಲಿಯೂ ಹೆಚ್ಚು ಕಡಿಮೆ ಆಗಹುದು. ಉಳಿದೆಲ್ಲ ಸೌಲಭ್ಯಗಳಿಗೆ ಹೋಲಿಸಿದರೆ ಕಂಪೆನಿ ಉದ್ಯೋಗಿಗೆ ನೀಡುವ ಗ್ರಾಚುಯಿಟಿ ಮೊತ್ತ ಸ್ವಲ್ಪ ಹೆಚ್ಚಾಗಿರುತ್ತದೆ.

ಗ್ರಾಚುಯಿಟಿ ಎನ್ನುವುದು, ಉದ್ಯೋಗದಾತನು ತನ್ನ ಉದ್ಯೋ ಗಿಗೆ, ಅವನು ನಿವೃತ್ತನಾದಾಗ, ರಾಜೀನಾಮೆ ನೀಡಿದಾಗ ಅಥವಾ ಯಾವುದೇ ಕಾರಣಕ್ಕೆ ಕೆಲಸ ಬಿಟ್ಟಾಗ ನಿವೃತ್ತಿ ಸೌಲಭ್ಯ ಎಂದು ನೀಡುವ ಮೊತ್ತ. ಇದು ಕೆಲವು ಷರತ್ತುಗಳಿಗೆ, ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಉದ್ಯೋಗಿಯು ಕನಿಷ್ಠ ಐದು ವರ್ಷಗಳ ಕಾಲ ಆ ಕಂಪೆನಿಯಲ್ಲಿ ಸೇವೆ ಸಲ್ಲಿಸಿರಬೇಕು. ಅಕಸ್ಮಾತ್‌ ಐದು ವರ್ಷ ಸೇವೆ ಸಲ್ಲಿಸುವ ಮೊದಲೇ ನಿಧನ ಹೊಂದಿದರೆ, ಸೇವೆಯ ಅವಧಿಯ ಅನುಪಾತದಲ್ಲಿ ಈ ಮೊತ್ತವನ್ನು ನೀಡಲಾಗುವುದು.

ಲೆಕ್ಕಾಚಾರ ಹೀಗಿರುತ್ತದೆ
ಹೀಗೆ ಪರಿಹಾರದ ರೂಪದಲ್ಲಿ ಸಿಗುವ ಗ್ರಾಚುಯಿಟಿ ಹಣದ ಮೊತ್ತ ಒಬ್ಬ ಉದ್ಯೋಗಿಯ ಸೇವೆಯ ಕೊನೇ ತಿಂಗಳ ಸಂಬಳ ಮತ್ತು ಆತನ ಒಟ್ಟೂ ಸೇವೆಯ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಸೇವೆಯ ಅವಧಿ ಆರು ತಿಂಗಳುಗಳಿಗಿಂತ ಹೆಚ್ಚು ಇದ್ದರೆ ಅದನ್ನು ಪೂರ್ಣ ವರ್ಷವಾಗಿ ಪರಿಗಣಿಸಲಾಗುವುದು. ಪೂರ್ಣಗೊಳಿಸಿದ ಪ್ರತಿಯೊಂದು ವರ್ಷಕ್ಕೆ 15 ದಿನಗಳ ಸಂಬಳವನ್ನು ನೀಡಲಾಗುವುದು. ಉದ್ಯೋಗಿಯು 25 ವರ್ಷ 7 ತಿಂಗಳು ಸೇವೆ ಸಲ್ಲಿಸಿದ್ದರೆ, ಆ ಸೇವಾ ಅವಧಿಯನ್ನು 26 ವರ್ಷ ಎಂದು ಪರಿಗಣಿಸಲಾಗುತ್ತದೆ.

ಸಂಸ್ಥೆ ನೀಡುವ ಗಿಫ್ಟ್!
ಗ್ರಾಚುಯಿಟಿ ಲೆಕ್ಕ ಹಾಕುವಾಗ ಮೊತ್ತ ಎಷ್ಟೇ ಅದರೂ ಗರಿಷ್ಠ ಮೊತ್ತ 20 ಲಕ್ಷವನ್ನು ಮೀರ ಬಾರದು ಗ್ರಾಚುಯಿಟಿಯನ್ನು ತನ್ನ ಉದ್ಯೋಗಿಗೆ ಸಂಸ್ಥೆಯು ನೀಡುವ ಗಿಫ್ಟ್ ಎಂದು ಪರಿಗಣಿಸಲಾಗುತ್ತಿದ್ದು, ಇದನ್ನು ಉದ್ಯೋಗಿಯ ಯಾವುದೇ ಬಾಕಿಗೆ ಅಟ್ಯಾಚ್‌ ಮಾಡಲಾಗದು. ಆದರೆ ಉದ್ಯೋಗಿಯು ತನ್ನ ಕೃತ್ಯ ದಿಂದ ಅಥವಾ ಕರ್ತವ್ಯ ಎಸಗದೇ ಸಂಸ್ಥೆಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ, ಆ ಹಾನಿಯ ಮೊತ್ತವನ್ನು ಗ್ರಾಚುಯಿಟಿಯಿಂದ ಕಡಿತ ಮಾಡಬಹುದು. ಹಾಗೆಯೇ ಉದ್ಯೋ
ಗಿಯು ಯಾವುದಾದರೂ ನೀಚತನದ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಅಂಥ ಸಂದರ್ಭದಲ್ಲಿ ಗ್ರಾಚುಯಿಟಿಯನ್ನು ತಡೆಹಿಡಿಯಲೂಬಹುದು.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ತನ್ನ ತೀರ್ಪೊಂದರಲ್ಲಿ ಉದ್ಯೋಗಿ ಯಿಂದ ಬರಬೇಕಾದ ಬಾಕಿ ಮೊತ್ತಕ್ಕಾಗಿ ಆತನ ಗ್ರಾಚುಯಿಟಿಯನ್ನು ತಡೆಹಿಡಿಯಬಹುದೆಂದು ಹೇಳಿದೆ. ಉದ್ಯೋಗಿಯೊಬ್ಬ ಅವಧಿಗಿಂತ ಹೆಚ್ಚು ಕಾಲ ಸಂಸ್ಥೆಯ ಕ್ವಾಟ್ರಸ್‌ನಲ್ಲಿ ಉಳಿದಿದ್ದು, ಈ ಅವಧಿಗೆ ಸುಸ್ತಿ ಬಾಡಿಗೆ ನೀಡಲು ತಕರಾರು ತೆಗೆದಿದ್ದ. ಸಂಸ್ಥೆಯು ಆ ಮೊತ್ತವನ್ನು ಆತನ ಗ್ರಾಚು ಯಿಟಿಯಿಂದ ವಸೂಲು ಮಾಡಿತ್ತು. ಈ ಕ್ರಮವನ್ನು ಪ್ರಶ್ನಿಸಿ ಉದ್ಯೋಗಿ ನ್ಯಾಯಾಲಯದ ಮೊರೆ ಹೋಗಿದ್ದನು. ನ್ಯಾಯಾಲಯವು ಗ್ರಾಚುಯಿಟಿ ಸಹಿತ ಯಾವುದೇ ಬಾಕಿಯನ್ನು ಉದ್ಯೋಗಿಗೆ ನೀಡುವಾಗ ಅವನಿಂದ ಸಂಸ್ಥೆಗೆ ಬರಬೇಕಾದ ಬಾಕಿಗೆ ವಜಾ ಮಾಡಿಕೊಳ್ಳಬಹುದು ಎಂದು ತೀರ್ಪು ನೀಡಿದೆ.

ಟಾಪ್ ನ್ಯೂಸ್

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Rekha Jhunjhunwala lost Rs 800 crore in a single day!

Share Market; ರೇಖಾ ಜುಂಜುನ್‌ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

10-thekkatte

ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.