Bantwal: ಖಾಸಗಿ ಬಸ್ಸು-ಬೈಕ್ ಢಿಕ್ಕಿ; ಗಂಭೀರ ಸ್ಥಿತಿಯಲ್ಲಿದ್ದ ಸವಾರ ಮೃತ್ಯು
Team Udayavani, Jul 30, 2023, 8:22 PM IST
ಬಂಟ್ವಾಳ: ಖಾಸಗಿ ಬಸ್ ಡಿಕ್ಕಿಯಾಗಿ ಯುವಕನೋರ್ವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಸಂಜೆ ವೇಳೆ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ಕಲ್ಲಡ್ಕ ಗೋಳ್ತಮಜಲು ಮುರಬೈಲು ನಿವಾಸಿ ಲತೀಶ್ ( 28) ಮೃತಪಟ್ಟ ಯುವಕ .
ಮಂಗಳೂರಿನಲ್ಲಿ ಮ್ಯಾಕನಿಕ್ ಕೆಲಸ ಮಾಡುತ್ತಿದ್ದ ಈತ, ಇಂದು ರವಿವಾರ ರಜಾದಿನವಾದ ಕಾರಣ ಬೆಳಿಗ್ಗೆ ಪಣೋಲಿಬೈಲು ದೇವಸ್ಥಾನಕ್ಕೆ ಹೋಗಿ ವಾಪಸು ಮನೆಗೆ ಬರುವ ವೇಳೆ ಕಲ್ಲಡ್ಕ ದಲ್ಲಿ ಅಪಘಾತ ನಡೆದಿದೆ .
ಕಲ್ಲಡ್ಕದಿಂದ ವಿಟ್ಲ ರಸ್ತೆಯಲ್ಲಿ ಹೋಗುವ ವೇಳೆ ವಿಟ್ಲದಿಂದ ಅತೀ ವೇಗದಿಂದ ಬರುತ್ತಿದ್ದ ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಯಾಗಿದೆ.
ಡಿಕ್ಕಿಯ ರಭಸಕ್ಕೆ ಲತೀಶ್ ಗೆ ಗಂಭೀರವಾಗಿ ಗಾಯವಾಗಿತ್ತು.ಈತನನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
ಚಿಂತಾಜನಕ ಸ್ಥಿತಿಯಲ್ಲಿದ್ದ ಈತ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆದರೆ ಗಂಭೀರ ಸ್ಥಿತಿಯಲ್ಲಿದ್ದ ಲತೀಶ್ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಟ್ರಾಫಿಕ್ ಎಸ್. ಐ.ಸುತೇಶ್ ಸ್ಥಳಕ್ಕೆ ಬೇಟಿ ನೀಡಿದ್ದು,ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.