Udayavni Special

ಆಕಾಶದಲ್ಲಿ ಕೆಂಬಣ್ಣದ ಓಕುಳಿ: ಪ್ರಕೃತಿಯಲ್ಲೊಂದು ಅಪರೂಪದ ವಿಸ್ಮಯ


Team Udayavani, Oct 30, 2020, 2:02 PM IST

udupi

ಉಡುಪಿ:  ಕಳೆದ ಕೆಲವು ದಿನಗಳಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಇಡೀ ಆಕಾಶವೇ ಕೆಂಬಣ್ಣಕ್ಕೆ ತಿರುಗಿತ್ತು. ಈ ದೃಶ್ಯ ಅದೆಷ್ಟು ರಮ್ಯ ಮನೋಹರವಾಗಿತ್ತು ಎಂದರೇ, ನಮ್ಮ ಚಿತ್ತವನ್ನು ಆಕಾಶದಿಂದ ಕದಲಿಸಲೇಬಾರದೆಂಬುವಷ್ಟಿತ್ತು. ಇದೀಗ ಪಿಪಿಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಉಡುಪಿಯ ಡಾ. ಎ ಪಿ ಭಟ್  ಪ್ರಕೃತಿಯ ಈ  ಅದ್ಭುತ ಸೌಂದರ್ಯವನ್ನು ತಮ್ಮ  ಬರಹದಿಂದ ವರ್ಣಿಸಿದ್ದು, ಎಂತವರನ್ನೂ ಮಂತ್ರಮುಗ್ಧರನ್ನಾಗಿಸುಂತಿದೆ.

ಈಗ ಕೆಲ ದಿನಗಳಿಂದ ಸೂರ್ಯಾಸ್ತ ಹಾಗೂ ಸೂರ್ಯೋದಯ  ನೋಡಿದಿರಾ ?. ಅದೆಂತಹ ಕೆಂಬಣ್ಣ.  ಇಡೀ ವರ್ಷದಲ್ಲೇ ಇದೊಂದು ಚೆಂದದ ಸೂರ್ಯೋದಯ ಹಾಗೂ ಸೂರ್ಯಾಸ್ತ. ಸೂರ್ಯಾಸ್ತವಂತೂ ಕೆಂಪೋ ಕೆಂಪು. ನೋಡಲೇ ಬೇಕೆನ್ನುವಷ್ಟು ಬಣ್ಣ. ಸೂರ್ಯ ಕಣ್ಮರೆಯಾಗುವಾಗ ಇಡೀ ಆಕಾಶವೇ ಕೆಂಬಣ್ಣದ ಓಕುಳಿ.   ” ಕೆಂಪಾದವೋ ಎಲ್ಲಾ ಕೆಂಪಾದವೋ ” .

ಎಲ್ಲರನ್ನೂ  ಕೂಗಿ ಕರೆದು , ನೋಡಿ! ನೋಡಿ ! ಎನ್ನುವಷ್ಟು ಚೆಂದ. ಇದು ಆಶ್ವೀಜ ಕಳೆದ ಕಾರ್ತೀಕದ ಆಕಾಶದ ವಿಶೇಷ.  ಮಳೆಗಾಲ ಮುಗಿದು, ಹಾಗೆ ಚಳಿ ಪ್ರಾರಂಭದ ನಮ್ಮ  ಆಕಾಶದ ವಾತಾವರಣವೇ  ಈ  ಭವ್ಯತೆಗೆ ಕಾರಣ. ಹಾಗಾದರೆ ಈ ತಿಂಗಳು ಮಾತ್ರ ಇಷ್ಟು ಕೆಂಬಣ್ಣವೇ ?  ಎಂದು ಕೇಳಿದರೆ, ಹೌದು. ಮಳೆಗಾಲದಲ್ಲಿ ಈ ಚೆಂದ ಇರುವುದೇ ಇಲ್ಲ. ಬರೇ ಬಿಳಿ. ಹಾಗೆಯೆ ಫೆಬ್ರವರಿ, ಮಾರ್ಚ್, ಎಪ್ರಿಲ್, ಮೇ ತಿಂಗಳುಗಳಲ್ಲಿ ಇಷ್ಟು ಕೆಂಬಣ್ಣವಿರುವುದಿಲ್ಲ. ಹಳದಿ ಮಿಶ್ರಿತ ಸೌಮ್ಯ ಕೆಂಪು.  ಸೆಪ್ಟೆಂಬರ್ ಕಾಲದಲ್ಲಿ ಸೂರ್ಯಾಸ್ತ ಅರಿಶಿನ ಬಣ್ಣ.

ಇಷ್ಟು ಮಾತ್ರವಲ್ಲ, ಆಶ್ವೀಜ, ಕಾರ್ತೀಕದ ಈ ಹುಣ್ಣಿಮೆಗಳ  ಚಂದ್ರನಿಗೆ  ಭವ್ಯ ವರ್ತುಲವೇರ್ಪಡಬಹುದು. ಹಾಗೂ ಈ ಕಾಲದಲ್ಲೇ ಮಧ್ಯಾಹ್ನದ ಸೂರ್ಯನಿಗೆ ಭವ್ಯ ವರ್ತುಲಾಕಾರದ ಕಾಮನಬಿಲ್ಲಿನ ಕೊಡೆ ಕಾಣಬಹುದು.ಇದೆಲ್ಲದಕ್ಕೂ ನಮ್ಮ ಭೂಮಿಯ ವಾತಾವರಣವೇ ಕಾರಣ. ತೇವ ಮಿಶ್ರಿತ ವಾತಾವರಣದಲ್ಲಿ ಸೂರ್ಯನ ಬೆಳಕು ಚೆದುರಿ,  ಈ ಭವ್ಯತೆಯನ್ನು ಮಾಡುತ್ತದೆ. ಸರ್ ಸಿ ವಿ ರಾಮನ್ ರಿಗೆ ಇದೇ ಬಣ್ಣದೋಕುಳಿಯೇ ಹೊಸ ಹೊಸ  ಚಿಂತನೆಗೆ ಕಾರಣವಾಯಿತು. ಅವರ ನೋಬೆಲ್ ಪ್ರಶಸ್ತಿಗೂ ಮೂಲ ಕಾರಣವಾಯಿತು.

ಸಮುದ್ರತೀರದಲ್ಲಿ ಹಾಗೂ ಪಶ್ಚಿಮ ಘಟ್ಟದ ಎತ್ತರದ ಪ್ರದೇಶಗಳಲ್ಲಿ, ಈ ಕೆಲದಿನಗಳ ಪ್ರಶಾಂತ ಸಂಜೆ, ಆಕಾಶದ ಹೊಸ ಹೊಸ ಚಿತ್ತಾರಗಳಿಂದ, ಯಾರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.  ರಾತ್ರಿಯ ನೀಲಾಕಾಶದ ನಕ್ಷತ್ರಗಳೂ, ಈಗ ಬಲು ಚೆಂದ. ಈ ಎಲ್ಲಾ  ಸೊಬಗು ನಮಗೆ ಮಾತ್ರ. ನಮ್ಮ ಭೂಮಿಯವರಿಗೆ ಮಾತ್ರ. ಬೇರೆ ಯಾವಗ್ರಹಗಳಲ್ಲೂ ವಾತಾವರಣವಿಲ್ಲದೇ ಇರುವುದರಿಂದ,  ಈ ಬಣ್ಣದ ಚಿತ್ತಾರ ಇಲ್ಲವೇ ಇಲ್ಲ.   ಬೇಕೆಂದಾಗ ಸಿಗದ ಈ ಸೊಬಗನ್ನು ನೋಡಿ ಆನಂದಿಸಬೇಕು.

ಡಾ. ಪಿ ಭಟ್  ಉಡುಪಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Siddaramaiah

ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ: ಸಿದ್ದರಾಮಯ್ಯ

ಕಾನೂನುಬಾಹಿರ ಧಾರ್ಮಿಕ ಮತಾಂತರ ತಡೆ ಸುಗ್ರೀವಾಜ್ಞೆಗೆ ಉತ್ತರಪ್ರದೇಶ ಗವರ್ನರ್ ಅಂಕಿತ

ಕಾನೂನುಬಾಹಿರ ಧಾರ್ಮಿಕ ಮತಾಂತರ ತಡೆ ಸುಗ್ರೀವಾಜ್ಞೆಗೆ ಉತ್ತರಪ್ರದೇಶ ಗವರ್ನರ್ ಅಂಕಿತ

ಯಾರು ಪೇಮೆಂಟ್‌ ಕೊಡುತ್ತಾರೋ ಹಳ್ಳಿಹಕ್ಕಿಅಲ್ಲಿರುತ್ತದೆ:ವಿಶ್ವನಾಥ್ ಗೆ ಸಾ.ರಾ.ಮಹೇಶ್ ಕುಟುಕು

ಯಾರು ಪೇಮೆಂಟ್‌ ಕೊಡುತ್ತಾರೋ ಹಳ್ಳಿಹಕ್ಕಿಅಲ್ಲಿರುತ್ತದೆ:ವಿಶ್ವನಾಥ್ ಗೆ ಸಾ.ರಾ.ಮಹೇಶ್ ಕುಟುಕು

ಮಕ್ಕಳಲ್ಲಿ ಮಾನವೀಯತೆ ಬೆಳೆಸಿ; ಮನೆಯೇ ಮೊದಲ ಪಾಠಶಾಲೆಯಾಗಲಿ

ಮಕ್ಕಳಲ್ಲಿ ಮಾನವೀಯತೆ ಬೆಳೆಸಿ; ಮನೆಯೇ ಮೊದಲ ಪಾಠಶಾಲೆಯಾಗಲಿ

ಅಪೇಕ್ಷಿತರನ್ನು ಮಂತ್ರಿ ಮಾಡುವುದು ಮುಖ್ಯಮಂತ್ರಿಗಳ ಪರಾಮಾಧಿಕಾರ: ನಳಿನ್ ಕಟೀಲ್

ಅಪೇಕ್ಷಿತರನ್ನು ಮಂತ್ರಿ ಮಾಡುವುದು ಮುಖ್ಯಮಂತ್ರಿಗಳ ಪರಾಮಾಧಿಕಾರ: ನಳಿನ್ ಕಟೀಲ್

ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡಿಸುವ ರಮೇಶ್ ಜಾರಕಿಹೊಳಿ ಪ್ರಯತ್ನ ತಪ್ಪಲ್ಲ: ಈಶ್ವರಪ್ಪ

ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡಿಸುವ ರಮೇಶ್ ಜಾರಕಿಹೊಳಿ ಪ್ರಯತ್ನ ತಪ್ಪಲ್ಲ: ಈಶ್ವರಪ್ಪ

ಮಕ್ಕಳನ್ನು ಅವಮಾನಿಸಬೇಡಿ…ಮುಗ್ಧ ಮನಸ್ಸಿನ ಮೇಲೆ ಪರಿಣಾಮ

ಮಕ್ಕಳನ್ನು ಅವಮಾನಿಸಬೇಡಿ…ಮುಗ್ಧ ಮನಸ್ಸಿನ ಮೇಲೆ ಪರಿಣಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಲ್ಲವ-ಈಡಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಬೆಂಬಲ : ಡಿಸಿಎಂ ಡಾ| ಅಶ್ವಥ ನಾರಾಯಣ

ಬಿಲ್ಲವ-ಈಡಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಬೆಂಬಲ : ಡಿಸಿಎಂ ಡಾ| ಅಶ್ವಥ ನಾರಾಯಣ

ಸಾಮಾಜಿಕ ಅರಣ್ಯ ಪೋಷಣೆ ಮೂಲಕ ಸಮಾಜಕ್ಕೆ ಮಾದರಿ

ಸಾಮಾಜಿಕ ಅರಣ್ಯ ಪೋಷಣೆ ಮೂಲಕ ಸಮಾಜಕ್ಕೆ ಮಾದರಿ

lakshadeepa2

ಉಡುಪಿಯಲ್ಲಿ ಸಂಭ್ರಮದ ಲಕ್ಷದೀಪೋತ್ಸವ ಆರಂಭ

ಭೂಪರಿವರ್ತನೆ ಪ್ರಕ್ರಿಯೆ; ಆನ್‌ಲೈನ್‌ನಲ್ಲೂ ಮಧ್ಯವರ್ತಿಗಳದ್ದೇ ಆಟ

ಭೂಪರಿವರ್ತನೆ ಪ್ರಕ್ರಿಯೆ; ಆನ್‌ಲೈನ್‌ನಲ್ಲೂ ಮಧ್ಯವರ್ತಿಗಳದ್ದೇ ಆಟ

ಮಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

ಮಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

MUST WATCH

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

ಹೊಸ ಸೇರ್ಪಡೆ

mandya-tdy-1

ರೈತರ ಹಾಲಿನ ಖರೀದಿ ದರ ಇಳಿಕೆ

Siddaramaiah

ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ: ಸಿದ್ದರಾಮಯ್ಯ

mysuru-tdy-2

ಸ್ಪರ್ಧಾತ್ಮಕ ಪರೀಕ್ಷೆಗಳ ಆನ್‌ಲೈನ್‌ ಶಿಬಿರಕ್ಕೆ ಚಾಲನೆ

ವಿದೇಶದಲ್ಲಿರುವ ಕನ್ನಡಿಗರಿಂದ ಮಾತೃ ಭಾಷೆಯ ಶುದ್ಧೀಕರಣ: ಡಾ| ವೀರೇಂದ್ರ ಹೆಗ್ಗಡೆ

ವಿದೇಶದಲ್ಲಿರುವ ಕನ್ನಡಿಗರಿಂದ ಮಾತೃ ಭಾಷೆಯ ಶುದ್ಧೀಕರಣ: ಡಾ| ಡಿ. ವೀರೇಂದ್ರ ಹೆಗ್ಗಡೆ

ಸಿಂಧೂರಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌ ಶಾಸಕರು

ಸಿಂಧೂರಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌ ಶಾಸಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.