ನಾಸಿಕ್ನಿಂದ ಟೊಮೇಟೊ: ದರ ಕೊಂಚ ಇಳಿಕೆ
Team Udayavani, Nov 25, 2021, 5:08 AM IST
ಉಡುಪಿ: ಜಿಲ್ಲೆಯ ಮಾರುಕಟ್ಟೆಗಳಿಗೆ ಮಂಗಳವಾರ ಮಹಾರಾಷ್ಟ್ರದ ನಾಸಿಕ್ನಿಂದ ಟೊಮೇಟೊ ಪೂರೈಕೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಏರಿಕೆ ಕಂಡಿದ್ದ ಟೊಮೇಟೊ ದರ ಕೊಂಚ ಇಳಿಕೆಯಾಗಿದೆ.
ಮಂಗಳವಾರ ತಡರಾತ್ರಿ ಜಿಲ್ಲೆಗೆ ಆಗಮಿಸಿದ ಟೊಮೇಟೊ ಟ್ರಕ್ಗಳು ಉಡುಪಿ ಜಿಲ್ಲಾ ಮಾರುಕಟ್ಟೆ, ಕಾರ್ಕಳ, ಕುಂದಾಪುರ ಭಾಗದ ಮಾರುಕಟ್ಟೆಗೂ ಪೂರೈಕೆ ಮಾಡಲಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ನಗರದ ಮಾರುಕಟ್ಟೆಯಲ್ಲಿ 100-110 ರೂ., ಇದ್ದ ಟೊಮೇಟೊ ದರ 80-90 ರೂ.ಗಳಿಗೆ ಇಳಿಕೆಯಾಗಿದೆ. ಕೆಲವು ತರಕಾರಿ ಅಂಗಡಿಗಳಲ್ಲಿ ಸ್ಥಳೀಯ ಟೊಮೇಟೊ 110-120 ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯ ಟೊಮೇಟೊ ಪೂರೈಕೆಯಲ್ಲಿ ಕೊರತೆಯಾದರೆ ದರ ಹೆಚ್ಚಳವಾಗುತ್ತದೆ.
ಮಹಾರಾಷ್ಟ್ರ ನಾಸಿಕ್ನಿಂದ ಪೂರೈಕೆಯಾದಾಗ ಸ್ವಲ್ಪ ಮಟ್ಟಿಗೆ ದರ ಕಡಿಮೆಯಾಗುತ್ತದೆ ಎಂದು ನಗರದ ತರಕಾರಿ ವ್ಯಾಪಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಸೋಂಕು ಪರೀಕ್ಷೆ ಕಡಿಮೆಯಾಗಿದೆ; 13 ರಾಜ್ಯಗಳಿಗೆ ಕೇಂದ್ರದ ಮುನ್ನೆಚ್ಚರಿಕೆ
ತರಕಾರಿಯಲ್ಲಿ ಬೀನ್ಸ್ 80 ರೂ., ತೊಂಡೆಕಾಯಿ 100, ಸೌತೆಕಾಯಿ 50, ಅಳಸಂಡೆ 80, ಸೌತೆಕಾಯಿ 50-60, ಬೀಟ್ರೂಟ್ 50, ದೊಣ್ಣೆ ಮೆಣಸು 100, ಹೀರೆಕಾಯಿ 80, ಹೂಕೋಸು 60 ರೂ., ದರವಿದೆ.
ಕರಾವಳಿ ಜಿಲ್ಲೆಗಳಿಗೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ನ್ಯಾಮತಿ ಭಾಗದಿಂದ ಹೆಚ್ಚು ತರಕಾರಿ ಪೂರೈಕೆಯಾಗುತ್ತದೆ.
ಘಟ್ಟ ಭಾಗದಲ್ಲಿ ಅಕಾಲಿಕ ಮಳೆ ಪರಿಣಾಮ ತರಕಾರಿ ಕೃಷಿ ಬೆಳೆಗಳಿಗೆ ಹಾನಿಯಾಗಿ ಇಳುವರಿ ಕೊರತೆ ಸಂಭವಿಸಿರುವುದು ದರ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ