
ಕುಂದಾಪುರ: ರಂಗೋಲಿಯಲ್ಲಿ 76 ನಿಮಿಷಗಳಲ್ಲಿ 76 ರಾಷ್ಟ್ರಧ್ವಜ
ಡಾ| ಭಾರತಿ ಮರವಂತೆ ಅವರಿಂದ ವಿನೂತನ ದಾಖಲೆ
Team Udayavani, Sep 22, 2022, 12:30 PM IST

ಕುಂದಾಪುರ: ತಮಿಳುನಾಡಿನ ಜಾಕಿಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯವರು ಆಯೋಜಿಸಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ 76 ನಿಮಿಷಗಳಲ್ಲಿ ಭಾರತದ 76 ರಾಷ್ಟ್ರ ಧ್ವಜಗಳನ್ನು ರಂಗೋಲಿಯಲ್ಲಿ ಬಿಡಿಸುವ ಮೂಲಕ ರಂಗೋಲಿ ಕಲಾವಿದೆ ಡಾ| ಭಾರತಿ ಮರವಂತೆ ಅವರು ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಏಕ ವ್ಯಕ್ತಿಯಾಗಿ, ಅನನ್ಯ ಕೌಶಲದಿಂದ ಬೃಹತ್ ಗಾತ್ರದಲ್ಲಿ ಧ್ವಜದ ಪ್ರಮಾಣತೆಗೆ ಅನುಗುಣವಾಗಿ ರಂಗೋಲಿಯಲ್ಲಿ 76 ರಾಷ್ಟ್ರಧ್ವಜಗಳನ್ನು 76 ನಿಮಿಷಗಳ ಮೊದಲೇ ಬಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಕಲಾ ಪ್ರದರ್ಶನದಲ್ಲಿ ಜಾಗತಿಕ ಮಟ್ಟದ ವಿವಿಧ ರಾಷ್ಟ್ರಗಳ ಕಲಾವಿದರು ವಿವಿಧ ಕೌಶಲಗಳನ್ನು ಪ್ರದರ್ಶಿಸಿದರು.
ಡಾ| ಭಾರತಿ ಮರವಂತೆಯವರು “ಕರಾವಳಿ ಕರ್ನಾಟಕದ ರಂಗೋಲಿ ಕಲೆ’ ಎನ್ನುವ ಸಂಶೋಧನ ವಿಷಯಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 5 ಸಾವಿರಕ್ಕೂ ಮಿಕ್ಕಿ ಮಂದಿ ಮಹಿಳೆಯರು, ಮಕ್ಕಳಿಗೆ ರಂಗೋಲಿ ತರಬೇತಿ ನೀಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
