ವಂಡಾರು: ಪತಿಯಿಂದ ಪತ್ನಿ ಕೊಲೆ: ಪ್ರಕರಣ ದಾಖಲು
Team Udayavani, May 18, 2022, 10:09 PM IST
ಸಿದ್ದಾಪುರ: ವಂಡಾರು ಗ್ರಾಮದ ಕಟ್ಟೆಕೊಡ್ಲು ಸುರೇಂದ್ರ ನಾಯ್ಕ ತನ್ನ ಪತ್ನಿ ಅನಿತಾ ಅವರಿಗೆ ಹಲ್ಲೆ ಮಾಡಿ ಹತ್ಯೆ ಮಾಡಿದ ಘಟನೆ ಮೇ 17ರ ರಾತ್ರಿ ನಡೆದಿದೆ.
ಅನಿತಾ ಅವರ ಸಹೋದರಿ ಜಯಂತಿ ಅವರು ಪೊಲೀಸರಿಗೆ ದೂರು ನೀಡಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸುರೇಂದ್ರ ನಾಯ್ಕ ಹೊಸನಗರ ತಾಲೂಕು ಯಡೂರು ನಿವಾಸಿ ಅನಿತಾ ಅವರನ್ನು 15 ವರ್ಷಗಳ ಹಿಂದೆ ಮದುವೆಯಾಗಿದ್ದಾನೆ. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ.
ಆರೋಪಿಯು ಪ್ರತಿನಿತ್ಯ ಹೆಂಡತಿ ಮತ್ತು ಮಕ್ಕಳಿಗೆ ಹೊಡೆಯುತ್ತಿದ್ದನು. ಮೇ 17ರ ರಾತ್ರಿ ಕೂಡ ಹಲ್ಲೆ ಮಾಡಿದ್ದು ಪರಿಣಾಮ ಅನಿತಾ ಅವರು ಮೃತಪಟ್ಟಿದ್ದಾರೆ. ಮೃತಪಟ್ಟ ಅನಿತಾ ಅವರನ್ನು ಮನೆ ಬಳಿ ಕೊಟ್ಟಿಗೆಯ ಬಳಿ ಎಸೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ
ಘಟನ ಸ್ಥಳಕ್ಕೆ ಕುಂದಾಪುರ ವೃತ್ತ ನೀರೀಕ್ಷಕ ಗೋಪಿಕೃಷ್ಣ, ಶಂಕರನಾರಾಯಣ ಪಿಎಸ್‌ಐ ಶ್ರೀಧರ್ ನಾಯ್ಕ ಅವರು ಭೇಟಿ ನೀಡಿದ್ದಾರೆ. ಆರೋಪಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.