ವಿಶ್ವಕಪ್ ಗೆಲ್ಲಲು ರೆಟ್ರೋ ಲುಕ್ ಜೆರ್ಸಿಗೆ ಮೊರೆಹೋದ ಇಂಗ್ಲೆಂಡ್

ಭಾರತದ ಜೆರ್ಸಿಯನ್ನು ಹೋಲುತ್ತಿದೆ ಎಂದು ಜರೆದ ನೆಟ್ಟಿಗರು

Team Udayavani, May 22, 2019, 4:32 PM IST

ನವದೆಹಲಿ: ಏಕದಿನ ಕ್ರಿಕಟ್ ನ ಮಹಾಕೂಟ ವಿಶ್ವಕಪ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಕೂಟದ ಕ್ರೇಜ್ ಎಲ್ಲೆಡೆ ಹಬ್ಬಿದೆ. ಆತಿಥೇಯ ಇಂಗ್ಲೆಂಡ್ ಈ ವಿಶ್ವಕಪ್ ಗಾಗಿ ಆಟಗಾರರ ಜೆರ್ಸಿ ಬಿಡುಗಡೆ ಮಾಡಿದೆ. ಆಕಾಶ ನೀಲಿ ಬಣ್ಣದ ಈ ಹೊಸ ಜೆರ್ಸಿ 1992 ರ ವಿಶ್ವಕಪ್ ಜೆರ್ಸಿಯನ್ನು ಹೋಲುವಂತಿದೆ.

ಹೊಸ ಜೆರ್ಸಿ ತೊಟ್ಟ ಆಟಗಾರರ ಫೋಟೋಗಳನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದೆ. ಇದರೊಂದಿಗೆ ವಿಡಿಯೋ ಕೂಡಾ ಟ್ವೀಟ್ ಮಾಡಿದೆ.

ಈ ಹೊಸ ಧಿರಿಸು 1992ರ ವಿಶ್ವಕಪ್ ನಲ್ಲಿ ಆಂಗ್ಲರ ತಂಡ ಧರಿಸಿದ್ದ ಜೆರ್ಸಿಯನ್ನು ಹೋಲುವಂತಿದೆ. 1992ರಲ್ಲಿ ಆಂಗ್ಲರು ಕೊನೆಯ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದ್ದರು ಎಂದನ್ನು ಇಲ್ಲಿ ಸ್ಮರಿಸಬಹುದು.


ಇಂಗ್ಲೆಂಡ್ ಕ್ರಿಕೆಟ್ ಆಟಗಾರರ ಈ ಹೊಸ ಜೆರ್ಸಿ ಅವತಾರ ಕಂಡು ನೆಟ್ಟಿಗರು ಟ್ರೋಲ್ ಮಾಡಿದ್ದು, ‘ ಭೀಕರ’ವಾಗಿದೆ ಎಂದು ಜರೆದಿದ್ದಾರೆ. ಜಾನ್ ಸ್ನೋ ಎಂಬಾತ ಕಸದ ಬ್ಯಾಗ್ ನ ಫೋಟ್ ಹಾಕಿ ಇಂಗ್ಲೆಂಡ್ ಜೆರ್ಸಿ ಮತ್ತು ಇದು ಒಂದೇ ರೀತಿ ಇದೆ ಎಂದು ಟೀಕೆ ಮಾಡಿದ್ದಾನೆ.

‘ಇದು ಇಂಗ್ಲೆಂಡ್ ಸಮವಸ್ತ್ರ ಕ್ಕಿಂತ ಭಾರತ ತಂಡದ ಸಮವಸ್ತ್ರ ದಂತೆ ಕಾಣುತ್ತದೆ’, ‘ಭಾರತ ಮತ್ತು ಇಂಗ್ಲೆಂಡ್ ನೋಡುವವರಿಗೆ ನಿಜಕ್ಕೂ ಗೊಂದಲ ಉಂಟು ಮಾಡಲಿದೆ’, ಹೀಗೆ ಹಲವರು ಆಂಗ್ಲರ ಹೊಸ ಜೆರ್ಸಿ ಕುರಿತು ಟ್ವೀಟ್ ಮಾಡಿದ್ದಾರೆ.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ