ಕೋವಿಡ್‌-19 ಕಲಿಸಿದ ಪರಿಸರ ಪಾಠ


Team Udayavani, Apr 23, 2020, 8:00 PM IST

ಕೋವಿಡ್‌-19 ಕಲಿಸಿದ ಪರಿಸರ ಪಾಠ

ಒಂದೆಡೆ ಕೋವಿಡ್ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೂ ಮತ್ತೂಂದೆಡೆಯಿಂದ
ವಿಶ್ವದ ಹವಾಮಾನದ ಮೇಲೆ ಒಳ್ಳೆಯ ಪರಿಣಾಮವನ್ನೇ ಬೀರಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯದ
ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿರುವುದು ಕಂಡುಬಂದಿದೆ.

ಮಣಿಪಾಲ: ಕೋವಿಡ್‌ 19 ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಆವರಿಸಿದೆ. ಜನರ ಮೇಲೆ ದುಷ್ಪರಿಣಾಮ ಉಂಟು ಮಾಡಿರುವ ಕೋವಿಡ್ ವೈರಸ್‌ ವಿಶ್ವದ ಹವಾಮಾನದ ಮೇಲೆ ಒಳ್ಳೆಯ ಪರಿಣಾಮವನ್ನೇ ಬೀರಿದೆ. ಹಾಗೆಂದು ಇದು ಶಾಶ್ವತ ಪರಿಹಾರವಲ್ಲ.

ಜಗತ್ತಿನ ಶೇ. 80ರಷ್ಟು ರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಜಾರಿಗೊಳಿಸ ಲಾಗಿದೆ. ಈ ಮೂಲಕ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳಲು ಸರಕಾರಗಳು ಮುಂದಾಗಿವೆ. ವಾಹನ ಸಂಚಾರ, ಕಾರ್ಖಾನೆಗಳಿಗೆ ತಡೆ ನೀಡಿದ್ದು, ಇಂಧನ ಬಳಕೆ ಶೇ. 90ರಷ್ಟು ಕಡಿಮೆಯಾಗಿದೆ. ಪ್ರತಿದಿನ ವಾಹನಗಳಿಂದ ತುಂಬಿರುತ್ತಿದ್ದ, ಶಬ್ದ ಮಾಲಿನ್ಯ, ವಾಯು ಮಾಲಿನ್ಯದ ರಾಯಭಾರಿಗಳಾಗಿದ್ದ ದೇಶಗಳ ರಾಜಧಾನಿಗಳು ಸೇರಿದಂತೆ ಇತರ ನಗರಗಳಲ್ಲಿ ಮಾಲಿನ್ಯ ಕಡಿಮೆಯಾಗಿ ನೀಲಿ ಆಕಾಶ ಕಾಣಿಸುತ್ತಿದೆ. ಭಾರತದಲ್ಲಂತೂ ನೂರಾರು ಮೈಲು ದೂರದ ಹಿಮಾಲಯ ಪರ್ವತವೂ ಉತ್ತರ ಭಾರತದ ಜನರಿಗೆ ಗೋಚರಿಸುತ್ತಿದೆ. ಜಗತ್ತಿನ ಇತರ ರಾಷ್ಟ್ರಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನ ವಾಗಿಲ್ಲ. ಮುಂಜಾನೆ ಪಕ್ಷಿಗಳ ಕಲರವ ಕಿವಿ ತುಂಬುತ್ತಿದೆ. ಮೈಗೆ ಶುದ್ಧ ತಂಗಾಳಿ ಸ್ಪರ್ಶಿಸುತ್ತಿದೆ.

ಅತೀ ಹೆಚ್ಚು ವಾಯು ಮಾಲಿನ್ಯದಿಂದ ಬಳಲುತ್ತಿದ್ದ ದೇಶಗಳಲ್ಲಿ ಶೇ. 60ರಷ್ಟು ವಾಯುಮಾಲಿನ್ಯ ಕಡಿಮೆ ಯಾಗಿದೆ. ಇದು ಕೇವಲ 3 ತಿಂಗಳುಗಳ ಲಾಕ್‌ಡೌನ್‌ನಿಂದಾದ ಬದಲಾವಣೆ ಎಂದು ಐಕ್ಯೂಏರ್‌ ಸಂಸ್ಥೆಯು ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿದೆ. ಕೋವಿಡ್‌ -19 ಹಿನ್ನೆಲೆಯ ಲಾಕ್‌ಡೌನ್‌ ಅನುಸರಿಸಲಾದ ವಿಶ್ವದ 10 ಪ್ರಮುಖ ನಗರಗಳನ್ನು ಅಧ್ಯಯನ ಮಾಡಲಾಗಿದೆ.

ಅಧ್ಯಯನವು ಪಿಎಂ 2.5 ಎಂದು ಕರೆಯಲ್ಪಡುವ ಹಾನಿಕಾರಕ ಸೂಕ್ಷಕಣಗಳ ಮಟ್ಟ ಕಡಿಮೆಯಾಗಿದೆ ಎಂದಿದೆ. 2.5 ಮೈಕ್ರೊಮೀಟರ್‌ ವ್ಯಾಸಕ್ಕಿಂತ ಚಿಕ್ಕದಾದ ಮಾಲಿನ್ಯಕಾರಕ ಅಪಾಯಕಾರಿ. ಏಕೆಂದರೆ ಇವುಗಳು ಶ್ವಾಸಕೋಶಕ್ಕೆ ಪ್ರವೇಶಿಸಿ, ರಕ್ತದೊಂದಿಗೆ ಸೇರಿ ಇತರ ಅಂಗಾಂಗಳ ಮೇಲೂ ದುಷ್ಪರಿಣಾಮ ಬೀರುತ್ತವೆ.

ಅಧ್ಯಯನಕ್ಕೆ ಒಳಪಟ್ಟ ಹೊಸದಿಲ್ಲಿ, ಸಿಯೋಲ್‌, ವುಹಾನ್‌ ಮತ್ತು ಮುಂಬಯಿ ನಗರಗಳು ಸೇರಿದಂತೆ ಒಟ್ಟು 7 ನಗರಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಗಮ ನಾರ್ಹ ಸುಧಾರಣೆ ಕಂಡು ಬಂದಿದೆ. ಇದೇ ಮೊದಲ ಬಾರಿಗೆ ಪಿಎಂ 2.5 ಮಾಲಿನ್ಯದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಾಯು ಮಾಲಿನ್ಯ ಈಗಾಗಲೇ ಜಾಗತಿಕ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿದೆ. ಇದು ಪ್ರತಿವರ್ಷ 70 ಲಕ್ಷ ಜನರ ಸಾವಿಗೆ ಕಾರಣವಾಗುತ್ತಿದೆ.

ಮತ್ತೆ ಏರಿಕೆ?
ಲಾಕ್‌ಡೌನ್‌ ಬಳಿಕ ಜನ ಜೀವನ ಯಥಾಸ್ಥಿತಿಗೆ ಬಂದ ಮೇಲೆ ವಾಯುಮಾಲಿನ್ಯವು ಮತ್ತೆ ಏರಿಕೆಯಾಗುವ ಆತಂಕ ಎದುರಾಗಿದೆ. ಹೊಸದಿಲ್ಲಿಯಲ್ಲಿ ಶೇ. 60ರಷ್ಟು ಮಾಲಿನ್ಯ ಕಡಿಮೆಯಾಗಿದೆ. ವಾಣಿಜ್ಯ ನಗರಿ ಮುಂಬಯಿಯಲ್ಲೂ ಹಾಗೆಯೇ. ಜಗತ್ತಿನ ಅತೀ ಹೆಚ್ಚು ಮಾಲಿನ್ಯಕಾರಕ ರಾಷ್ಟ್ರಗಳ ಪೈಕಿ ಭಾರತವೂ ಒಂದು. ದಕ್ಷಿಣ ಕೊರಿಯಾದಲ್ಲಿ ಶೇ. 54, ವುಹಾನ್‌ನಲ್ಲಿ ಶೇ. 44, ಲಾಸ್‌ಏಂಜಲೀಸ್‌ನಲ್ಲಿ 18 ದಿನಗಳ ಅವಧಿಯಲ್ಲಿ ಶೇ. 31ರಷ್ಟು ಮಾಲಿನ್ಯ ಕಡಿಮೆಯಾಗಿದೆ. ಯುರೋಪ್‌, ಲಂಡನ್‌, ಮ್ಯಾಡ್ರೀಡ್‌, ರೋಮ್‌ಗಳಲ್ಲಿಯೂ ಇಳಿಕೆಯಾಗಿದೆ.

ಇದೇ ಪರಿಹಾರವಲ್ಲ
ಇದ್ದಕ್ಕಿದ್ದಂತೆ ಎಲ್ಲ ಕಾರ್ಖಾನೆಗಳನ್ನು ಬಂದ್‌ ಮಾಡಿ, ರಸ್ತೆಯಲ್ಲಿ ವಾಹನ ಸಂಚಾರವನ್ನು ತಗ್ಗಿಸುವುದು ಶಾಶ್ವತ ಪರಿಹಾರವಲ್ಲ. ಇದು ಹವಾಮಾನ ಬದಲಾವಣೆ ಯನ್ನು ನಿಭಾಯಿಸುವ ಸುಸ್ಥಿರ ವಿಧಾನವಲ್ಲ. ಇಂದು ಜಗತ್ತು ಹೇಗೆ ಕೋವಿಡ್‌-19ರ ವಿರುದ್ಧ ಒಟ್ಟಾಗಿ ಹೋರಾಡುತ್ತಿದೆಯೋ ಹಾಗೆಯೇ ಹವಾಮಾನ ಬಿಕ್ಕಟ್ಟು ಬಗೆಹರಿಸಲೂ ಪ್ರಯತ್ನಿಸಬೇಕು. ಪರಿಸರವನ್ನು ಕಾಪಾಡಲು ಒಟ್ಟಾಗಿ ಪರಿಶ್ರಮಿಸಬೇಕು. ಕೋವಿಡ್‌-19 ಸೋಂಕು ಮನುಷ್ಯ ಪ್ರಕೃತಿಯ ಜತೆ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದೆ.

ಟಾಪ್ ನ್ಯೂಸ್

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

British Prime Minister Sunak thought to change the student visa policy!

U.K; ವಿದ್ಯಾರ್ಥಿ ವೀಸಾ ನೀತಿ ಬದಲಿಸಲು ಬ್ರಿಟನ್‌ ಪ್ರಧಾನಿ ಸುನಕ್‌ ಚಿಂತನೆ!

3 students of Indian origin passed away in Georgia

Georgia ಕಾರು ಅಪಘಾತ: ಭಾರತ ಮೂಲದ 3 ವಿದ್ಯಾರ್ಥಿಗಳ ಸಾವು

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.