Udayavni Special

ಪುತ್ರ ಪ್ರೇಮ, ಸ್ವಪಕ್ಷೀಯರ ಸಿಟ್ಟಿಗೆ ಪ್ರಮುಖರ ಸೋಲು


Team Udayavani, May 24, 2019, 6:00 AM IST

q-42

ಬೆಂಗಳೂರು: ರಾಜ್ಯದಲ್ಲಿ ಅತಿ ಕಡಿಮೆ ಅಂದರೆ ಕೇವಲ ಒಂದು ಸ್ಥಾನ ಗೆದ್ದು, “ಸೋಲಿಲ್ಲದ ಸರದಾರರು’ ಎಂದೇ ಬಿಂಬಿತರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ ಹಾಗೂ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಸೋಲು ಕಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ 9 ಬಾರಿ ಶಾಸಕರಾಗಿ ಎರಡು ಬಾರಿ ಸಂಸದರಾಗಿ ಕಲಬುರಗಿ ಅಷ್ಟೇ ಅಲ್ಲದೇ ವಿಶೇಷವಾಗಿ ಹೈದರಾಬಾದ್‌ ಕರ್ನಾಟಕ ಭಾಗದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರು. ರಾಜಕೀಯ ಕಾರಣಕ್ಕಾಗಿ ಅವರನ್ನು ವಿರೋಧಿಸುವವರೂ ಅಭಿವೃದ್ಧಿ ವಿಷಯದಲ್ಲಿ ಅವರ ಶ್ರಮಕ್ಕೆ ವಿರೋಧಿಸುವವರ ಸಂಖ್ಯೆ ಕಡಿಮೆ. ಆದರೂ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್‌ ಜಾಧವ್‌ ವಿರುದ್ಧ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿರು ವುದು ಅಚ್ಚರಿಯಾದರೂ, ಅದಕ್ಕೆ ಅವರದೇ ಆದ ಕೆಲವು ನಿರ್ಧಾರಗಳೂ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಷ್ಟ್ರ ರಾಜಕಾರಣದ ಅರಿವಿಲ್ಲದಿದ್ದರೂ, ಬೇರೆ ಪಕ್ಷಕ್ಕೆ ತೆರಳಿ ಖರ್ಗೆ ವಿರುದ್ಧ ಸ್ಪರ್ಧೆ ಮಾಡಿದ್ದ ಡಾ.ಉಮೇಶ್‌ ಜಾಧವ್‌ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರ ತಳಮಟ್ಟದ ಶ್ರಮ ಎಷ್ಟು ಕಾರ ಣವೋ ಖರ್ಗೆಯವರ ರಾಜಕೀಯ ನಿರ್ಧಾರಗಳೂ ಅಷ್ಟೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ತಾವು ರಾಜಕೀಯ ಉತ್ತುಂಗದ ಸ್ಥಿತಿಯಲ್ಲಿರುವಾಗಲೇ ಮಗ ಪ್ರಿಯಾಂಕ್‌ ಖರ್ಗೆಯನ್ನು ಮುನ್ನೆಲೆಗೆ ತರಲು ಜಿಲ್ಲೆಯ ಇತರ ನಾಯಕರನ್ನು ಕಡೆಗಣಿಸಿ ದರು ಎನ್ನುವ ಆರೋಪ ಕ್ಷೇತ್ರದಲ್ಲಿ ಅವರ ವಿರುದ್ಧದ ಪಡೆ ಬಲಗೊಳ್ಳಲು ಕಾರಣವಾಯಿತು. ಪ್ರಿಯಾಂಕ್‌ ಖರ್ಗೆಗಿಂತಲೂ ಹಿರಿಯರಾಗಿದ್ದ ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದ ಉಮೇಶ್‌ ಜಾಧವ್‌ ಅವರನ್ನು ಮೈತ್ರಿ ಸರ್ಕಾರದಲ್ಲಿ ಸಚಿವರ ನ್ನಾಗಿ ಮಾಡುವ ಬದಲು ಎರಡನೇ ಬಾರಿಯೂ ತಮ್ಮ ಪುತ್ರನನ್ನೇ ಸಚಿವನನ್ನಾಗಿ ಮಾಡಿದ್ದು, ಡಾ.ಉಮೇಶ್‌ ಜಾಧವ್‌ ಕೂಡ ಖರ್ಗೆ ವಿರೋಧಿ ಪಡೆ ಸೇರುವಂತಾಯಿತು.

ಉಮೇಶ್‌ ಜಾಧವ್‌ ಅವರ ಮುನಿಸನ್ನು ಗಂಭೀರವಾಗಿ ಪರಿಗಣಿಸಿ ಪಕ್ಷಕ್ಕೆ ಸೆಳೆಯುವಲ್ಲಿ ಯಶ ಸ್ವಿಯಾದ ಬಿಜೆಪಿ ನಾಯಕರು ಪುತ್ರ ವ್ಯಾಮೋಹದಿಂದ ಜಿಲ್ಲೆಯ ಯಾವ ನಾಯಕರನ್ನು ಕಡೆಗಣಿಸಿದ್ದರೋ ಅದೇ ನಾಯಕರನ್ನು ಮುಂದಿಟ್ಟು ಕೊಂಡು ಜಾತಿ ಲೆಕ್ಕಾಚಾರದಲ್ಲಿ ವ್ಯೂಹ ರಚನೆ ಮಾಡಿದರು. ಹಿರಿಯ ನಾಯಕರಾದ ಮಾಲಿಕಯ್ಯ ಗುತ್ತೆದಾರ್‌, ಡಾ. ಎ.ಬಿ. ಮಾಲಕರೆಡ್ಡಿ, ಬಾಬುರಾವ್‌ ಚಿಂಚನಸೂರು ಹಾಗೂ ಡಾ. ಉಮೇಶ್‌ ಜಾಧವ್‌ ಅವರನ್ನು ಒಗ್ಗೂಡಿಸಿ ಖರ್ಗೆ ಪುತ್ರ ವ್ಯಾಮೋಹದ ವಿರುದ್ಧವೇ ರಣತಂತ್ರ ರೂಪಿಸಿದರು.

2013 ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಪ್ರಿಯಾಂಕ್‌ ಖರ್ಗೆ ಜಯಗಳಿಸಿದ ನಂತರ ಮಗನ ರಾಜಕೀಯ ಏಳಿಗೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಇತರ ನಾಯಕ ರನ್ನು ಕಡೆಗಣಿಸುತ್ತ ಬಂದಿದ್ದು ಕ್ಷೇತ್ರದಲ್ಲಿ ವಿರೋಧಿ ಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿತು. ಸ್ವತಃ ತಮ್ಮ ಆಪ್ತ ಸ್ನೇಹಿತನಾಗಿದ್ದ ಧರ್ಮಸಿಂಗ್‌ ಅವರ ಪುತ್ರ ಅಜಯ್‌ ಸಿಂಗ್‌ಗೆ ಮಂತ್ರಿ ಸ್ಥಾನ ಕೊಡಿಸುವ ಬದಲು ತಮ್ಮ ಪುತ್ರನಿಗೆ ಅಧಿಕಾರ ಕೊಡಿಸಿದ್ದೂ ಸಾರ್ವಜ ನಿಕವಾಗಿ ಆಕ್ಷೇಪಗಳು ಕೇಳಿ ಬರುವಂತಾಯಿತು.

ಪ್ರಿಯಾಂಕ್‌ ವರ್ತನೆ: ಕೇವಲ ಎರಡು ಬಾರಿ ಶಾಸಕರಾಗಿ ಎರಡೂ ಬಾರಿಯೂ ಸಚಿವರಾಗಿದ್ದ ರಿಂದ ಪ್ರಿಯಾಂಕ್‌ ಖರ್ಗೆ ಅವರ ನಡವಳಿಕೆಯೂ ಜಿಲ್ಲೆಯಲ್ಲಿ ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾ ಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಅತಿ ಯಾದ ದಲಿತ ಪ್ರೇಮ, ಮೇಲ್ವರ್ಗದವರ ಮೇಲಿನ ತಿರಸ್ಕಾರ ಭಾವನೆ ಕಾಂಗ್ರೆಸ್‌ನ ಮೇಲ್ವ ರ್ಗದ ಹಿರಿಯ ನಾಯಕರ ಬೇಸರಕ್ಕೂ ಕಾರಣವಾ ಯಿತು ಅಲ್ಲದೇ ಯುವ ಸಮುದಾಯದ ತಿರಸ್ಕಾ ರಕ್ಕೂ ಕಾರಣವಾ ಯಿತು ಎಂಬ ಮಾತುಗಳು ಕೇಳಿ ಬಂದವು. ಅಲ್ಲದೇ ಆಂತರಿಕ ಸತ್ಯ ಅರಿತಿದ್ದ ಕಾಂಗ್ರೆಸ್‌ ಕೆಲವು ನಾಯ ಕರು ಖರ್ಗೆಯವರಿಗೆ ಕ್ಷೇತ್ರ ಬದಲಾವಣೆಗೂ ಸಲಹೆ ನೀಡಿದ್ದರು. ಆದರೂ, ಅವರು ಆಪ್ತರ ಸಲಹೆ ಪುತ್ರ ವ್ಯಾಮೋಹದ ವಿರುದ್ಧ ಒಗ್ಗೂಡಿದ ವೈರಿ ಪಡೆಯನ್ನು ಗಂಭೀರವಾಗಿ ಪರಿಗಣಿಸದೇ ಚುನಾ ವಣೆ ಎದುರಿಸಿದ್ದೇ ಅವರಿಗೆ ಮುಳುವಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ.

ಆಂತರಿಕ ಮುನಿಸು ಮುನಿಯಪ್ಪಗೆ ಮುಳುವು
ಸತತ ಆರು ಬಾರಿ ಗೆದ್ದು ದಾಖಲೆ ಬರೆದಿದ್ದ ಕೆ.ಎಚ್‌. ಮುನಿಯಪ್ಪ ಕೋಲಾರ ಕ್ಷೇತ್ರದಲ್ಲಿ ಪರಿಚಯವೇ ಇಲ್ಲದ ಎಸ್‌.ಮುನಿ ಸ್ವಾಮಿ ವಿರುದ್ಧ ಸೋಲಲು ಸ್ವಪಕ್ಷೀ ಯರ ಒಳ ಹೊಡೆತವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಧಾನ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಸೇರಿದಂತೆ ಐವರು ಶಾಸಕರ ವಿರೋಧ ಇದ್ದರೂ, ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದ ಕೆ.ಎಚ್‌.ಮುನಿಯ ಪ್ಪಗೆ ಈ ಬಾರಿ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿ ಕೊಂಡಿರುವುದೇ ಮುಳುವಾದಂತೆ ಕಾಣಿ ಸುತ್ತಿದೆ. ಜಿಲ್ಲೆಯಲ್ಲಿ ಜೆಡಿಎಸ್‌ ಜೊತೆಗೇ ನೇರ ಹೋರಾಟ ನಡೆಸಿದ್ದ ಕಾಂಗ್ರೆಸ್‌, ಈ ಬಾರಿ ಮೈತ್ರಿಯಿಂದ ಎರಡೂ ಪಕ್ಷಗಳ ನಾಯಕರ ಆಂತರಿಕ ಮುನಿಸು ಮುನಿ ಯಪ್ಪ ಸೋಲಿಗೆ ಕಾರಣವಾಯಿತು ಎಂಬ ಮಾತುಗಳು ಕೇಳಿ ಬರುತ್ತಿದೆ.

ಮೊಯ್ಲಿ ಸೋಲಿಗೆ ಮೈತ್ರಿ ಕಾರಣ
ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಕೂಡ ಎತ್ತಿನಹೊಳೆ ಯೋಜನೆ ಜಾರಿಗೊಳಿಸುವ ಭರವಸೆ ನೀಡಿ, ಜೆಡಿಎಸ್‌ ನಾಯಕರ ಪರೋಕ್ಷ ಬೆಂಬಲದಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದರು. ಆದರೆ, ಈ ಬಾರಿ ಜೆಡಿಎಸ್‌ ಜೊತೆಗಿನ ಮೈತ್ರಿಯೇ ಅವ ರಿಗೂ ಮುಳುವಾಗಿದ್ದು, ಜೆಡಿಎಸ್‌ ಸ್ಪರ್ಧೆ ಇಲ್ಲದಿರುವುದರಿಂದ ಒಕ್ಕಲಿಗ ಸಮು ದಾಯ ಸಂಪೂರ್ಣ ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೆಗೌಡರ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಶಂಕರ ಪಾಗೋಜಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಉಡುಪಿ.ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಉಡುಪಿ.ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಹಾಕಿ ಲೆಜೆಂಡ್, ತ್ರಿವಳಿ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ನಿಧನ

ಹಾಕಿ ಲೆಜೆಂಡ್, ತ್ರಿವಳಿ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ನಿಧನ

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ನಿರಾಳವಾಗಿದ್ದ ರಾಮನಗರದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆ?

ನಿರಾಳವಾಗಿದ್ದ ರಾಮನಗರದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ಸಂಡೇ ಕರ್ಫ್ಯೂ ಬಹುತೇಕ ಸಕ್ಸಸ್‌

ಸಂಡೇ ಕರ್ಫ್ಯೂ ಬಹುತೇಕ ಸಕ್ಸಸ್‌ ; ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಸ್ತಬ್ಧ

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಉತ್ತರಕ್ಕೆ ಬಿಸಿ ಗಾಳಿ ಎಚ್ಚರಿಕೆ; ಮೂರು ದಿನಗಳ ಕಾಲ ಇದೇ ಪರಿಸ್ಥಿತಿ: ಐಎಂಡಿ

ಉತ್ತರಕ್ಕೆ ಬಿಸಿ ಗಾಳಿ ಎಚ್ಚರಿಕೆ; ಮೂರು ದಿನಗಳ ಕಾಲ ಇದೇ ಪರಿಸ್ಥಿತಿ: ಐಎಂಡಿ

ಜೂನ್‌ನಲ್ಲಿ ಡಿಪ್ಲೊಮಾ ಪರೀಕ್ಷೆಗೆ ಸಿದ್ಧತೆ

ಜೂನ್‌ನಲ್ಲಿ ಡಿಪ್ಲೊಮಾ ಪರೀಕ್ಷೆಗೆ ಸಿದ್ಧತೆ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

25-May-1

ಸಂಡೇ ಲಾಕ್‌ಡೌನ್‌ಗೆ ಕಲಬುರಗಿ ಸ್ತಬ್ಧ

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಕೋವಿಡ್ : 2465 ಜನರ ಮೇಲೆ ತೀವ್ರ ನಿಗಾ

ಕೋವಿಡ್ : 2465 ಜನರ ಮೇಲೆ ತೀವ್ರ ನಿಗಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.