ಕೇಳುವ ಕಿವಿ ಇರಲು ನೋಡುವ ಕಣ್ಣಿರಲು ಎಲ್ಲೆಲ್ಲು ಸಂಗೀತವೇ…

ಇಂದು ವಿಶ್ವ ಸಂಗೀತ ದಿನ

Team Udayavani, Jun 21, 2021, 6:30 AM IST

ಕೇಳುವ ಕಿವಿ ಇರಲು ನೋಡುವ ಕಣ್ಣಿರಲು ಎಲ್ಲೆಲ್ಲು ಸಂಗೀತವೇ…

ಸಂಗೀತವೆಂದರೆ ಒಂದು ಅದ್ಭುತ. ಅದಕ್ಕೆ ವಯೋಮಾನದ ಭೇದಭಾವವಿಲ್ಲ. ಅದನ್ನು ಎಲ್ಲರೂ ಕೇಳಬಹುದು, ಆನಂದಿಸಬಹುದು. ರಾಗ ತಾಳದ ಸಂಯೋಜನೆಯ ಜತೆಗೆ ಮನಸ್ಸಿನ ಆಲಾಪ ಮೊಳಗುವಾಗ ಎಲ್ಲೆಲ್ಲೂ ಸಂಗೀತವೇ ಕೇಳಿಸುತ್ತದೆ. ಯೋಗ ಮತ್ತು ಸಂಗೀತವೆರಡು ಒಳ್ಳೆಯ ಸ್ನೇಹಿತರೂ ಕೂಡ. ಯೋಗ ಆರೋಗ್ಯ ಕಾಪಾಡಿದರೆ, ಸಂಗೀತ ಚೈತನ್ಯ ತುಂಬುತ್ತದೆ. ನೇರವಾಗಿ ಹೇಳುವುದಾದರೆ ಇವೆರಡಕ್ಕೂ ಅವಿನಾಭಾವ ಸಂಬಂಧ. ಈ ಕಾರಣದಿಂದಲೋ ಏನೋ ಅಂತಾರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನಗಳೆರಡೂ ಜೂ. 21ರಂದೇ ಆಚರಿಸಲ್ಪಡುತ್ತಿರುವುದು.

ನಮ್ಮಲ್ಲಿ ಹೊಸತನ ಮೂಡಿಸಲು, ನೋವಿನಲ್ಲೂ ಖುಷಿ ನೀಡಲು ಸಂಗೀತ ಒಂದು ಮಂತ್ರದಂಡವಿದ್ದಂತೆ. ಸಂಗೀತಕ್ಕೆ ಪೊಡವಿಗೊಡೆಯ ಶ್ರೀಕೃಷ್ಣನೇ ಮನಸೋತಿರುವಾಗ ಸಂಗೀತ ಕ್ಕಿರುವ ಶಕ್ತಿ, ಸೆಳೆತದ ಅಗಾಧತೆ ನಮ್ಮ ಅರಿವಿಗೆ ಬರಲು ತುಸು ಕಷ್ಟಸಾಧ್ಯವೇ. ಹೀಗಾಗಿಯೇ ಏನೋ ಸಂಗೀತ ದೇವರ ಭಾಷೆ ಎನ್ನುವುದು. ಸಂಗೀತಕ್ಕೆ ಸ್ಪಷ್ಟವಾದ ವ್ಯಾಖ್ಯಾನಗಳಿಲ್ಲ. ಅವು ಮನಸ್ಸಿನಿಂದ ಮನಸ್ಸಿಗೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರಬಹುದು. ಏಕೆಂದರೆ ಜಾನಪದದಿಂದ ಹಿಡಿದು ಇಂದಿನ ಪಾಶ್ಚಾತ್ಯ ಸಂಗೀತದವರೆಗೆ ಎಲ್ಲವೂ ಒಂದೇ, ಆದರೆ ಬೇರೆ ಬೇರೆ ಸಂಸ್ಕೃತಿಗಳಲ್ಲಿ ತನ್ನದೇ ಆದ ರೂಪವನ್ನು ಪಡೆಯುತ್ತವೆ. ರೂಪ ಯಾವುದಾದರೂ ಏನು? ಎಲ್ಲ ಸಂಗೀತವೂ ಸ್ಪುರಿಸುವ ಭಾವನೆ ಒಂದೇ. ಆದರೆ ಇದು ಸಂಗೀತವನ್ನು ಆಸ್ವಾದಿಸುವವರನ್ನು ಅವಲಂಬಿಸಿರುತ್ತದೆ ಅಷ್ಟೆ.

ವಿಶ್ವ ಸಂಗೀತ ದಿನದ ಹಿನ್ನೆಲೆ: ವಿಶ್ವ ಸಂಗೀತ ದಿನಾಚರಣೆಗೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದೆ. 1982 ಜೂನ್‌ 21ರಂದು ಪ್ಯಾರಿಸ್‌ನಲ್ಲಿ ಮೊದಲ ಬಾರಿಗೆ ಸಂಗೀತ ದಿನವನ್ನು ಆಚರಿಸಲಾಯಿತು. ಜ್ಯಾಕ್‌ ಲ್ಯಾಂಗ್‌ ಮತ್ತು ಮಾರಿಸ್‌ ಪ್ಲ್ಯುರೆಟ್‌ ಅವರ ಸಹಕಾರದೊಂದಿಗೆ ಫ್ರೆಂಚ್‌ ಸಂಸ್ಕೃತಿ ಇಲಾಖೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದರಂತೆ ಮೊದಲ ಬಾರಿಗೆ ಅಮೆರಿಕನ್‌ ಸಂಗೀತಗಾರ ಜೋಯೆಲ್‌ ಕೊಹೆನ್‌ ಇಡೀ ರಾತ್ರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅದಾದ ಬಳಿಕ ವಿಶ್ವಾದ್ಯಂತ ಪ್ರತೀ ವರ್ಷ ಜೂ. 21ರಂದು ವಿಶ್ವ ಸಂಗೀತ ದಿನವನ್ನು ಆಚರಿಸುತ್ತ ಬರಲಾಗಿದೆ. ಸದ್ಯ ವಿಶ್ವದ 120 ದೇಶಗಳಲ್ಲಿ ಈ ಆಚರಣೆ ಚಾಲ್ತಿಯಲ್ಲಿದೆ. ಎಲ್ಲ ಸಂಗೀತ ಕಲಾವಿದರಿಗೆ, ಸಂಗೀತ ಪ್ರೇಮಿಗಳಿಗೆ ಗೌರವ ಸಲ್ಲಿಸುವುದೇ ಈ ದಿನಾಚರಣೆಯ ಉದ್ದೇಶ.

ಮಾನಸಿಕ ಖನ್ನತೆ ದೂರ: ಮಾನವ ಸ್ವಭಾವಗಳ ಮೇಲೆ ಸಂಗೀತ ಪ್ರಭಾವ ಬೀರುತ್ತದೆ ಎಂಬುದು ಹಲವು ಸಂಶೋಧನೆಗಳಿಂದ ದೃಢಪಟ್ಟಿದೆ. ಅನೇಕ ರೋಗಗಳನ್ನು ಸಂಗೀತದಿಂದ ಗುಣಪಡಿಸಬಹುದು ಎಂಬುದು ತಜ್ಞರ ಅಭಿಪ್ರಾಯ ಕೂಡ. ಅಲ್ಲದೆ ಸಂಗೀತದಿಂದ ಮಾನಸಿಕ ಖನ್ನತೆಗೆ ಒಳಗಾದವರು ತಮ್ಮ ಮಾನಸಿಕ ಸ್ಥಿತಿ ಸುಧಾರಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಸಂಗೀತಕ್ಕೆ ಪ್ರಾಣಿಗಳೂ ಕಿವಿಗೊಡುತ್ತವೆ ಮಾತ್ರವಲ್ಲದೆ ಅವುಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ. ಇವೆಲ್ಲವೂ ಸಂಗೀತದ ಮಾಂತ್ರಿಕ ಶಕ್ತಿಯ ಕೆಲವು ಉದಾಹರಣೆಗಳಷ್ಟೆ.

ಇತ್ತೀಚೆಗಂತೂ ಸಂಗೀತದಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ನಾವು ಕಾಣುತ್ತಿದ್ದು ಹೊಸತನದ ತುಡಿತ ಗಳಿಗೆ ಸಾಕ್ಷಿಯಾಗಿದೆ. ವಿಭಿನ್ನ ಮನೋಭಾವದವರನ್ನೂ ತನ್ನತ್ತ ಸೆಳೆಯುವಲ್ಲಿ ಸಂಗೀತ ಸಫ‌ಲವಾಗಿದೆ. ಸಂಗೀತ ಕೂಡ ಕಾಲಚಕ್ರ ಉರುಳಿದಂತೆ ಬದಲಾವಣೆಗಳಿಗೆ ಹೊಂದಿಕೊಂಡು ಸಾಗಿದೆ. ಈ ಕಾರಣದಿಂದಾಗಿಯೇ ಸಂಗೀತ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರೆ ಅತಿಶಯೋಕ್ತಿಯೇನಲ್ಲ.

– ಪ್ರೀತಿ ಭಟ್‌, ಗುಣವಂತೆ

ಟಾಪ್ ನ್ಯೂಸ್

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ  2 ವರ್ಷ:ಆರೋಪಿಯ ವಿಚಾರಣೆ ಬಹುತೇಕ ಪೂರ್ಣ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ 2 ವರ್ಷ !

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

2024ರಲ್ಲೂ ಕಮಲಾ ನನ್ನ ಪ್ರತಿಸ್ಪರ್ಧಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

2024ರಲ್ಲೂ ಕಮಲಾ ನನ್ನ ಪ್ರತಿಸ್ಪರ್ಧಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಜಾತಂತ್ರದ ಪಂಚಾಂಗದಲ್ಲಡಗಿದೆ ದೇಶದ ಭವಿಷ್ಯ

ಪ್ರಜಾತಂತ್ರದ ಪಂಚಾಂಗದಲ್ಲಡಗಿದೆ ದೇಶದ ಭವಿಷ್ಯ

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ವಿಮಾನ ಸೇವೆ ಸ್ಥಗಿತಗೊಳಿಸಿದ “5ಜಿ’

5ಜಿ ತರಂಗಗಳ ಎಫೆಕ್ಟ್: ಅಮೆರಿಕದಲ್ಲಿ ನೂರಾರು ವಿಮಾನಗಳ ಸಂಚಾರ ರದ್ದು

ಜ್ವರವಾಗಿ ಬದಲಾಗುತ್ತಿದೆಯೇ ಕೋವಿಡ್‌?

ಜ್ವರವಾಗಿ ಬದಲಾಗುತ್ತಿದೆಯೇ ಕೋವಿಡ್‌?

thumb 5

ಹಸಿದವನಿಗೆ ಮಾತ್ರ ಗೊತ್ತು ಅಗುಳಿನ ಮಹತ್ವ

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ  2 ವರ್ಷ:ಆರೋಪಿಯ ವಿಚಾರಣೆ ಬಹುತೇಕ ಪೂರ್ಣ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ 2 ವರ್ಷ !

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

2024ರಲ್ಲೂ ಕಮಲಾ ನನ್ನ ಪ್ರತಿಸ್ಪರ್ಧಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

2024ರಲ್ಲೂ ಕಮಲಾ ನನ್ನ ಪ್ರತಿಸ್ಪರ್ಧಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.