CONNECT WITH US  

ಥೈಲ್ಯಾಂಡ್‌ನ‌ಲ್ಲಿ ಬೀದಿ ನಾಯಿಗಳೇ ಪೊಲೀಸರು

ಬೀದಿ ನಾಯಿಗಳೆಂದರೆ ಎಲ್ಲರಿಗೂ ತಾತ್ಸಾರ. ಬೀದಿ ನಾಯಿಗಳ ಬಗ್ಗೆ ಜನರಲ್ಲಿರುವ ಈ ಪೂರ್ವಾಗ್ರಹಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಬ್ಯಾಂಕಾಕ್‌ನಲ್ಲಿ ಹೊಸ ಸಂಸ್ಥೆಯೊಂದು ಆರಂಭವಾಗಿದೆ. ಇದರ ಹೆಸರು ದ ಸೋಯ್‌ ಫೌಂಡೇಶನ್‌. ಈ ಸಂಸ್ಥೆ ನಾಯಿಗಳನ್ನು ಪೊಲೀಸರಂತೆ ಬಳಸಿಕೊಳ್ಳಲು ಮುಂದಾಗಿದೆ. ಈ ಮೂಲಕ ಅವುಗಳಿಂದ ಸಮಾಜಕ್ಕೆ ಆಗುವ ಅನುಕೂಲಗಳನ್ನು ಬಗ್ಗೆ ಜನರಿಗೆ ತಿಳಿಸುತ್ತಾರಂತೆ. ಅದು ಹೇಗೆ ಅಂತೀರಾ? ನಾಯಿಗಳಿಗೆ ಕ್ಯಾಮರಾ ಸಿಕ್ಕಿಸಲಾಗಿರುತ್ತದೆ. ಈ ನಾಯಿಗಳು ಬೊಗಳಿದಾಗ ಕ್ಯಾಮರಾ ಆನ್‌ ಆಗುತ್ತದೆ. ಅದರಲ್ಲಿ ಸೆರೆಯಾದ ದೃಶ್ಯಾವಳಿಗಳು ತಂಡದ ಸದಸ್ಯರಿಗೆ ಸಿಗುತ್ತದೆ. ಏನಾದರೂ ಅಪರಾಧ ನಡೆಯುತ್ತಿದ್ದರೆ ಈ ತಂಡ ಪೊಲೀಸರಿಗೆ ಮಾಹಿತಿ ನೀಡುತ್ತದೆ.

Trending videos

Back to Top