50 ದಶಕಗಳ ನಂತರ ಚಿಗುರಿದ ಕನಸು!
Team Udayavani, Dec 1, 2017, 5:16 AM IST
ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಚೆನ್ನೈನ ಎಂ.ಚೆಲ್ಲತೈ (77 ವರ್ಷ) ಸಾಬೀತುಪಡಿಸಿದ್ದಾರೆ. ಸುಮಾರು 50 ವರ್ಷಗಳ ಹಿಂದೆಯೇ ಅವರು ಕಂಡಿದ್ದ ಉನ್ನತ ವ್ಯಾಸಂಗದ ಆಸೆಯನ್ನು ಮೊದಲು ಅವರ ತಂದೆ, ಆನಂತರ ಅವರ ಪತಿ ಚಿವುಟಿ ಹಾಕಿದ್ದರಂತೆ. ಆಗ 10ನೇ ತರಗತಿ ಪಾಸ್ ಆಗಿದ್ದರಿಂದ ಕ್ಲರ್ಕ್ ಆಗಿ ಸರ್ಕಾರಿ ಸೇವೆಗೆ ಹೋಗಿದ್ದ ಆಕೆ ಇತ್ತೀಚೆಗೆ ಸೇವೆಯಿಂದ ನಿವೃತ್ತಿಯಾದ ನಂತರ, ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಮುಗಿಸಿ ಈಗ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ನ. 28ರಂದು ಈ ಹಿರಿಯ ಪದವೀಧರೆ ಸಾಧಕಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಪದವಿ ಪ್ರದಾನ ಮಾಡಿದ್ದಾರೆ. ಪದವಿ ನಂತರ ಮಾತನಾಡಿದ ಅವರು, “ನಾನು ಓದುವುದೇ ನನ್ನ ತಂದೆಗೆ ಇಷ್ಟವಿರಲಿಲ್ಲ. ಆದರೂ, ಹೇಗೋ ಎಸ್ಸೆಸ್ಸೆಲ್ಸಿ ಮುಗಿಸಿದೆ.ನಮ್ಮೂರಾದ ಸತ್ತೂರಿನ ಪಿಯು ಕಾಲೇಜಿನಲ್ಲಿ ದಾಖಲಾಗಲು ತಂದಿದ್ದ ಅರ್ಜಿಯನ್ನು ತಂದೆ ಹರಿದುಹಾಕಿ,ಕೆಲವೇ ದಿನಗಳಲ್ಲಿ ಮದುವೆ ಮಾಡಿದರು. ಅಂದು ಕೈಬಿಟ್ಟಿದ್ದ ಕನಸನ್ನು ಇಂದು ಪೂರೈಸಿದ್ದೇನೆ” ಎಂದಾಗ ನೆರೆದಿದ್ದವರು ಕಣ್ಣಾಲಿಗಳು ತೇವಗೊಂಡವು!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ