ಶವರ್ಮ ತಂದುಕೊಡದ ಪತಿಗೆ ವಿಚ್ಛೇದನ
Team Udayavani, Feb 22, 2018, 5:43 AM IST
ಇತ್ತೀಚೆಗೆ ಚಿಕ್ಕಪುಟ್ಟ ಮನಸ್ತಾಪಗಳಿಗೆಲ್ಲಾ ವಿಚ್ಛೇದನ ಪಡೆಯುವಂಥ ಪ್ರಕರಣಗಳು ಹೆಚ್ಚಾಗಿವೆ ಎಂದು ಹಿರಿಯರು ಹಲುಬುತ್ತಿರುತ್ತಾರೆ. ದೊಡ್ಡವರು ಹೇಳಿದಂತೆ, ಕ್ಷುಲ್ಲಕ ಕಾರಣಕ್ಕಾಗಿ ಅರಬ್ ಮಹಿಳೆಯೊಬ್ಬಳು ತನ್ನ ಕೇವಲ 40 ದಿನಗಳ ದಾಂಪತ್ಯವನ್ನು ಕೊನೆಗಾಣಿ ಸಿದ್ದಾಳೆ. ತನ್ನ ಗಂಡ ಶವರ್ಮ (ಚಿಕನ್ ರೋಲ್) ಕೊಡಿಸಲು ನಿರಾಕರಿಸಿದ್ದಕ್ಕಾಗಿ ಆಕೆ ವಿಚ್ಛೇದನ ನೀಡಿದ್ದಾಳೆ.
ಮಹಿಳೆ ತನ್ನ ಗಂಡನಿಗೆ ಶವರ್ಮ ತರಲು ಹೇಳಿ ದ್ದಳು. ಆದರೆ ಗಂಡ ಆಕೆಗೆ ಕೇವಲ ತಂಪು ಪಾನೀಯ ತಂದು ಕೊಟ್ಟ. ಆಕೆ ತನಗೆ ಶವರ್ಮ ಬೇಕೇ ಬೇಕು ಎಂದು ಪಟ್ಟು ಹಿಡಿದಾಗ, ಜ್ಯೂಸ್ ತಂದುಕೊಟ್ಟಿದ್ದೇನೆ ಮತ್ತೆ ಶವರ್ಮಗೆ ಹಣ ವ್ಯಯಿಸಲು ಸಾಧ್ಯವಿಲ್ಲ ಎಂದು ಆತ ಹೇಳಿದ. ಇದರಿಂದ ಕುಪಿತಳಾದ ಆಕೆ ತನ್ನ ತವರಿಗೆ ಮರಳಿ, ವಿಚ್ಛೇದನ ನೀಡಿದ್ದಾಳೆ. “ನನ್ನದು ಅರೇಂಜ್x ಮದುವೆ. ಆತ ಇಷ್ಟು ಜಿಪುಣ ಎಂದು ನನಗೆ ತಿಳಿಯಲಿಲ್ಲ. ಮದುವೆಯಾಗಿ ಒಂದು ವಾರಕ್ಕೆ ಹೊರಗಡೆ ಸುತ್ತಾಡಲು ಹೋಗೋಣ ಎಂದರೆ ಹಣ ಖರ್ಚಾಗುತ್ತದೆ ಎಂದಿದ್ದ’ ಎಂದಿದ್ದಾಳೆ.