ಮಕ್ಕಳು ಓದುವುದೇ ಇಲ್ಲ ಟಾಯ್ಲೆಟ್ನಲ್ಲೇ ಕೂತಿರ್ತಾರೆ
Team Udayavani, Jan 28, 2019, 4:40 AM IST
ಮಕ್ಕಳು ಓದುವುದರಿಂದ, ಮನೆಗೆಲಸದಿಂದ, ಪೋಷಕರ ಬೈಗುಳಿಂದ ತಪ್ಪಿಸಿಕೊಳ್ಳಲು ಶೌಚಾಲಯಕ್ಕೆ ಹೋಗಿ ಗಂಟೆಗಟ್ಟಲೆ ಕುಳಿತುಕೊಳ್ಳುವುದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ನಡೆಯುತ್ತದೆ. ಮಕ್ಕಳು ಈ ನಡೆಯಿಂದ ಬೇಸತ್ತಿರುವ ಬ್ರಿಟನ್ನ ತಾಯಿ ಶೌಚಾಲಯಕ್ಕೆ ಹೋಗುವ ತಮ್ಮ ಮಕ್ಕಳಿಗೆ ಸಮಯ ನಿಗಡಿಪಡಿಸಿ ಟಿಕೆಟ್ ನೀಡುವ ಯೋಚನೆಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪತಿ ಕೂಡ ಶೌಚಾಲಯದಿಂದ ಬೇಗ ಹೊರಬರುವುದಿಲ್ಲ ಎಂದು ಅವರು ದೂರಿದ್ದಾರೆ. ನಮ್ಮ
ಮನೆಯಲ್ಲಿ ಇರುವುದು ಒಂದೇ ಶೌಚಾಲಯ. ಅದೂ ಕೂಡ ಸ್ನಾನದ ಕೋಣೆಯಲ್ಲಿ ಇದೆ. ನಾನು ಯಾವ ಸಮಯದಲ್ಲಿ ಶೌಚಾಲಯ ಬಳಸಲು ಹೋದರೂ ಮಕ್ಕಳಲ್ಲಿ ಒಬ್ಬರು ಅಥವಾ ಪತಿ ಶೌಚಾಲಯದಲ್ಲಿ ಇರುತ್ತಾರೆ. ಎಲ್ಲರೂ ಅಗತ್ಯಕ್ಕಿಂತ ಹೆಚ್ಚು ಹೊತ್ತು ಶೌಚಾಲಯದಲ್ಲಿ ಸಮಯ ಕಳೆಯುತ್ತಾರೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕು. ಶೌಚಾಲಯ ಬಳಸಲು ಸಮಯ ನಿಗದಿಪಡಿಸಿ ಟಿಕೆಟ್, ಪಂಚ್ಕಾರ್ಡ್ ಅಥವಾ ವಿದ್ಯುತ್ ಶಾಕ್ ಅಳವಡಿಸಬೇಕು ಎಂದು ತೀರ್ಮಾನಿಸಿದ್ದೇನೆ ಎಂದು
ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?