ಮೇಕಿಂಗ್‌ ಆಫ್ ಬಾಹುಬಲಿ

Team Udayavani, Jan 13, 2018, 3:27 PM IST

gommatta.jpg

ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಲಾಲ್‌ಬಾಗ್‌ಗೆ ಅಗ್ರಸ್ಥಾನ. ಇಲ್ಲಿಗೆ ಬರುವವರು ಲಾಲ್‌ಬಾಗ್‌ ಅನ್ನು ನೋಡದೇ ಹೋಗುವುದಿಲ್ಲ. ಇಲ್ಲಿಯೇ ಇರುವವರು, ಲಾಲ್‌ಬಾಗ್‌ ಅನ್ನು ಮರೆಯುವುದಿಲ್ಲ. ಹಾಗೆ ಇಲ್ಲಿನವರನ್ನು ಮತ್ತೆ ಮತ್ತೆ ಸಸ್ಯಕಾಶಿಯತ್ತ ಸೆಳೆಯುವುದು ಇಲ್ಲಿ ನಡೆಯುವ ಪುಷ್ಪ ಪ್ರದರ್ಶನಗಳು.

ಈಗಾಗಲೇ ಕುಪ್ಪಳ್ಳಿಯ ಕವಿಮನೆ, ಕವಿಶೈಲ, ಜೋಗ್‌ಫಾಲ್ಸ್‌, ಮೈಸೂರಿನ ವೈಭವಗಳು ಲಾಲ್‌ಬಾಗ್‌ನಲ್ಲಿ ಮರುಸೃಷ್ಟಿಯಾಗಿದೆ. ಅಂಥದ್ದೇ ಮತ್ತೂಂದು ಪ್ರದರ್ಶನಕ್ಕೆ ಭಾರೀ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಬರುತ್ತಿರುವವನು “ಬಾಹುಬಲಿ’… ಫೆಬ್ರವರಿಯಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ಶ್ರವಣ ಬೆಳಗೊಳದಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ.

ಅದಕ್ಕೂ ಮೊದಲೇ, ಬೆಂಗಳೂರಿನಲ್ಲಿ ಬಾಹುಬಲಿಗೆ ಮಸ್ತಕಾಭಿಷೇಕ ನಡೆಯುತ್ತದೆ. ಹೌದು, ಶ್ರವಣಬೆಳಗೊಳದ ಗೊಮ್ಮಟೇಶ ಪುಷ್ಪ ಪ್ರದರ್ಶನದ ಮೂಲಕ ಲಾಲ್‌ಬಾಗ್‌ಗೆ ಬರುತ್ತಿದ್ದು, ಸಸ್ಯಕಾಶಿಯಲ್ಲಿ 30ಕ್ಕೂ ಹೆಚ್ಚು ಕಲಾವಿದರು ಮಸ್ತಕಾಭಿಷೇಕದ ಮರುಸೃಷ್ಟಿಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. 
ಬಾಹುಬಲಿ ಮೇಕಿಂಗ್‌ ಹೇಗಿದೆ?

* ಹೂವು, ಮರ- ಗಿಡ, ಬಂಡೆ, ಫೈಬರ್‌ ಬಳಸಿಕೊಂಡು ಶ್ರವಣಬೆಳಗೊಳದ ಗೊಮ್ಮಟಗಿರಿಯನ್ನು ಲಾಲ್‌ಬಾಗ್‌ನಲ್ಲಿ ಸೃಷ್ಟಿಸಲಾಗುತ್ತಿದೆ. ಅದರ ಮೇಲ್ಭಾಗದಲ್ಲಿ ಅರ್ಧ ಭಾಗ ಕಾಣುವಂತೆ ಗೊಮ್ಮಟನ ಪ್ರತಿಕೃತಿಯನ್ನು ನಿರ್ಮಿಸಲಾಗುವುದು.

* ಗಾಜಿನ ಮನೆಯ ಎಡಭಾಗದಲ್ಲಿ ಮಹಾಮಸ್ತಕಾಭಿಷೇಕದ ಅಂತಾರಾಷ್ಟ್ರೀಯ ಲಾಂಛನದ ಪ್ರತಿರೂಪ ಹಾಗೂ ಹೂವುಗಳನ್ನು ಬಳಸಿಕೊಂಡು ಬಾಹುಬಲಿಯ ಪಾದವನ್ನು ನಿರ್ಮಿಸಲಾಗುತ್ತಿದೆ. 

* ಹಿಂಭಾಗದ ವಿಭಾಗದಲ್ಲಿ ಭರತ- ಬಾಹುಬಲಿಯರ ನಡುವೆ ನಡೆದ ಯುದ್ಧದ ಸನ್ನಿವೇಶಗಳನ್ನು ಕಟ್ಟಿ ಕೊಡಲಾಗುತ್ತಿದೆ. ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧ, ಚಕ್ರಪ್ರಯೋಗ, ನಂತರ ವಿರಾಗಿಯಾಗಿ ನಿಲ್ಲುವ ಬಾಹುಬಲಿಯ ಕಲಾಕೃತಿಗಳನ್ನು ಫೈಬರ್‌ನಿಂದ ನಿರ್ಮಿಸಲಾಗುವುದು. ಅದಕ್ಕೆ ಹೂವಿನ ಅಲಂಕಾರವನ್ನೂ ಮಾಡಲಾಗುತ್ತದೆ. 

* ಗಾಜಿನ ಮನೆಯ ಬಲಭಾಗದಲ್ಲಿ 18-20 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನು ನಿರ್ಮಿಸಿ, ಅದರ ಮೇಲೆ ಬಣ್ಣದ ನೀರು ಬೀಳುವಂತೆ ಮಾಡಿ ಮಸ್ತಕಾಭಿಷೇಕದ ವೈಭವವನ್ನು ಕಣ್ಮುಂದೆ ತರುವ ಪ್ರಯತ್ನ ನಡೆದಿದೆ. 

ಜನಮನ್ನಣೆ: ಪ್ರತಿ ವರ್ಷ ಸ್ವಾತಂತ್ರೊéàತ್ಸವ ಮತ್ತು ಗಣರಾಜ್ಯೋತ್ಸವದ ನಿಮಿತ್ತ ತೋಟಗಾರಿಕಾ ಇಲಾಖೆ ವತಿಯಿಂದ ಲಾಲ್‌ಬಾಗ್‌ ಬೊಟಾನಿಕ್‌ ಗಾರ್ಡನ್‌ನಲ್ಲಿ ಪುಷ್ಪ ಪ್ರದರ್ಶನ ನಡೆಯುತ್ತದೆ. ಇಲ್ಲಿಯವರೆಗೆ ಗುಸ್ಟವ್‌ ಹರ್ಮನ್‌ ಕ್ರುಂಬಿಗಲ್‌ (ಲಾಲ್‌ಬಾಗ್‌ ಗಾರ್ಡನ್‌ನ ಡಿಸೈನರ್‌ ), ತೋಟಗಾರಿಕಾ ಪಿತಾಮಹ ಡಾ. ಎಂ.ಎಚ್‌. ಮರಿಗೌಡರು, ಮೈಸೂರು ಮಹಾರಾಜರು ಹಾಗೂ ದಸರಾ ವೈಭವ, ರಾಷ್ಟ್ರಕವಿ ಕುವೆಂಪು ಹಾಗೂ ಕವಿಮನೆ ಪರಿಕಲ್ಪನೆಯಲ್ಲಿ ನಡೆದ ಪ್ರದರ್ಶನಗಳು ಜನಮನ್ನಣೆ ಗಳಿಸಿವೆ. 

ಎಲ್ಲಿ?: ಲಾಲ್‌ಬಾಗ್‌ 
ಯಾವಾಗ?: ಜನವರಿ 19-28

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.