ಮುಖವಾಡದ ಹಿಂದಿನ ಕಥೆ

Team Udayavani, Aug 10, 2018, 5:56 PM IST

loud-speaker.jpg

ನಾವೊಂದು ಆಟ ಆಡೋಣ್ವ? ಆಕೆ ಹಾಗೆ ಹೇಳುತ್ತಿದ್ದಂತೆ ಮತ್ತು ಆಟದ ಸ್ವರೂಪ ಅರ್ಥ ಮಾಡಿಸುತ್ತಿದ್ದಂತೆ ಕೆಲವರು ಖುಷಿಯಾಗುತ್ತಾರೆ. ಇನ್ನೂ ಕೆಲವರು ಟೆನ್ಶನ್‌ಗೆ ಒಳಗಾಗುತ್ತಾರೆ. ಆಟವೇನೋ ಚೆನ್ನಾಗಿದೆ. ಆದರೆ, ಎಲ್ಲಿ ಯಾರಿಗೂ ಗೊತ್ತಿಲ್ಲದ ತಮ್ಮ ಅಂತರಂಗದ ವಿಷಯಗಳು ಬಹಿರಂಗಗೊಳ್ಳುತ್ತದೋ ಎಂಬ ಭಯದಿಂದ ಆಟ ಬೇಡವೇ ಬೇಡ ಎನ್ನುತ್ತಾರೆ. ಕೊನೆಗೆ ಉಳಿದವರ ಒತ್ತಾಯ ಮತ್ತು ಮನವೊಲಿಕೆಯ ನಂತರ ಆಟಕ್ಕೆ ಒಪ್ಪಿ, ತಮ್ಮ ಮೊಬೈಲ್‌ಗ‌ಳನ್ನು ಟೇಬಲ್‌ ಮೇಲಿಡುತ್ತಾರೆ.

ಅಲ್ಲಿಂದ ತಮ್ಮ ಜೀವನವೇ‌ ಬದಲಾಗುತ್ತದೆ ಮತ್ತು ತಾವು ಎಲ್ಲರೆದುರು ಬೆತ್ತಲಾಗಿ ನಿಲ್ಲಬೇಕಾಗುತ್ತದೆ ಎಂಬ ಕಲ್ಪನೆ ಯಾರಲ್ಲೂ ಇರುವುದಿಲ್ಲ. “ಲೌಡ್‌ ಸ್ಪೀಕರ್‌’ ಕನ್ನಡದ ಮಟ್ಟಿಗೆ ಒಂದು ವಿಭಿನ್ನವಾದ ಪ್ರಯತ್ನ ಎಂದರೆ ತಪ್ಪಿಲ್ಲ. ಈ ತರಹದ ಚಿತ್ರಗಳು ಕನ್ನಡದಲ್ಲಂತೂ ಬಂದಿಲ್ಲ. ಇನ್ನು ಭಾರತದ ಬೇರೆ ಯಾವ ಭಾಷೆಯಲ್ಲೂ ಬಂದ ಉದಾಹರಣೆಯಿಲ್ಲ. ಹಾಗಂತ ಇದು ಜಗತ್ತಿನಲ್ಲೇ ಹೊಸದು ಎಂದರೆ ತಪ್ಪಾಗುತ್ತದೆ. 2016ರಲ್ಲಿ ಬಿಡುಗಡೆಯಾದ ಇಟಾಲಿಯನ್‌ ಚಿತ್ರ “ಪರ್ಫೆಕ್ಟ್ ಸ್ಟ್ರೇಂಜರ್’ನ ಸ್ಫೂರ್ತಿಯಿಂದ ಈ ಚಿತ್ರ ಮಾಡಲಾಗಿದೆ.

ಆ ಚಿತ್ರದ ಕಥೆಯನ್ನು ಒಂದಿಷ್ಟು ಹಿಗ್ಗಿಸಿ, ಒಂದು ಸಂದೇಶ ಸೇರಿಸಿ ಕನ್ನಡದಲ್ಲಿ ಚಿತ್ರ ಮಾಡಲಾಗಿದೆ. ಇಲ್ಲಿ ಮೂರು ಜೋಡಿಗಳಿವೆ. ಜೊತೆಗೊಬ್ಬ ಡೈವೋರ್ಸಿ. ಈ ಏಳು ಜನರಿಗೆ ವೀಕೆಂಡ್‌ ಪಾರ್ಟಿ ಮಾಡುವ ಖಯಾಲಿ. ಅದೊಮ್ಮೆ ಒಂದು ಜೋಡಿ ಮನೆಯಲ್ಲಿ, ಮಿಕ್ಕವರೆಲ್ಲಾ ಪಾರ್ಟಿಗೆಂದು ಸೇರುತ್ತಾರೆ. ಆ ಸಂದರ್ಭದಲ್ಲಿ ಒಬ್ಬಳಿಗೆ ಒಂದು ಐಡಿಯಾ ಹೊಳೆಯುತ್ತದೆ. ಒಂದು ಹೊಸ ಆಟ ಆಡುವುದಕ್ಕೆ ಮನಸ್ಸಾಗುತ್ತದೆ. ಆ ಆಟದ ರೂಪುರೇಷೆ ಏನೆಂದರೆ, ಆಟ ಶುರುವಾದಾಗಿನಿಂದ ಎಲ್ಲರೂ ತಮ್ಮ ಮೊಬೈಲ್‌ಗ‌ಳನ್ನು ಟೇಬಲ್‌ ಮೇಲಿಡಬೇಕು.

ಪಾರ್ಟಿ ಮುಗಿಯುವವರೆಗೂ ಯಾರ್ಯಾರ ಮೊಬೈಲ್‌ಗೆ ಏನೇನೆಲ್ಲಾ ಮೆಸೇಜುಗಳು ಬರುತ್ತವೋ ಅದನ್ನೆಲ್ಲಾ ಬಹಿರಂಗಪಡಿಸಬೇಕು ಮತ್ತು ಫೋನ್‌ ಕಾಲ್‌ಗ‌ಳು ಬಂದರೆ ಅದನ್ನು ಲೌಡ್‌ಸ್ಪೀಕರ್‌ ಮೂಲಕ ಎಲ್ಲರಿಗೂ ಕೇಳಿಸಬೇಕು. ಮೊದಲೇ ಹೇಳಿದಂತೆ, ವಿರೋಧದ ನಡುವೆಯೇ ಆಟ ಶುರುವಾಗುತ್ತದೆ. ಆ ನಂತರ ಒಂದೊಂದೇ ಫೋನ್‌ ಕಾಲ್‌ಗ‌ಳು, ಒಂದೊಂದೇ ಮೆಸೇಜುಗಳು ಅವರನ್ನು ಬೆತ್ತಲಾಗಿಸುತ್ತಾ ಹೋಗುತ್ತದೆ. ಕ್ರಮೇಣ ಅವರ ನಡುವೆ ಇರುವ ಪ್ರೀತಿ, ಸ್ನೇಹ, ವಿಶ್ವಾಸ ಎಲ್ಲವೂ ಕಡಿಮೆಯಾಗುತ್ತಾ ಹೋಗಿ, ಅವರೆಲ್ಲಾ ಕ್ರಮೇಣ ದೂರವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ನಂತರ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಮೊದಲೇ ಹೇಳಿದಂತೆ, “ಲೌಡ್‌ ಸ್ಪೀಕರ್‌’ ಕನ್ನಡದ ಮಟ್ಟಿಗೆ ವಿಭಿನ್ನವಾಗ ಪ್ರಯೋಗ. ಇಲ್ಲಿ ಯಾವುದೇ ಹೊಡೆದಾಟ, ಹಾಡು ಇಲ್ಲದೆ ಸೀಮಿತ ಪಾತ್ರಗಳು ಮತ್ತು ಸೀಮಿತ ಪರಿಸರದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಜೊತೆಗೆ ಜೀವವಿಲ್ಲದ ಮೊಬೈಲ್‌ಗ‌ಳ ಜೊತೆಗೆ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲು, ಜೀವ ಇರುವವರ ಜೊತೆಗೆ ನಿಮ್ಮ ಅಮೂಲ್ಯ ಕ್ಷಣಗಳನ್ನು ಕಳೆಯಿರಿ ಎಂಬ ಸಂದೇಶವಿದೆ. ಇದನ್ನು ನೀಟ್‌ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಶಿವತೇಜಸ್‌.

ಹಲವು ಟ್ವಿಸ್ಟ್‌ಗಳ ಮೂಲಕ ಚಿತ್ರವನ್ನು ನಿರೂಪಿಸುತ್ತಾ ಹೋಗುವ ಅವರು, ಆಗಾಗ ಪ್ರೇಕ್ಷಕರಿಗೆ ಶಾಕ್‌ ಕೊಡುತ್ತಾರೆ. ಕೊನೆಗೆ ಒಂದು ಒಳ್ಳೆಯ ಸಂದೇಶದೊಂದಿಗೆ ಚಿತ್ರವನ್ನು ಮುಗಿಸಿದ್ದಾರೆ. ಹಾಗೆ ನೋಡಿದರೆ, ಚಿತ್ರಕಥೆಯೇ ಈ ಚಿತ್ರದ ಹೈಲೈಟು ಮತ್ತು ಅದನ್ನೇ “ಪರ್ಫೆಕ್ಟ್ ಸ್ಟ್ರೇಂಜರ್’ ಚಿತ್ರದಿಂದ ಎರವಲು ಪಡೆದಿರುವುದರಿಂದ ಅರ್ಧ ಕೆಲಸ ಸುಲಭವಾಗಿದೆ. ಇನ್ನರ್ಧ ಜವಾಬ್ದಾರಿ ಕಲಾವಿದರು ಮತ್ತು ತಂತ್ರಜ್ಞರ ಮೇಲಿದ್ದು, ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಭಾಸ್ಕರ್‌ ನೀನಾಸಂ, ಕಾವ್ಯಾ ಶಾ, ಸುಮಂತ್‌ ಭಟ್‌, ದಿಶಾ ದಿನಕರ್‌, ರಂಗಾಯಣ ರಘು, ದತ್ತಣ್ಣ, ಅಭಿಶೇಕ್‌ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಸೀಮಿತ ವಾತಾವರಣದಲ್ಲಿ ಕಥೆ ನಡೆಯುವುದರಿಂದ ಛಾಯಾಗ್ರಾಹಕ ಕಿರಣ್‌ ಹಂಪಾಪುರ್‌ ಅವರ‌ ಮೇಲೆ ಜವಾಬ್ದಾರಿ ಜಾಸ್ತಿಯೇ ಇದೆ ಮತ್ತು ಕಿರಣ್‌ ಬಹಳ ಚೆನ್ನಾಗಿ ಇಡೀ ಪರಿಸರವನ್ನು ಕಟ್ಟಿಕೊಟ್ಟಿದ್ದಾರೆ. ಇನ್ನು ಕೆ.ಎಂ. ಪ್ರಕಾಶ್‌ ಎಂದಿನಂತೆ ತಮ್ಮ ಚಾಕಚಕ್ಯತೆ ಪ್ರದರ್ಶಿಸಿ, ಚಿತ್ರ ನಿಧಾನವಾಗದಂತೆ ಮತ್ತು ಹೆಚ್ಚು ಬೋರಾಗದಂತೆ ಕತ್ತರಿಸಿಕೊಟ್ಟಿದ್ದಾರೆ.

ಚಿತ್ರ: ಲೌಡ್‌ ಸ್ಪೀಕರ್‌
ನಿರ್ದೇಶನ: ಶಿವತೇಜಸ್‌
ನಿರ್ಮಾಣ: ಡಾ.ಕೆ. ರಾಜು
ತಾರಾಗಣ: ಭಾಸ್ಕರ್‌ ನೀನಾಸಂ, ಕಾವ್ಯಾ ಶಾ, ಸುಮಂತ್‌ ಭಟ್‌, ದಿಶಾ ದಿನಕರ್‌, ರಂಗಾಯಣ ರಘು, ದತ್ತಣ್ಣ, ಅಭಿಶೇಕ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.