ಕೆಂಪು ದೀಪಕ್ಕೆ ಬೇಸತ್ತು ಕಂಬವನ್ನೇ ಧರೆಗುರುಳಿಸಿದ
Team Udayavani, Sep 09, 2018, 11:26 AM IST

ಅವಸರದಿಂದ ಎಲ್ಲಿಗೋ ಹೋಗುತ್ತಿರುತ್ತೇವೆ. ಇನ್ನೇನು ನಾವು ತಲುಪಬೇಕಿರುವ ಸ್ಥಳ ಹತ್ತಿರವಾಯಿತು ಎನ್ನುವಷ್ಟರಲ್ಲಿ ರಸ್ತೆಯಲ್ಲಿ ಸಿಗ್ನಲ್ ಬೀಳುತ್ತದೆ. ಸಿಗ್ನಲ್ 1 ನಿಮಿಷಕ್ಕಿಂತ ಹೆಚ್ಚು ಹೊತ್ತು ನಮ್ಮನ್ನು ಕಾಯಿಸುವಂತೆ ಮಾಡಿದರೆ ನಮಗೆ ಒಂದು ವರ್ಷ ಕಾದಂತೆ ಅಸಹನೆ ಉಂಟಾಗುತ್ತದೆ.
ಚೀನಾದ ವ್ಯಕ್ತಿಯೊಬ್ಬ ಇಂಥದ್ದೇ ಪರಿಸ್ಥಿತಿಯಲ್ಲಿ ಕಳೆದ ವಾರ ಇದ್ದ. ಆತುರದಿಂದ ಹೋಗುತ್ತಿದ್ದವನನ್ನು ಸಿಗ್ನಲ್‌ನ ಕೆಂಪು ದೀಪ ತಡೆದು ನಿಲ್ಲಿಸಿತು. ಕೆಲಕಾಲ ಕೆಂಪುದೀಪ ಬದಲಾಗಿ ಹಸಿರು ನಿಶಾನೆ ತೋರಲೇ ಇಲ್ಲ. ಸಹನೆ ಕಳೆದುಕೊಂಡ ಆತ ನೇರವಾಗಿ ಸಿಗ್ನಲ್ ಕಂಬದ ಬಳಿ ಬಂದು, ಕಂಬವನ್ನು ಎಳೆದು ಧರೆಗುರುಳಿಸಿದ. ಬಳಿಕ ತಾನೇನೂ ಮಾಡೇ
ಇಲ್ಲವೆಂಬಂತೆ ಅಲ್ಲಿಂದ ಹೊರಟ.