ಯುವಶಕ್ತಿಯಿಂದ ಜಲಸಾಕ್ಷರತೆ ಪಾಠ: ಅಂತರ್ಜಲ ವೃದ್ಧಿ

Team Udayavani, Jan 10, 2019, 4:58 AM IST

10-january-2.jpg

ವೇಣೂರು : ನದಿ, ಹೊಳೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ನೀರಿಗಾಗಿ ಹಾಹಾಕಾರ ಸಮೀಪಿಸುತ್ತಿದ್ದಂತೆ ಹೊಸಂಗಡಿ ಗ್ರಾ.ಪಂ.ನ ತೊರ್ಪುವಿನಲ್ಲಿ ಯುವಶಕ್ತಿ ಜಲಸಾಕ್ಷರತೆಯ ಸಂದೇಶ ರವಾನಿಸಿದೆ.

ತೊರ್ಪು ಬಳಿ ಫಲ್ಗುಣಿ ನದಿಗೆ ಸುಮಾರು 350 ಮೀ. ಉದ್ದದಲ್ಲಿ ಮರಳು ಚೀಲಗಳಿಂದ ವ್ಯವಸ್ಥಿತ ಕಟ್ಟ ಕಟ್ಟ ಲಾಗಿದ್ದು, ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಬೆಳ್ತಂಗಡಿ ತಾಲೂಕಿನ ಕಟ್ಟಕಡೆಯ ಗ್ರಾಮದ ಹೊಸಂಗಡಿ ಹಾಗೂ ಮೂಡುಬಿದಿರೆಯ ಮಾರೂರನ್ನು ಸಂಪರ್ಕಿಸುವ ತೊರ್ಪು ಫಲ್ಗುಣಿ ನದಿಗೆ ಈ ಕಟ್ಟ ಕಟ್ಟಲಾಗಿದೆ.

ಜನವರಿ ಬಳಿಕ ತೋಡು, ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗುತ್ತದೆ. ಎಪ್ರಿಲ್‌ ಬಳಿಕ ಎಲ್ಲೆಡೆ ನೀರಿಗೆ ಹಾಹಾ ಕಾರ ಪ್ರಾರಂಭವಾಗುತ್ತದೆ. ಇವೆಲ್ಲವನ್ನು ಮನಗಂಡಿರುವ ಊರ ಪ್ರಮುಖರು ಹಾಗೂ ಮೂಡುಬಿದಿರೆ ಎಸ್‌.ಎನ್‌.ಎಂ. ಪಾಲಿ ಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆಯ 105 ಮಂದಿ ವಿದ್ಯಾ ರ್ಥಿಗಳು ಹಾಗೂ ಮೂಡಬಿದಿರೆ ರೋಟರಿ ಕ್ಲಬ್‌ ಸದಸ್ಯರು ಈ ಬೃಹತ್‌ ಕಟ್ಟ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಳೆದ ವರ್ಷವೂ ನಿರ್ಮಿಸಿದ್ದರು
ಹೊಸಂಗಡಿ ಗ್ರಾ.ಪಂ. ಸದಸ್ಯ ಪಿ. ಹರಿ ಪ್ರಸಾದ್‌ ಅವರ ಚಿಂತನೆಯಂತೆ ಕಳೆದ ಬಾರಿಯೂ ಇಲ್ಲಿ ಕಟ್ಟ ನಿರ್ಮಿಸಲಾಗಿದೆ. ಕಟ್ಟ ನಿರ್ಮಾಣದಿಂದ ಸುಮಾರು 6 ಕಿ.ಮೀ. ವ್ಯಾಪ್ತಿಯಲ್ಲಿ ಪರಿಸರದಲ್ಲಿ ಅಂತರ್ಜಲ ವೃದ್ಧಿಯಾಗಿದ್ದು, ಇವರ ಈ ಕಾರ್ಯಕ್ಕೆ ಗ್ರಾಮಸ್ಥರು ಬೇಷ್‌ ಎನ್ನುತ್ತಿದ್ದಾರೆ.

ಕಟ್ಟ ಕಟ್ಟುವ ಚಿಂತನೆ
ಮೊದಲಾಗಿ ಕಟ್ಟ ಕಟ್ಟುವ ಚಿಂತನೆಯನ್ನು ಮಾಡಿದ ಗ್ರಾ.ಪಂ. ಸದಸ್ಯ ಹರಿಪ್ರಸಾದ್‌, ಈ ನಿಟ್ಟಿನಲ್ಲಿ ಅವರು ತಮ್ಮ ತಂಡದೊಂದಿಗೆ ಮೂಡುಬಿದಿರೆ ಎಸ್‌.ಎನ್‌.ಎಂ. ಪಾಲಿ ಟೆಕ್ನಿಕ್‌ ಕಾಲೇಜನ್ನು ಸಂಪರ್ಕಿಸಿದರು. ಅಲ್ಲಿನ ಪ್ರಾಚಾರ್ಯ ಜೆ.ಜೆ. ಪಿಂಟೋ ಅವರೊಂದಿಗೆ ವಿಷಯ ಹಂಚಿಕೊಂಡು ಅವರ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಸಹಕಾರ ಪಡೆದು ಕೊಂಡರು. ಮೂಡುಬಿದಿರೆ ರೋಟರಿ ಸಂಸ್ಥೆ ಇವರ ಸಾಹಸಕ್ಕೆ ಬೆನ್ನೆಲುಬು ಆಗಿ ನಿಂತಿತು. ಈ ಸಂಸ್ಥೆಯ ಸದಸ್ಯರು ಖುದ್ದು ಕೈಜೋಡಿಸಿದ್ದು ನಿಜಕ್ಕೂ ಶ್ಲಾಘನೀಯ. ಊರ ವಿವಿಧ ಸಂಘಟನೆ ಸದಸ್ಯರು ಹಾಗೂ ಹೊಸಂಗಡಿ ಗ್ರಾ.ಪಂ. ಕೂಡಾ ಈ ಕಾರ್ಯಕ್ಕೆ ಕೈಜೋಡಿಸಿತು.

ಹೊಸಂಗಡಿ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಗಣೇಶ್‌ ಶೆಟ್ಟಿ, ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಡಾ| ರಮೇಶ್‌, ಡಾ| ಮುರಳಿಕೃಷ್ಣ, ಶ್ರೀಕಾಂತ್‌ ಕಾಮತ್‌, ನಾರಾಯಣ ಪಿ.ಎಂ., ಸಿ.ಎಚ್. ಗಫ‌ೂರ್‌, ಜಯರಾಮ ಕೋಟ್ಯಾನ್‌, ದಯಾನಂದ ಮಲ್ಯ, ಅರವಿಂದ ಕಿಣಿ, ಜೆ.ಜೆ. ಪಿಂಟೋ, ಡಾ| ಹರೀಶ್‌ ನಾಯಕ್‌, ನಾಗರಾಜ್‌, ಅಬ್ದುಲ್‌ ರವೂಫ್‌, ಉದಯ ಕುಮಾರ್‌, ಮಹಮ್ಮದ್‌ ಆರಿಫ್‌, ಪಿ.ಕೆ. ತೋಮಸ್‌, ತರೀನಾ ಪಿಂಟೋ, ಸಹನಾ ನಾಗರಾಜ್‌ ಸಹಿತ ಹಲವು ಪ್ರಮುಖರು ಸಾಥ್‌ ನೀಡಿದರು.

ಕೈಯಿಂದ ಕೈಗೆ..
ನದಿಯ ದೂರದ ಭಾಗದಿಂದ ಗೋಣಿಚೀಲಕ್ಕೆ ಮರಳನ್ನು ತುಂಬಿಸಿ ಸಾಲಾಗಿ ನಿಂತು ಕೈಯಿಂದ ಕೈಗೆ ಹಸ್ತಾಂ ತರಿಸಿ ಸಾಗಿಸಲಾಯಿತು. ನೂರಾರು ಮಂದಿ ಸೇರಿದ್ದ ಈ ಕಾರ್ಯದಲ್ಲಿ ಕಟ್ಟ ನಿರ್ಮಾಣಕ್ಕೆ ಸುಲಭ ವಿಧಾನಗಳನ್ನು ಅನುಸರಿಸಲಾಯಿತು. ಕ್ಷಣ ಮಾತ್ರದಲ್ಲಿ ಕಟ್ಟ ನಿರ್ಮಾಣದ ಬೆಳವಣಿಗೆ ಕಾಣುತ್ತಿತ್ತು. ಬೆಳಗ್ಗೆಯಿಂದ ಮಧ್ಯಾಹ್ನ ತಲುಪುವ ಹೊತ್ತಿಗೆ ನೀರನ್ನು ತಡೆದು ಕಟ್ಟ ನಿರ್ಮಿಸುವಲ್ಲಿ ಯಶಸ್ವಿಯಾದರು.

ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹ
ಜಲಸಾಕ್ಷರತೆ ಜಾಗೃತಿ ಮೂಡಿಸಲು ನದಿಗೆ ಕಟ್ಟ ಕಟ್ಟುವ ಯೋಜನೆ ನಿರ್ಮಿಸಿದೆವು. ಕೆಲಸ ನಮಗೆ ಸವಾಲಾಗಿತ್ತು. ಎಲ್ಲರ ಸಹಕಾರದಿಂದ ಯೋಜನೆಯಂತೆ ಕಾರ್ಯಗತವಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.
– ಹರಿಪ್ರಸಾದ್‌ ಪಿ., ಸದಸ್ಯರು,
  ಹೊಸಂಗಡಿ ಗ್ರಾ.ಪಂ.

ಟಾಪ್ ನ್ಯೂಸ್

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

Karnataka ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

Karnataka ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.