ಹಾರರ್‌ ಅನ್ವೇಷಿ

Team Udayavani, Sep 22, 2017, 3:30 PM IST

22-SU-5.jpg

ವೇಮಗಲ್‌ ಜಗನ್ನಾಥ್‌ ರಾವ್‌ ಸದ್ದಿಲ್ಲದೇ ಒಂದು ಸಿನಿಮಾ ಮಾಡಿ, ಮುಗಿಸಿದ್ದಾರೆ. ಅದು “ಅನ್ವೇಷಿ’. ಇದು ಪಕ್ಕಾ ಹಾರರ್‌ ಸಿನಿಮಾ. ಚಿತ್ರದ ಟೈಟಲ್‌ ಕೇಳಿ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಖುಷಿಯಾಗಿದ್ದರು. ಇತ್ತೀಚೆಗೆ ಇಂಗ್ಲೀಷ್‌ ಶೀರ್ಷಿಕೆಗಳ ಮೋಹ ಹೆಚ್ಚುತ್ತಿರುವ ಬಗ್ಗೆ ಗೋವಿಂದು ತಮ್ಮ ಬೇಸರವನ್ನು ಆ ವೇದಿಕೆಯಲ್ಲಿ ತೋಡಿಕೊಂಡರು. 

“ವೇಮಗಲ್‌ ಅವರು “ಅನ್ವೇಷಿ’ ಎಂಬ ಕನ್ನಡ ಶೀರ್ಷಿಕೆ ಇಟ್ಟಿದ್ದಾರೆ. ಆದರೆ, ಈಗ ಚಿತ್ರರಂಗಕ್ಕೆ ಬರುವವರಿಗೆ ಇಂಗ್ಲೀಷ್‌ ಶೀರ್ಷಿಕೆಗಳ ಮೋಹ ಹೆಚ್ಚು. ಇಂಗ್ಲೀಷ್‌ ಶೀರ್ಷಿಕೆ ಇಟ್ಟರೆ ಮುಂದೆ ಸಬ್ಸಿಡಿ ಸೇರಿದಂತೆ ಇತರ ವಿಷಯಗಳಿಗೆ ತೊಂದರೆಯಾಗಬಹುದೆಂದು ಹೇಳಿದರೂ, “ನಮಗೆ ಸಬ್ಸಿಡಿ ಸೇರಿದಂತೆ ಯಾವ ಸೌಲಭ್ಯವೂ ಬೇಡ ಸಾರ್‌. ನಾವು ಕೇಳಿದ ಟೈಟಲ್‌ ಕೊಡಿ’ ಎನ್ನುತ್ತಾರೆ. ಆ ಮಟ್ಟಿಗೆ ಇಂಗ್ಲೀಷ್‌ ಟೈಟಲ್‌ ಗಾಗಿ ಸಬ್ಸಿಡಿ ಬಿಡೋಕು ರೆಡಿ ಎನ್ನುವವರಿದ್ದಾರೆ. ಯಾವುದೇ ಸಿನಿಮಾಗಳಿಗೂ ಶೀರ್ಷಿಕೆ ತುಂಬಾ ಮುಖ್ಯವಾಗುತ್ತದೆ. ಕಥೆಗೆ ಹೊಂದಿಕೆಯಾಗುವ ಶೀರ್ಷಿಕೆ ಇಡಬೇಕಾಗುತ್ತದೆ’ ಎನ್ನುತ್ತಾ “ಅನ್ವೇಷಿ’ ತಂಡಕ್ಕೆ ಶುಭಕೋರಿದರು ಸಾ.ರಾ.ಗೋವಿಂದು.

ಅಂದಹಾಗೆ, “ಅನ್ವೇಷಿ’ ಒಂದು ಹಾರರ್‌ ಸಿನಿಮಾ. ಜರ್ನಲಿಸಂ ವಿದ್ಯಾರ್ಥಿ “ಸಿಕ್ಸ್ತ್ ಸೆನ್ಸ್‌’ ಬಗ್ಗೆ ಲೇಖನ ಬರೆಯಲು ಹೋದ ಸಂದರ್ಭದಲ್ಲಿ ಏನೆಲ್ಲಾ ಅನುಭವಗಳಾಗುತ್ತದೆ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ನಿರ್ದೇಶಕ ವೇಮಗಲ್‌ ಅವರು ಹೇಳುವಂತೆ, ಕಥೆಯಲ್ಲಿ ಹೊಸತನವಿದೆ. ಈ ಕಥೆಯಲ್ಲಿ ಹಾರರ್‌ ಜೊತೆಗೆ ಲವ್‌ಸ್ಟೋರಿಯೂ ಇರುವುದರಿಂದ ಎಲ್ಲಾ ವರ್ಗದವರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ವೇಮಗಲ್‌ ಅವರಿಗಿದೆ. ಚಿತ್ರವನ್ನು ಜಯರಾಂ ನಿರ್ಮಿಸಿದ್ದಾರೆ. ಚಿತ್ರದಲ್ಲಿ ತಿಲಕ್‌, ರಘು ಭಟ್‌, ದಿಶಾ ಪೂವಯ್ಯ ಸೇರಿದಂತೆ ಅನೇಕರು ನಟಿಸಿದ್ದಾರೆ.

ತಿಲಕ್‌ಗೆ ಇದರಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. “ವೇಮಗಲ್‌ ಅವರ ಈ ಹಿಂದಿನ ಸಿನಿಮಾದಲ್ಲೂ ನನಗೆ ಅವಕಾಶ ಕೊಟ್ಟಿದ್ದರು. ಇಲ್ಲೂ ಒಂದು ಪಾತ್ರ ಕೊಟ್ಟಿದ್ದಾರೆ. ತುಂಬಾ ಹೊಸತನದಿಂದ ಕೂಡಿರುವ ಪಾತ್ರವಿದು’ ಎನ್ನುವುದು ಅವರ ಮಾತು. ಈಗಷ್ಟೇ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳುತ್ತಿರುವ ರಘು ಭಟ್‌ಗೆ “ಅನ್ವೇಷಿ’ ಮೂಲಕ ಬ್ರೇಕ್‌ ಸಿಗುವ ನಿರೀಕ್ಷೆ ಇದೆಯಂತೆ. ಚಿತ್ರದಲ್ಲಿ ದಿಶಾ ಪೂವಯ್ಯ ನಟಿಸಿದ್ದು, ಅವರಿಲ್ಲಿ ಬಬ್ಲಿ ಹುಡುಗಿಯಾಗಿ ಯಾಗಿ ಕಾಣಿಸಿಕೊಂಡಿದ್ದಾರಂತೆ. ವಿಕ್ರಮ್‌ ಸೂರಿ ಇಲ್ಲಿ ಕಾಮಿಡಿ ಮಾಡಿದ್ದಾರಂತೆ. ಚಿತ್ರಕ್ಕೆ ವೈಲಿನ್‌ ಹೇಮಂತ್‌ ಸಂಗೀತ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ನಾರಾಯಣಸ್ವಾಮಿ ಕೂಡಾ ಭಾಗವಹಿಸಿದ್ದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.