CONNECT WITH US  

ಸಾಧನೆ ಹಾದಿಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿ: ನಗುನಂದನ

ಫ‌ಸ್ಟ್‌ ರ್‍ಯಾಂಕ್‌ ಪಡೆದ ರಾಜು ಅಲ್ಲಲ್ಲ, ಗುರುನಂದನ್‌ ಈಗ ಕನ್ನಡ ಮೀಡಿಯಂ ಸ್ಟುಡೆಂಟ್‌. ರ್‍ಯಾಂಕ್‌ ನಂತರ ಸ್ಮೈಲ್ ಮಾಡುತ್ತಲೇ ನಗಿಸುವ ಪ್ರಯತ್ನ ಮಾಡಿದರಾದರೂ, ಅವರ ಸ್ಮೈಲ್ಗೆ ಯಾರೂ ಸ್ಮೈಲ್ ಮಾಡಲಿಲ್ಲ. ಈಗ ಕನ್ನಡ ಮೀಡಿಯಂ ವಿದ್ಯಾರ್ಥಿಯಾಗಿ ಹೊಸದೇನನ್ನೋ ಹೇಳ್ಳೋಕೆ ರೆಡಿಯಾಗಿದ್ದಾರೆ. ಗೆಲುವು ಸೋಲಿನ ಬಳಿಕ ಹೊಸ ನಿರೀಕ್ಷೆ ಇಟ್ಟುಕೊಂಡಿರುವ ಗುರುನಂದನ್‌, ಈಗ "ರಾಜು ಕನ್ನಡ ಮೀಡಿಯಂ' ಮೂಲಕ ಒಳ್ಳೇ ವಿದ್ಯಾರ್ಥಿ ಎಂಬುದನ್ನು ಸಾಬೀತುಪಡಿಸುವ ವಿಶ್ವಾಸದಲ್ಲಿದ್ದಾರೆ. ಗೆಲುವು-ಸೋಲಿನ ಕುರಿತು ಗುರುನಂದನ್‌ ಮಾತನಾಡಿದ್ದಾರೆ.

ನನ್ನ "ಫ‌ಸ್ಟ್‌ ರ್‍ಯಾಂಕ್‌ ರಾಜು' ಚಿತ್ರ ಭರ್ಜರಿ ಯಶಸ್ಸು ಪಡೆಯಿತು. ನನಗೂ ಹೊಸ ಇಮೇಜ್‌ ಸಿಕ್ಕಿತು. ಅದೇ ಗೆಲುವಿನ ನಿರೀಕ್ಷೆ ಇಟ್ಟುಕೊಂಡು "ಸ್ಮೈಲ್ ಪ್ಲೀಸ್‌' ಚಿತ್ರ ಮಾಡಿದೆ. ಆದರೆ, "ಪ್ಲೀಸ್‌' ಅಂದರೂ, ಜನ ಸ್ಮೈಲ್ ಮಾಡಲಿಲ್ಲ. ಆ ಕ್ಷಣ ಭಯವಾಗಿದ್ದು ಸುಳ್ಳಲ್ಲ. ಒಳ್ಳೇ ಕಥೆ ಎಂಬ ಕಾರಣಕ್ಕೆ ಆ ಚಿತ್ರ ಒಪ್ಪಿದೆ. ಆದರೆ, ಜನರು ಒಪ್ಪಲಿಲ್ಲ. ನನ್ನ ಅಸ್ತಿತ್ವ ಕಾಪಾಡಿಕೊಳ್ಳಬೇಕೆಂಬ ಭಯ ಇದ್ದೇ ಇತ್ತು. ಆಗ ಪುನಃ, "ಫ‌ಸ್ಟ್‌ ರ್‍ಯಾಂಕ್‌ ರಾಜು' ತಂಡ ಸೇರಿ ಇನ್ನೊಂದು ಚಿತ್ರ ಮಾಡಲು ಅಣಿಯಾಯಿತು. ಸುರೇಶ್‌ ಅವರು ಆ ಚಿತ್ರ ನಿರ್ಮಾಣಕ್ಕೆ ಮುಂದಾದರು. "ರಾಜು ಕನ್ನಡ ಮೀಡಿಯಂ' ಒಂದು ಹೊಸ ಆಯಾಮದ ಚಿತ್ರ ಎಂಬ ಗ್ಯಾರಂಟಿ ಕೊಡ್ತೀನಿ.

ಒಂದು ಯಶಸ್ವಿ ಚಿತ್ರ ಕೊಟ್ಟ ತಂಡ, ಪುನಃ ಸೇರಿದೆ ಅಂದಾಗ, ಅಲ್ಲೊಂದು ನಿರೀಕ್ಷೆ ಇದ್ದೇ ಇರುತ್ತೆ. ಅದು ನನಗೂ, ನನ್ನ ತಂಡಕ್ಕೂ ಇದೆ. ಕಥೆ ಚೆನ್ನಾಗಿದೆ. ಪಾತ್ರಗಳ ಆಯ್ಕೆ, ನಿರೂಪಿಸಿರುವ ರೀತಿ ಎಲ್ಲವೂ ಹೊಸತೆನಿಸುತ್ತದೆ. ಇಲ್ಲಿ ಒಳ್ಳೆಯ ಸಂದೇಶ ಇಟ್ಟುಕೊಂಡು ಮಾಡಿದ್ದೇವೆ. ಅದೇ ಚಿತ್ರದ ಹೈಲೈಟ್‌.

ನನ್ನ ರಿಯಲ್‌ ಲೈಫ್ಗೆ ಹತ್ತಿರವಾಗಿರುವಂತ ಸಬ್ಜೆಕ್ಟ್ ಇದು. ಒಬ್ಬ ಮಿಡ್ಲ್ಕ್ಲಾಸ್‌ ಹುಡುಗ ಹಳ್ಳಿಯಲ್ಲಿ ಕನ್ನಡ ಮೀಡಿಯಂ ಓದಿ, ಬೆಂಗಳೂರಿಗೆ ಬಂದು, ಇಂಗ್ಲೀಷ್‌ ಬರದೆ, ಕಂಗ್ಲೀಷ್‌ ಜೊತೆಗೆ ಏನೆಲ್ಲಾ ಸಾಧನೆ ಮಾಡ್ತಾನೆ ಅನ್ನೋದು ಕಥೆಯ ಎಳೆ. ನಾನು ಕೂಡ ಹಳ್ಳಿಯಿಂದ ಬಂದವನು. ಕನ್ನಡ ಮೀಡಿಯಂ ಓದಿ, ಬೆಂಗಳೂರಿಗೆ ಬಂದು, ಇಲ್ಲಿ ನೆಲೆ ಕಾಣೋಕೆ ಒದ್ದಾಡಿದವನು. ಎಲ್ಲೋ ಒಂದು ಕಡೆ ಕಥೆ ಕೂಡ ನನ್ನ ಲೈಫ್ಗೆ ಹತ್ತಿರವಾದ್ದರಿಂದ ಕೆಲಸ ಮಾಡೋಕೆ ಖುಷಿಯಾಯ್ತು. ಒಬ್ಬ ಹಳ್ಳಿ ಹುಡುಗ, ಸಿಟಿಗೆ ಬಂದು ಹೇಗೆ ತನ್ನ ಬದುಕು ಕಟ್ಟಿಕೊಳ್ಳುತ್ತಾನೆ ಎಂಬುದು ಚಿತ್ರಣ.

ಇಲ್ಲಿ ನನಗೆ ಸಾಕಷ್ಟು ಚಾಲೆಂಜ್‌ ಇತ್ತು. ಒಂಭತ್ತನೇ ತರಗತಿ ಹುಡುಗನ ಪಾತ್ರ ನಿರ್ವಹಿಸಬೇಕಿತ್ತು. ಅದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡು ಸಣ್ಣ ಆದೆ. ಯೂನಿಫಾರಂ ಹಾಕಿಕೊಂಡಾಗ, ಚಿಕ್ಕ ಹುಡುಗನಂತೆಯೇ ಫೀಲ್‌ ಆಗಬೇಕಿತ್ತು. ಹಾಗೆ ಕಾಣೋವರೆಗೂ ನಾನು ಸಾಕಷ್ಟು ಡೆಯಟ್‌ ಮಾಡಿದ್ದುಂಟು. ತೆರೆ ಮೇಲೆ ನೋಡಿದಾಗ, ಕಷ್ಟಪಟ್ಟಿದ್ದಕ್ಕೂ ಸಾರ್ಥಕ ಎನಿಸುತ್ತೆ. ಅದಾದ ಬಳಿಕ ಯೌವ್ವನದ ಪಾತ್ರ. ಅದಕ್ಕೂ ವಕೌìಟ್‌ ಮಾಡಿದೆ. ಆಮೇಲೆ ಅಬ್ರಾಡ್‌ನ‌ಲ್ಲಿ ಕಾಣಿಸಿಕೊಳ್ಳುವ ಪಾತ್ರ ಅದಕ್ಕೂ ಬದಲಾವಣೆ ಮಾಡಿಕೊಂಡೆ. ಇಲ್ಲಿ ಮೂರು ಶೇಡ್‌ಗಳಿವೆ. ಒಂದೊಂದು ಶೇಡ್‌ನ‌ಲ್ಲೂ ಒಂದೊಂದು ರೀತಿ ಕಾಣಿಸಿಕೊಂಡಿದ್ದೇನೆ. ಅದಕ್ಕೆ ನನ್ನ ತಂಡದ ಸಹಕಾರ, ನಿರ್ಮಾಪಕರ ಪ್ರೋತ್ಸಾಹ ಕಾರಣ.

ಚಿತ್ರದಲ್ಲಿ ಸುದೀಪ್‌ ಸಾರ್‌ ಇರುವುದು ಎನರ್ಜಿ ಹೆಚ್ಚಿಸಿದೆ. ಅವರ ಕಾಂಬಿನೇಷನ್‌ನಲ್ಲೂ ಇದ್ದೇನೆ. ಅವರ ಪಾತ್ರ ಮೂಲಕ ಸ್ಫೂರ್ತಿ ಪಡೆದು, ಸಾಧನೆ ಮಾಡುವಂತಹ ಪಾತ್ರ ನನ್ನದು. ಅದನ್ನು ಈಗಲೇ ಹೇಳಿದರೆ ಮಜ ಇರುವುದಿಲ್ಲ. ತೆರೆಯ ಮೇಲೆಯೇ ನೋಡಬೇಕು. 

ಈ ಚಿತ್ರ ನನಗೆ ದೊಡ್ಡ ಜವಾಬ್ದಾರಿ ಹೊರಿಸಿದ್ದು ನಿಜ. "ಫ‌ಸ್ಟ್‌ ರ್‍ಯಾಂಕ್‌ ರಾಜು' ಸಕ್ಸಸ್‌ ಬಳಿಕ ಟೆನನ್‌ನಲ್ಲಿದ್ದೆ. ಕಾರಣ, ಮುಂದೆ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡು ಇದೇ ಯಶಸ್ಸು ಕಾಪಾಡಿಕೊಂಡು ಹೋಗಬೇಕೆಂಬುದು. ಆದರೆ, ಎರಡನೇ ಆಯ್ಕೆಯಲ್ಲಿ ಎಡವಿದೆ. ಎಡವಿದೆ ಅನ್ನುವುದಕ್ಕಿಂತ ಜನರೇ ತಿರಸ್ಕರಿಸಿದರು. ಈ ಚಿತ್ರ ಒಪ್ಪುವಾಗ, ಜವಾಬ್ದಾರಿ ಇತ್ತು. ಕಥೆ ಮೇಲೆ ನಂಬಿಕೆ ಇತ್ತು. ತಂಡದ ಬಗ್ಗೆ ವಿಶ್ವಾಸವಿತ್ತು. ಸೋಲುಂಡ ನೋವಿತ್ತು. ಗೆಲ್ಲಬೇಕೆಂಬ ಹಠವಿತ್ತು. ಹಾಗಾಗಿ, ಜವಾಬ್ದಾರಿಯಿಂದಲೇ ಚಿತ್ರ ಮಾಡಿದ್ದೇವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕುಳಿತು ನೋಡಬಹುದಾದ ಚಿತ್ರವಿದು. ನಾನು ಎಷ್ಟೇ ಚಿತ್ರದಲ್ಲೂ ನಟಿಸಿದರೂ, ಅದನ್ನು ನನ್ನ ಮೊದಲ ಸಿನಿಮಾ ಅಂತಾನೇ ಕೆಲಸ ಮಾಡುತ್ತೇನೆ. ಶ್ರದ್ಧ, ಶ್ರಮದ ಜತೆಗೆ ನಾವು ಆಯ್ಕೆ ಮಾಡಿಕೊಳ್ಳುವ ಕಥೆಗಳು ನಮ್ಮ ಭವಿಷ್ಯವನ್ನು ಬದಲಿಸುತ್ತವೆ ಎಂಬುದನ್ನ ನಾನು ಬಲವಾಗಿ ನಂಬಿದ್ದೇನೆ. 

ಸಿನಿಮಾ ಜತೆಗೆ ನಾನು ಕೃಷಿಯನ್ನೂ ಇಷ್ಟಪಡ್ತೀನಿ. ಚಿಕ್ಕಮಗಳೂರಲ್ಲಿ ತೋಟವಿದೆ. ಅಲ್ಲೊಂದು ರೆಸಾರ್ಟ್‌ ಮಾಡಿದ್ದೇನೆ. ಬಿಡುವಾದಾಗ, 
ಅಲ್ಲಿ ಹೋಗಿ ಬಿಜಿನೆಸ್‌ ನೋಡಿಕೊಂಡು ಬರ್ತೀನಿ. ಸದ್ಯಕ್ಕೆ ತೆಲುಗು, ಕನ್ನಡ ಭಾಷೆಯಲ್ಲೊಂದು ಚಿತ್ರ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ. ಅದು ಬಿಟ್ಟರೆ, ಹೊಸ ವರ್ಷದಲ್ಲೊಂದಷ್ಟು ಹೊಸ ಚಿತ್ರ ಸೆಟ್ಟೇರಲಿವೆ.

ವಿಜಯ್‌ ಭರಮಸಾಗರ

Trending videos

Back to Top