ಮಶ್ರೂಮ್ ಮಂಚೂರಿಯನ್ ಗ್ರೇವಿ
Team Udayavani, Jun 2, 2018, 2:48 PM IST
ಬೇಕಾಗುವ ಸಾಮಗ್ರಿ
.ಮಶ್ರೂಮ್ – 200 ಗ್ರಾಂ
.ಕತ್ತರಿಸಿರುವ ಈರುಳ್ಳಿ – 3
.ಸಣ್ಣದಾಗಿ ಕತ್ತರಿಸಿದ ಕ್ಯಾಪ್ಸಿಕಂ – 1
.ಹಸಿಮೆಣಸಿನ ಕಾಯಿ – 4- 5
.ಕತ್ತರಿಸಿರುವ ಶುಂಠಿ – 1 ಇಂಚು
.ಬೆಳ್ಳುಳ್ಳಿ – 8- 9 ತುಣುಕು
.ವಿನೆಗರ್- ಸ್ವಲ್ಪ
.ಸೋಯಾಸಾಸ್- 2 ಚಮಚ
.ಉಪ್ಪು – ರುಚಿಗೆ ತಕ್ಕಷ್ಟು
.ಸಿಸ್ವನ್ ಸಾಸ್ (Schezwan sauce) – 1ಟೀ ಸ್ಪೂನ್
.ಎಣ್ಣೆ – 2 ಟೀ ಸ್ಪೂನ್
.ಕೆಂಪು ಮೆಣಸಿನ ಪೌಡರ್ – 1 ಚಮಚ
.ಕತ್ತರಿಸಿರುವ ಟೊಮೇಟೋ – 2
.ಅರಿಸಿನ – 1 ಚಮಚ
ಮಾಡುವ ವಿಧಾನ
ಮಶ್ರೂಮ್ ಅನ್ನು ಕತ್ತರಿಸಿ, ಅನಂತರ ಕೆಂಪು ಮೆಣಸಿನ ಪುಡಿ, ಅರಿಸಿನ, ಉಪ್ಪು ಹಾಗೂ 1 ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಮತ್ತು ಅದನ್ನು 20-25 ನಿಮಿಷ ಬಿಟ್ಟುಬಿಡಿ. ಪಾತ್ರೆಯಲ್ಲಿ ಒಂದು ಚಮಚ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಕತ್ತರಿಸಲಾಗಿರುವ ಈರುಳ್ಳಿಯನ್ನು ಹಾಕಿ, ಫ್ರೈ ಮಾಡಿ. ತದನಂತರ ಕತ್ತರಿಸಲಾಗಿರುವ ಶುಂಠಿ, ಬೆಳ್ಳುಳ್ಳಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಹಾಗೂ ಇನ್ನೂ ಸ್ವಲ್ಪ ನಿಮಿಷ ಬೇಯಿಸಿ. ಸ್ವಲ್ಪ ನಿಮಿಷದ ಅನಂತರ ಕ್ಯಾಪ್ಸಿಕಂ ತುಣುಕುಗಳನ್ನು ಸೇರಿಸಿ ಹಾಗೂ 3- 4 ನಿಮಿಷಗಳವರೆಗೆ ಬೇಯಿಸಿ. ರುಚಿಗೆ ತಕ್ಕ ಷ್ಟು ಉಪ್ಪು ಮತ್ತು ಒಂದೆ ರಡು ಹನಿ ವಿನೇ ಗರ್ ಸೇರಿಸಿ. ಬಳಿಕ ಸಿಸ್ವನ್ ಸಾಸ್, ಕತ್ತರಿಸಲಾಗಿರುವ ಟೊಮೇಟೋ, ಹಸಿಮೆಣಸಿನ ಕಾಯಿ, ಸೋಯಾ ಸಾಸ್ ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಹಾಗೂ ಇದರ ಜತೆ ಕತ್ತರಿಸಲಾಗಿರುವ ಮಶ್ರೂಮ್ ಅನ್ನು ಸೇರಿಸಿ. ಕಡಿಮೆ ಉರಿಯಲ್ಲಿ 2- 3 ನಿಮಿಷಗಳವರೆಗೆ ಮಶ್ರೂಮ್ ಮಂಚೂರಿಯನ್ ಗ್ರೇವಿಯನ್ನು ಬೇಯಿಸಿದರೆ ಮಂಚೂರಿಯನ್ ಗ್ರೇವಿ ಸಿದ್ಧ.