ಹಣ ಉಳಿತಾಯಕ್ಕೆ ಪಂಚ ಮಾರ್ಗ

Team Udayavani, Sep 10, 2018, 2:47 PM IST

secptember-14.jpg

ಹಣವಿಲ್ಲದ ಬದುಕನ್ನು ಇಂದು ಊಹಿಸುವುದೂ ಅಸಾಧ್ಯ. ನಾವು ಇವತ್ತಿಗೆ ಮಾತ್ರವಲ್ಲ ನಾಳೆಯ ಬಗ್ಗೆಯೂ ಯೋಚಿಸುತ್ತೇವೆ. ಹೀಗಾಗಿ ಹಣ ಕೈಗೆ ಬಂದ ತತ್‌ ಕ್ಷಣ ಖರ್ಚಿನ ದಾರಿ ತೆರೆದುಕೊಳ್ಳುವುದರಿಂದ ಉಳಿತಾಯಕ್ಕೆ ಇರುವ ನೂರಾರು ದಾರಿಗಳನ್ನು ಹುಡುಕುತ್ತೇವೆ. ಧನ ಉಳಿತಾಯಕ್ಕಾಗಿ ಹಲವು ಮಾರ್ಗಗಳನ್ನು ಹುಡುಕುವುದರ ಜತೆಗೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೇಗೆ ಧನವನ್ನು ನ್ಯಾಯ ಸಮ್ಮತ ಬಳಕೆಗೆ ಒಳಪಡಿಸಬಹುದು ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಹಣ ಉಳಿತಾಯ ಎಂಬುದನ್ನು ಅಭಿಯಾನವನ್ನಾಗಿ ನಾವು ಅನುಕರಿಸಬೇಕು. ಆಗ ಮಾತ್ರ ‘ಸೆಲ್ಫ್ ಮನಿ ಕಂಟ್ರೋಲ್‌’ ಸಾಧ್ಯ.

ವಿವೇಚನಾಯುಕ್ತ ಹೂಡಿಕೆ
ಹಣದ ಉಳಿತಾಯಕ್ಕಾಗಿ ನೀಡಬಹುದಾದ ಮಾರ್ಗಸೂಚಿಗಳ ಪೈಕಿ ಬಹುಶ: ಇದು ಎಲ್ಲಕ್ಕಿಂತಲೂ ಅತ್ಯಂತ ಆಪ್ತವಾದುದು. ಕೆಲವೊಂದು ವ್ಯಾವಹಾರಗಳಿಗೆ ದೊಡ್ಡ ಮೊತ್ತದ ಹಣ ಹೂಡುವ ಅವಶ್ಯಕತೆ ಖಂಡಿತಾ ಕಂಡುಬರುತ್ತದೆ. ಹೊಸ ಉದ್ಯಮ ಆರಂಭಿಸುವವರಾಗಿದ್ದಲ್ಲಿ ಹೂಡಿಕೆಗಾಗಿ ತಜ್ಞರ ಮೊರೆ ಹೋಗುವುದು ಒಳಿತು. ವಿವೇಚನಾ ಬದ್ಧವಾಗಿ ಉಳಿತಾಯ ಮಾಡುವುದರಿಂದ ಸಂಭಾವ್ಯ ಆರ್ಥಿಕ ಅಪಾಯದಿಂದ ಪಾರಾಗಬಹುದು.

ನಿವೃತ್ತ ಜೀವನಕ್ಕಾಗಿ
ನಿವೃತ್ತ ಜೀವನಕ್ಕಾಗಿ ಉದ್ಯೋಗದ ಆರಂಭದಿಂದಲೇ ಉಳಿತಾಯ ಆರಂಭಿಸುವುದು ಅತೀ ಮುಖ್ಯವಾಗಿದೆ. ನಮ್ಮ ಭವಿಷ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಏನನ್ನೂ ಹೇಳಲಾಗದು. ಹಾಗಾಗಿ, ನಿವೃತ್ತ ಜೀವನಕ್ಕಾಗಿ ಹಣ ಉಳಿತಾಯ ಮಾಡುವುದು ನಮ್ಮ ಇಂದಿನ ಅನಿವಾರ್ಯತೆಯಲ್ಲೊಂದಾಗಿದೆ.

ಮಕ್ಕಳ ವಿದ್ಯಾಭ್ಯಾಸಕ್ಕಾಗಿ
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅವರ ವಿದ್ಯಾಭ್ಯಾಸಕ್ಕೆಂದು ಹಣದ ಉಳಿತಾಯವನ್ನು ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಮಗುವಿನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಆ ಹಣವನ್ನು ಅವರ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಬಹುದು.

ತುರ್ತು ಪರಿಸ್ಥಿತಿಗಾಗಿ
ಭವಿಷ್ಯದಲ್ಲಿ ಆಪತ್ತು ಯಾವಾಗ ಬೇಕಾದರೂ ಸಂಭವಿಸಬಹುದು. ಅಗತ್ಯ ಸಂದರ್ಭದಲ್ಲಿ ಅಥವ ಅನಿವಾರ್ಯವಾದ ಸಂದಿಗ್ನತೆಗಳು ತಲೆದೂರಿದರೆ ಖರ್ಚಿಗೆ ಹಣವಿಲ್ಲದೇ ಇನ್ನೊಬ್ಬರ ಬಳಿ ಕೈಚಾಚುವ ಪ್ರಮೇಯ ಸಂಭವಿಸುತ್ತದೆ. ಇದಕ್ಕಾಗಿ ನಾವು ಯೋಜನಾ ಬದ್ಧವಾಗಿ ಆರ್ಥಿಕ ಶಿಸ್ತನ್ನು ರೂಢಿಸಿಕೊಂಡರೆ ಉತ್ತಮ.

ಇತಿಯುಳ್ಳ ಮಿತಿಯಾದ ಖರ್ಚು
ಈ ನಿಯಮವು ಹಣದ ಉಳಿತಾಯದ ವಿಚಾರದಲ್ಲಿ ಅತ್ಯಂತ ಪರಿಣಾಮಕಾರಿ. ಅತಿಯಾದ ಖರ್ಚುಗಳು ಒಟ್ಟು ಅರ್ಥ ವ್ಯವಸ್ಥೆ ಅಥವಾ ಬಜೆಟ್‌ ಅನ್ನು ಕುಂಠಿತಗೊಳಿಸಬಹುದಾಗಿದೆ. ಶಿಸ್ತುಬದ್ಧವಾದ ಆರ್ಥಿಕ ಹಿಡಿತ ಸಂತೋಷದ ಕುಂಟುಂಬಕ್ಕೆ ಮುನ್ನುಡಿಯಾಗಲಿದೆ.

 ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.